MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಎಷ್ಟೇ ಅಣುಬಾಂಬ್ ಬಿದ್ರೂ ಇಲ್ಲಿ ಏನೂ ಆಗಲ್ಲ! ಜಗತ್ತಿನ ಅತ್ಯಂತ ಸೇಫ್ ದೇಶ ಯಾವುದು ಗೊತ್ತಾ?

ಎಷ್ಟೇ ಅಣುಬಾಂಬ್ ಬಿದ್ರೂ ಇಲ್ಲಿ ಏನೂ ಆಗಲ್ಲ! ಜಗತ್ತಿನ ಅತ್ಯಂತ ಸೇಫ್ ದೇಶ ಯಾವುದು ಗೊತ್ತಾ?

Nuclear Fallout Protection: ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಬಂಕರ್‌ಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಇದಾಗಿದೆ. ಹಾಗಾದರೆ, ಜಗತ್ತಿನಲ್ಲಿ ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಯಾವುದು?. 

1 Min read
Author : Ashwini HR
Published : Mar 05 2026, 04:02 PM IST
Share this Photo Gallery
  • FB
  • TW
  • Linkdin
  • Whatsapp
15
ಅತಿ ಹೆಚ್ಚು ಬಂಕರ್‌ ಹೊಂದಿರುವ ದೇಶ
Image Credit : Gemini AI

ಅತಿ ಹೆಚ್ಚು ಬಂಕರ್‌ ಹೊಂದಿರುವ ದೇಶ

ಸ್ವಿಟ್ಜರ್ಲೆಂಡ್ ಅಂದಾಕ್ಷಣ ನೆನಪಾಗುವುದು ಸುಂದರ ಪರ್ವತಗಳು, ಶಾಂತಿಯುತ ನಗರಗಳು. ಆದರೆ ಇಲ್ಲಿನ ಮನೆ, ಶಾಲೆ, ಆಸ್ಪತ್ರೆಗಳ ಕೆಳಗೆ ಬೃಹತ್ ಅಣುಬಾಂಬ್ ನಿರೋಧಕ ಬಂಕರ್‌ಗಳಿವೆ. ಅಂತರಾಷ್ಟ್ರೀಯ ವರದಿಗಳ ಪ್ರಕಾರ,  ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಇದಾಗಿದೆ. ಇದು ದಶಕಗಳ ಕಾಲದ ಭದ್ರತಾ ಯೋಜನೆ ಮತ್ತು ಯುದ್ಧದ ಭಯದಿಂದ ನಿರ್ಮಾಣವಾದ ವ್ಯವಸ್ಥೆ. 

25
ಹೊಸ ಮನೆ ಕಟ್ಟುವಾಗಲೇ ಬಂಕರ್ ನಿರ್ಮಾಣ
Image Credit : X-IDF

ಹೊಸ ಮನೆ ಕಟ್ಟುವಾಗಲೇ ಬಂಕರ್ ನಿರ್ಮಾಣ

1950-60ರ ದಶಕದಲ್ಲಿ ನ್ಯಾಟೋ ಮತ್ತು ವಾರ್ಸಾ ಒಕ್ಕೂಟದ ನಡುವೆ ಶೀತಲ ಸಮರ ತಾರಕಕ್ಕೇರಿತ್ತು. ಯುರೋಪ್‌ನ ಮಧ್ಯದಲ್ಲಿದ್ದ ಸ್ವಿಟ್ಜರ್ಲೆಂಡ್‌ಗೆ ಯುದ್ಧದ ಬಿಸಿ ತಟ್ಟುವ ಭಯವಿತ್ತು. ಹೀಗಾಗಿ, 1963ರಲ್ಲಿ ಸರ್ಕಾರ ಒಂದು ಕಾನೂನು ಜಾರಿಗೆ ತಂದಿತು. ಇದರ ಪ್ರಕಾರ, ಪ್ರತಿಯೊಬ್ಬ ಪ್ರಜೆಗೂ ಅಣುಬಾಂಬ್ ದಾಳಿಯಿಂದ ರಕ್ಷಣೆ ನೀಡುವ ಆಶ್ರಯತಾಣ ಕಡ್ಡಾಯವಾಯಿತು. ಹೊಸ ಮನೆ ಕಟ್ಟುವಾಗ ಬಂಕರ್ ನಿರ್ಮಿಸುವುದು ಅಥವಾ ಸಮೀಪದ ಸಾರ್ವಜನಿಕ ಬಂಕರ್‌ಗೆ ಹಣ ನೀಡುವುದು ಕಡ್ಡಾಯವಾಯಿತು.

