ಪಿಒಕೆ ಅಭಿವೃದ್ಧಿಗೆ ಪಾಕ್ ಸರ್ಕಾರದಿಂದ 2300 ಕೋಟಿ
ಬೆಲೆ ಏರಿಕೆ ಹಾಗೂ ವಿವಿಧ ಸವಲತ್ತುಗಳಿಂದ ಜನರು ವಂಚಿತ ಆಗಿರುವುದನ್ನು ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ನಡೆಸಿದ ಹೋರಾಟಕ್ಕೆ ಪಾಕಿಸ್ತಾನ ಸರ್ಕಾರ ಸೋಮವಾರ ಕೊಂಚ ಮಣಿದಿದೆ. ಆಕ್ರಮಿತ ಕಾಶ್ಮಿರದ ಜನರ ಬೇಡಿಕೆಗಳನ್ನು ಈಡೇರಿಸಲು 2300 ಕೋಟಿ ರು. ಪ್ಯಾಕೇಜ್ ಅನ್ನು ಪ್ರಧಾನಿ ಶಹಬಾಜ್ ಷರೀಫ್ ಘೋಷಿಸಿದ್ದಾರೆ.
ಇಸ್ಲಾಮಾಬಾದ್ : ಬೆಲೆ ಏರಿಕೆ ಹಾಗೂ ವಿವಿಧ ಸವಲತ್ತುಗಳಿಂದ ಜನರು ವಂಚಿತ ಆಗಿರುವುದನ್ನು ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ನಡೆಸಿದ ಹೋರಾಟಕ್ಕೆ ಪಾಕಿಸ್ತಾನ ಸರ್ಕಾರ ಸೋಮವಾರ ಕೊಂಚ ಮಣಿದಿದೆ. ಆಕ್ರಮಿತ ಕಾಶ್ಮಿರದ ಜನರ ಬೇಡಿಕೆಗಳನ್ನು ಈಡೇರಿಸಲು 2300 ಕೋಟಿ ರು. ಪ್ಯಾಕೇಜ್ ಅನ್ನು ಪ್ರಧಾನಿ ಶಹಬಾಜ್ ಷರೀಫ್ ಘೋಷಿಸಿದ್ದಾರೆ.
ಆದರೂ ಜನಾಕ್ರೋಶದಿಂದ ಬೆಂದು ಹೋಗಿರುವ ಆಕ್ರಮಿತ ಕಾಶ್ಮೀರದಲ್ಲಿ ಸೋಮವಾರವೂ ತ್ವೇಷಮಯ ಪರಿಸ್ಥಿತಿ ನೆಲೆಸಿತ್ತು. ಮುಜಫ್ಫರಾಬಾದ್, ಮೀರ್‌ಪುರ, ರಾವಲ್ ಕೋಟ್, ಪೂಂಛ್ ಸೇರಿ ಅನೇಕ ಕಡೆ ಬಂದ್ ವಾತಾವರಣವಿತ್ತು. ಅಲ್ಲಲ್ಲಿ ಹಿಂಸಾಚಾರ. ಸಂಘರ್ಷಗಳು ವರದಿಯಾಗಿವೆ.+ ಭಾನುವಾರ ಸಂಭವಿಸಿದ ಭದ್ರತಾ ಪಡೆ-ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಇಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದ. 100 ಮಂದಿ ಗಾಯಗೊಂಡಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾರಿತು ತಿರಂಗ, ಪಾಕ್ ಸೇನೆ ಮೇಲೆ ಸ್ಥಳೀಯರ ದಾಳಿ!
ಪ್ಯಾಕೇಜ್ ಘೋಷಣೆ:
ಪ್ರತಿಭಟನೆಯಿಂದ ಕಂಗೆಟ್ಟ ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಸೋಮವಾರ ಆಕ್ರಮಿತ ಕಾಶ್ಮೀರದ ಸರ್ಕಾರ ಹಾಗೂ ಕಾಶ್ಮೀರಿ ಪ್ರತಿಭಟನಾಕಾರ ನಾಯಕರ ಜತೆ ಸಂಧಾನ ಸಭೆ ನಡೆಸಿದರು. ಈ ವೇಳೆ ಪ್ರತಿಭಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಆಕ್ರಮಿತ ಕಾಶ್ಮೀರದ ಜನರ ಬೇಡಿಕೆಗಳ ಈಡೇರಿಕೆಗೆ ಕೂಡಲೇ 2300 ಕೋಟಿ ಪಾಕಿಸ್ತಾನಿ ರು.ಗಳನ್ನು ನೀಡುವುದಾಗಿ ಘೋಷಿಸಿದರು. ಸರ್ಕಾರದ ಘೋಷಣೆಯಿಂದ ಆಕ್ರಮಿತ ಕಾಶ್ಮೀರದ ನಾಯಕರು ತೃಪ್ತರಾಗಿದ್ದಾರೆ ಎಂದು ಪಾಕ್ ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ.
ಪಾಕ್ ಸೇನೆ ಗುಂಡಿಗೆ 4 ಹೋರಾಟಗಾರರು ಬಲಿ
ಮುಜಫ್ಫರಾಬಾದ್: ಪಿಒಕೆಯ ಮುಜಫ್ಫರಾಬಾದ್‌ನಲ್ಲಿ ಪಾಕಿಸ್ತಾನದ ಅರೆಸೇನಾ ಪಡೆಗಳು, ಕಾಶ್ಮೀರಿ ಪ್ರತಿಭಟನಾಕಾರರ ಮೇಲೆ ಭಾರಿ ಪ್ರಮಾಣದ ಗೋಲಿಬಾರ್ ನಡೆಸಿವೆ. ಹೀಗಾಗಿ 4 ಕಾಶ್ಮೀರಿಗಳು ಮೃತರಾಗಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರತಿಭಟನಾಕಾರರು ಶಾಂತ ಪ್ರತಿಭಟನೆ ನಡೆಸುತ್ತಿರುವ ವೇಳೆ ಅರೆಸೇನಾ ಯೋಧರು ಮನಬಂದಂತೆ ಗುಂಡಿನ ಮಳೆಗರೆದಿದ್ದಾರೆ ಎನ್ನಲಾಗಿದೆ. ಇದರ ವಿಡಿಯೋಗಳು ವೈರಲ್ ಆಗಿವೆ.
ಸಿಯಾಚಿನ್ ಸನಿಹ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ರಸ್ತೆ ನಿರ್ಮಾಣ, ಸ್ಯಾಟಲೈಟ್ ದೃಶ್ಯದಿಂದ ಖಚಿತ