1947ರ ವಿಭಜನೆಯ ನಂತರ ಇದೇ ಮೊದಲ ಬಾರಿಗೆ, ಪಾಕಿಸ್ತಾನದ ಲಾಹೋರ್ ವಿಶ್ವವಿದ್ಯಾನಿಲಯವು ಸಂಸ್ಕೃತ ಅಧ್ಯಯನ ಕೋರ್ಸ್ ಅನ್ನು ಮರು ಪ್ರಾರಂಭಿಸಿದೆ. ಇದರ ಹಿಂದಿನ ಉದ್ದೇಶ ಏನು ಡಿಟೇಲ್ ಸ್ಟೋರಿ ಇಲ್ಲಿದೆ.
ಸಂಸ್ಕೃತ ಕೋರ್ಸ್ ಶುರು ಮಾಡಿದ ಪಾಕಿಸ್ತಾನ:
1947ರಲ್ಲಿ ಭಾರತ ಪಾಕಿಸ್ತಾನ ವಿಭಜನೆಯಾದ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನವು ಪಾಕಿಸ್ತಾನದ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಅಧ್ಯಯನವನ್ನು ಮರುಸ್ಥಾಪಿಸುವ ನಿರ್ಧಾರ ಮಾಡಿದೆ. ಇತ್ತೀಚೆಗಷ್ಟೇ ಲಾಹೋರ್‌ನ ಲಾಹೋರ್ ಯುನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್ ಸಂಸ್ಕೃತ ಅಧ್ಯಯನ ಕೋರ್ಸ್‌ನ್ನು ಶುರು ಮಾಡಿದೆ. ಪಾಕಿಸ್ತಾನದಲ್ಲಿ ಭಗವದ್ಗೀತೆ ಹಾಗೂ ಮಹಾಭಾರತದಲ್ಲಿ ವಿದ್ವಾಂಸರನ್ನು ಸೃಷ್ಟಿ ಮಾಡುವುದು ಇದರ ಹಿಂದಿನ ಉದ್ದೇಶ ಎಂದು ವರದಿಯಾಗಿದೆ.
ಈ ಕೋರ್ಸ್‌ನ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯ ಸುಧಾರಿತ ವ್ಯಾಕರಣ, ಸಂಸ್ಕೃತ ಅಕ್ಷರಗಳು, ಉಚ್ಛಾರ ಹಾಗೂ ವಾಕ್ಯ ರಚನೆ, ಉರ್ದು ಹಾಗೂ ಹಿಂದಿಯ ಜೊತೆಗೆ ಸಂಸ್ಕೃತಕ್ಕಿರುವ ಸಂಬಂಧ, ಪುರಾತನ ಪುಸ್ತಕಗಳು ಹಾಗೂ ಹಸ್ತಪ್ರತಿಗಳು, ಭಗವದ್ಗೀತೆ ಹಾಗೂ ಮಹಾಭಾರತದ ಪ್ರಮುಖ ಭಾಗಗಳು, ವೈದಿಕ ಸಾಹಿತ್ಯದ ಮೂಲ ಜ್ಞಾನ ಇವಿಷ್ಟನ್ನು ಕಲಿಸಿಕೊಡಲಾಗುತ್ತದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಲಾಹೋರ್ ವಿಶ್ವವಿದ್ಯಾನಿಲಯದ ಡಾ ಅಲಿ ಉಸ್ಮಾನ್ ಖಾಸ್ಮಿ, ಡಾ ಶಹೀದ್ ರಶೀದ್ ಅವರು ಈ ಸಂಸ್ಕೃತ ಕೋರ್ಸ್‌ಗಳ ಮುಂದಾಳತ್ವವನ್ನು ವಹಿಸಿಕೊಂಡಿದ್ದು, ಭಾರತೀಯ ಭಾಷೆಯಾದ ಸಂಸ್ಕೃತವೂ ಸಾಂಸ್ಕೃತಿಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಸಂಸ್ಕೃತವೂ ಭಾರತ ಹಾಗೂ ಪಾಕಿಸ್ತಾನವೂ ಹಂಚಿಕೊಂಡಿರುವ ಸಾಂಸ್ಕೃತಿಕ ಪರಂಪರೆಯ ಮಹತ್ವದ ಭಾಗವಾಗಿದೆ. ಹಾಗೂ ಇದು ಪ್ರಾಚೀನ ಪುಸ್ತಕಗಳನ್ನುಅರಿತುಕೊಳ್ಳುವುದಕ್ಕೆ ಬಹಳ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ಜನಾಂಗದ ಮದುವೆಯ ವಿಚಿತ್ರ ಸಂಪ್ರದಾಯ ಕೇಳಿದ್ರೆ ನೀವು ಮದ್ವೆಗೂ ಮೊದಲೇ ಎಸ್ಕೇಪ್ ಆಗ್ತೀರಿ
ಪ್ರಸ್ತುತ ಪಾಕಿಸ್ತಾನದಲ್ಲಿರುವ ಪುರಾತನ ಸಂಸ್ಕೃತ ಹಸ್ತಪ್ರತಿಗಳು ಹಾಗೂ ಪುಸ್ತಕಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಸ್ಥಳೀಯವಾಗಿ ಸಂಸ್ಕೃತ ವಿದ್ವಾಂಸರನ್ನು ಸೃಷ್ಟಿ ಮಾಡುವುದು ಈ ಸಂಸ್ಕೃತ ಕೋರ್ಸ್ ಹಿಂದಿನ ಉದ್ದೇಶವಾಗಿದೆ. ಈ ಬಗ್ಗೆ ನಿಮಗೇನನಿಸುತ್ತಿದೆ. ಒಂದು ಕಾಲದಲ್ಲಿ ಪಾಕಿಸ್ತಾನ, ಅಪ್ಘಾನಿಸ್ತಾನವೂ ಭಾರತದ ಭಾಗವಾಗಿತ್ತು ಹೀಗಿರುವಾಗ ಅಲ್ಲಿನ ಜನ ಜೀವನದಲ್ಲೂ ಹಿಂದೊಮ್ಮೆ ಸಂಸ್ಕೃತವೂ ಹಾಸು ಹೊಕ್ಕಾಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮಹಾಭಾರತದಲ್ಲಿ ಉಲ್ಲೇಖವಾಗಿರುವ ಗಾಂಧಾರವನ್ನು ಈಗಿನ ಅಪ್ಘಾನಿಸ್ತಾನ ಎನ್ನಲಾಗುತ್ತದೆ.
ಇದನ್ನೂ ಓದಿ: ಭಾರತೀಯ ಸ್ಲೀಪರ್ ಕೋಚ್ ಬಸ್‌ನ ಐಷಾರಾಮಿ ಸವಲತ್ತಿಗೆ ಫಿದಾ ಆದ ವಿದೇಶಿಗ: ವೀಡಿಯೋ ವೈರಲ್