Related Articles

Related image1
ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು
Related image2
ಖಮೇನಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡುವಂತೆ ಇಸ್ರೇಲ್‌ ಸೇನೆಗೆ ಆದೇಶ ನೀಡಿದ ನೆತನ್ಯಾಹು!
35
ದಾಳಿಯಾದರೂ ಜನರನ್ನು ರಕ್ಷಿಸುವಂತ ವಿನ್ಯಾಸ
Image Credit : Getty

ದಾಳಿಯಾದರೂ ಜನರನ್ನು ರಕ್ಷಿಸುವಂತ ವಿನ್ಯಾಸ

ಸ್ವಿಟ್ಜರ್ಲೆಂಡ್‌ನಲ್ಲಿ ಸುಮಾರು 90 ಲಕ್ಷ ಜನರಿಗೆ ಆಶ್ರಯ ನೀಡಬಲ್ಲಷ್ಟು ಬಂಕರ್‌ಗಳಿವೆ. ಆದರೆ ದೇಶದ ಜನಸಂಖ್ಯೆ ಕೇವಲ 88 ಲಕ್ಷ. ಅಂದರೆ, ಪ್ರತಿಯೊಬ್ಬರಿಗೂ ಒಂದೊಂದು ಜಾಗ ಖಚಿತ. ಈ ಬಂಕರ್‌ಗಳಲ್ಲಿ ಗಾಳಿ ಶುದ್ಧೀಕರಣ ವ್ಯವಸ್ಥೆ, ದಪ್ಪ ಕಾಂಕ್ರೀಟ್ ಗೋಡೆಗಳು ಮತ್ತು ವಿಕಿರಣವನ್ನು ತಡೆಯುವ ಬಾಗಿಲುಗಳಿವೆ. ಅಣು ದಾಳಿಯಾದರೂ ಜನರನ್ನು ರಕ್ಷಿಸಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
45
ಅಪಾಯಗಳು ಎಂದಿಗೂ ಕಣ್ಮರೆಯಾಗಲ್ಲ
Image Credit : Getty

ಅಪಾಯಗಳು ಎಂದಿಗೂ ಕಣ್ಮರೆಯಾಗಲ್ಲ

1990ರ ದಶಕದಲ್ಲಿ ಸೋವಿಯತ್ ಒಕ್ಕೂಟ ಪತನವಾದ ನಂತರ, ಹಲವು ದೇಶಗಳು ತಮ್ಮ ಬಂಕರ್‌ಗಳನ್ನು ಕೈಬಿಟ್ಟವು. ಆದರೆ ಸ್ವಿಟ್ಜರ್ಲೆಂಡ್ ಮಾತ್ರ ಅವುಗಳನ್ನು ಉಳಿಸಿಕೊಂಡಿತು. ಅಪಾಯಗಳು ಎಂದಿಗೂ ಕಣ್ಮರೆಯಾಗುವುದಿಲ್ಲ, ಅವು ಕೇವಲ ರೂಪ ಬದಲಿಸುತ್ತವೆ ಎಂದು ಸ್ವಿಸ್ ಅಧಿಕಾರಿಗಳು ನಂಬಿದ್ದರು. ಅಣು ಅಪಘಾತ, ಭಯೋತ್ಪಾದಕ ದಾಳಿಗಳಂತಹ ಹೊಸ ಬೆದರಿಕೆಗಳಿಗಾಗಿ ಇವುಗಳನ್ನು ರೆಡಿ ಮಾಡಿದರು. 

55
ತಮ್ಮ ಬಂಕರ್ ಎಲ್ಲಿದೆ?
Image Credit : our own

ತಮ್ಮ ಬಂಕರ್ ಎಲ್ಲಿದೆ?

ಸದ್ಯಕ್ಕೆ ಯುದ್ಧದ ಅಪಾಯವಿಲ್ಲದ ಕಾರಣ, ಈ ಬಂಕರ್‌ಗಳನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಅನೇಕರು ಇವುಗಳನ್ನು ಸ್ಟೋರ್ ರೂಮ್, ವೈನ್ ಸಂಗ್ರಹ ಕೊಠಡಿ, ಮತ್ತು ಸರ್ಕಾರಿ ದಾಖಲೆಗಳ ಕೋಣೆಗಳಾಗಿ ಬಳಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾ-ಉಕ್ರೇನ್ ಯುದ್ಧದ ನಂತರ, ಸ್ವಿಸ್ ಜನರಲ್ಲಿ ಈ ಬಂಕರ್‌ಗಳ ಬಗ್ಗೆ ಮತ್ತೆ ಆಸಕ್ತಿ ಹೆಚ್ಚಾಗಿದೆ. ತಮ್ಮ ಬಂಕರ್ ಎಲ್ಲಿದೆ ಎಂದು ಹಲವರು ಈಗ ಹುಡುಕುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಭಾರತ ಸುದ್ದಿ
ಇರಾನ್
ಅಮೇರಿಕಾ

Latest Videos
Recommended Stories
Recommended image1
87 ಜನರ ಬಲಿ ಪಡೆದ ಐರೀಸ್ ದೇನಾ ಮೇಲಿನ ದಾಳಿಗಾಗಿ ಅಮೆರಿಕಾ ತೀವ್ರವಾಗಿ ವಿಷಾದಿಸಲಿದೆ: ಇರಾನ್
Recommended image2
ಎಲ್ಲಿವೆ ಇರಾನ್‌ ಮಿತ್ರ ರಾಷ್ಟ್ರಗಳು? ರಷ್ಯಾ, ಚೀನಾ ಯುದ್ಧದಿಂದ ಅಂತರ ಕಾಯ್ದುಕೊಂಡಿದ್ದೇಕೆ?
Recommended image3
Now Playing
ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
Related Stories
Recommended image1
ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು
Recommended image2
ಖಮೇನಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡುವಂತೆ ಇಸ್ರೇಲ್‌ ಸೇನೆಗೆ ಆದೇಶ ನೀಡಿದ ನೆತನ್ಯಾಹು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved