ಪಾಕಿಸ್ತಾನ ಸೇನೆಯೇ ನಿಜವಾದ ಭಯೋತ್ಪಾದಕರು ಎಂದ ವಕೀಲೆಯ ಬಂಧನ
ಪಾಕಿಸ್ತಾನ ಸೇನೆಯನ್ನು ಭಯೋತ್ಪಾದಕರು ಎಂದು ಕರೆದಿದ್ದ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಇಮಾನ್ ಮಝರಿಯನ್ನು ಪಾಕಿಸ್ತಾನ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ರಾವಲ್ಪಿಂಡಿ: ಪಾಕಿಸ್ತಾನ ಸೇನೆಯನ್ನು ಭಯೋತ್ಪಾದಕರು ಎಂದು ಕರೆದಿದ್ದ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಇಮಾನ್ ಮಝರಿಯನ್ನು ಪಾಕಿಸ್ತಾನ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಒಮ್ಮೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಮತ್ತೆ ಮಝರಿ ಮರು ಬಂಧನವಾಗಿದೆ. ಸೇನೆ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಇಮಾನ್ ಮಝರಿಯನ್ನು ಮೊದಲಿಗೆ ಪೊಲೀಸರು ಬಂಧಿಸಿದ್ದರು, ಮಝರಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದ್ದು, ನಂತರ ಇಸ್ಲಾಮಾಬಾದ್‌ನ ಭಯೋತ್ಪಾದನ ವಿರೋಧಿ ನ್ಯಾಯಾಲಯ (ATC)ಮಝರಿ ಅವರಿಗೆ ಜಾಮೀನು ನೀಡಿತ್ತು. ಜಾಮೀನಿನ ನಂತರ ಮಝರಿ, ರಾವಲ್ಪಿಂಡಿಯಲ್ಲಿರುವ ಅದಿಲಾ ಜೈಲ್‌ನಿಂದ ಬಿಡುಗಡೆಯಾಗಿದ್ದರು. ಆದರೆ ಜೈಲು ಮುಂದೆಯೇ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಇಮಾನ್ ಮಝರಿ ವಿರುದ್ಧ ಬಾರ ಕಹು ಪೊಲೀಸ್ ಸ್ಟೇಷನ್‌ನಲ್ಲಿ ಭಯೋತ್ಪಾದನೆ ಪ್ರಕರಣ ದಾಖಲಾಗಿತ್ತು. ಇಮಾನ್ ಮಝರಿ ಪಾಕಿಸ್ತಾನದ ಮಾನವ ಹಕ್ಕುಗಳ ಇಲಾಖೆಯ ಮಾಜಿ ಸಚಿವ ಶಿರೀನ್ ಮಝರಿ ಪುತ್ರಿಯಾಗಿದ್ದಾರೆ. ಜನಾಂಗೀಯ ಪಶ್ತೂನ್ ಸಮುದಾಯದ ಹಕ್ಕುಗಳನ್ನು ಪ್ರತಿಪಾದಿಸುವ, ಪಶ್ತುನ್ ತಹಫೂಜ್ ಚಳುವಳಿ(PTM) ಎಂಬ ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ ಎರಡು ದಿನಗಳ ನಂತರ ಇಮಾನ್ ಮಝರಿ ಬಂಧನವಾಗಿದೆ.
ಚಿನ್ನ ಗೆದ್ದ ನೀರಜ್‌ನ ಬಂಗಾರ ನಡೆ, ಧ್ವಜರಹಿತ ಪಾಕ್‌ನ ಅರ್ಶದ್ ಕರೆದು ತಿರಂಗ ಪಕ್ಕಕ್ಕೆ ನಿಲ್ಲಿಸಿದ ಚೋಪ್ರಾ!
ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿದ ಈ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಇಮಾನ್ ಮಝರಿ (Imann Mazari) ಪಾಕಿಸ್ತಾನದ ಮಿಲಿಟರಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಂತರ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿ ದೇಶದ ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಿದ್ದಕ್ಕೆ ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಅವರು ಕಾನೂನು ಬಾಹಿರ ಸಭೆ, ದೇಶ ವಿರೋಧಿ ರಾಜ್ಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ದೂರಲಾಗಿದೆ. ಆಗಸ್ಟ್ 21 ರಂದು ಎಟಿಸಿ ಇಮಾನ್ ಮಝರಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿತ್ತು. ಆಗಸ್ಟ್ 24 ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸ್ ಕಸ್ಡಡಿ ವಿಸ್ತರಿಸಬೇಕು ಎಂಬ ಎಟಿಸಿ ಮನವಿಯನ್ನು ತಿರಸ್ಕರಿಸಿ ಆಕೆಯನ್ನು ರಾವಲ್ಪಿಂಡಿಯ (Rawalpindi) ಅಡಿಯಲಾ ಜೈಲಿಗೆ (Adiala Jail) ಕಳುಹಿಸಿತ್ತು. ನಂತರ ಆಕೆಗೆ ಜಾಮೀನನ್ನು ನೀಡಲಾಗಿತ್ತು. ಆದರೆ ಇದಾಗಿ ಗಂಟೆಗಳ ನಂತರ ಮಝರಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ನನ್ನ ದೇಶ ಈ ಸಾಧನೆ ಮಾಡಲು ಇನ್ನೂ 3 ದಶಕಗಳೇ ಬೇಕು: ಪಾಕ್ ನಟಿ ಶೆಹರ್
ಮಝರಿ ಬಂಧನವನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (Human Rights Commission of Pakistan) ತೀವ್ರವಾಗಿ ಖಂಡಿಸಿದ್ದು, ಆಕೆಯನ್ನು ಯಾವುದೇ ಶರತ್ತಿಲ್ಲದೇ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದೆ. ಅಲ್ಲದೇ ಇಸ್ಲಾಮಾಬಾದ್ ಪೊಲೀಸರ (Islamabad police)ಈ ಕ್ರಮ ಒಪ್ಪಿಕೊಳ್ಳಲಾಗದು ಎಂದು ಹೇಳಿದೆ.