ಚಿನ್ನ ಗೆದ್ದ ನೀರಜ್‌ನ ಬಂಗಾರ ನಡೆ, ಧ್ವಜರಹಿತ ಪಾಕ್‌ನ ಅರ್ಶದ್ ಕರೆದು ತಿರಂಗ ಪಕ್ಕಕ್ಕೆ ನಿಲ್ಲಿಸಿದ ಚೋಪ್ರಾ!

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 88.17 ದೂರ ಎಸೆದು ಚಿನ್ನ ಗೆದ್ದು ಕ್ರೀಡಾಂಗಣದಲ್ಲಿ ನೀರಜ್ ಸಂಭ್ರಮಿಸಿದ್ದಾರೆ. ತಿರಂಗ ಹಿಡಿದು ಸಂಭ್ರಮಿಸುತ್ತಿದ್ದ ನೀರಜ್, ಪಾಕಿಸ್ತಾನದ ಸ್ಪರ್ಧಿ, ಬೆಳ್ಳಿ ಗೆದ್ದ ಅರ್ಶದ್ ನದೀಮ್ ಕರೆದು ತ್ರಿವರ್ಣ ಧ್ವಜ ಪಕ್ಕದಲ್ಲಿ ನಿಲ್ಲಿಸಿ ಪೋಸ್ ನೀಡಿದ್ದಾರೆ. ನೀರಜ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Neeraj Chopra invite Pakistan Arshad nadeem for celebration Golden athlete act goes viral ckm

ಬುಡಾಪೆಸ್ಟ್(ಆ.28) ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಜಾವೆಲಿನ್‌ ಎಸೆತ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ. ಚಾಂಪಿಯನ್ ನೀರಜ್ ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಇತಿಹಾಸ ರಚಿಸಿದ್ದಾರೆ. ಇನ್ನು ನೀರಜ್‌ಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಪಾಕಿಸ್ತಾನದ ಅರ್ಶದ್ ನದೀಮ್ ಬೆಳ್ಳಿ ಗೆದ್ದುಕೊಂಡಿದ್ದಾರೆ. ಜೆಕ್ ಗಣರಾಜ್ಯದ ಜಾಕೂಬ್ ಕಂಚಿನ ಪದಕ ಸಾಧನೆ ಮಾಡಿದ್ದಾರೆ. ಗೆಲುವಿನ ಬಳಿಕ ನೀರಜ್ ಚೋಪ್ರಾ ತ್ರಿವರ್ಣ ಧ್ವಜ ಹಿಡಿದು ಸಂಭ್ರಮ ಆಚರಿಸಿದ್ದಾರೆ. ಇತ್ತ ನೀರಜ್ ಸಂಭ್ರಮದ ಜೊತೆಗೆ ಜಾಕೂಬ್ ಕೂಡ ತಮ್ಮ ದೇಶದ ಧ್ವಜ ಹಿಡಿದು ಸಾಥ್ ನೀಡಿದ್ದಾರೆ. ಇದೇ ವೇಳೆ ನೀರಜ್ ಚೋಪ್ರಾ, ಪಾಕಿಸ್ತಾನದ ಅರ್ಶದ್ ನದೀಮ್‌ನನ್ನು ಪಕ್ಕಕ್ಕೆ ಕರೆದಿದ್ದಾರೆ. ಬಳಿಕ ತಿರಂಗ ಪಕಕ್ಕೆ ನಿಲ್ಲಿಸಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ನೀರಜ್ ಚೋಪ್ರಾ ಚಿನ್ನ ಗೆದ್ದ ಬೆನ್ನಲ್ಲೇ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಆದರೆ ಬೆಳ್ಳಿ ಗೆದ್ದ ಪಾಕಿಸ್ತಾನದ ಅರ್ಶದ್ ನದೀಮ್ ಧ್ವಜ ರಹಿತರಾಗಿದ್ದರು. ನೀರಜ್ ಹಾಗೂ ಜಾಕೂಬ್ ಸಂಭ್ರಮಿಸುತ್ತಿದ್ದರೆ, ಅರ್ಶದ್ ಮಾತ್ರ ಕೆಲ ದೂರಲ್ಲಿ ನಿಂತು ಈ ಸಂಭ್ರಮ ನೋಡುತ್ತಿದ್ದರು. ತಕ್ಷಣವೇ ನೀರಜ್ ಚೋಪ್ರಾ, ಅರ್ಶದ್ ನದೀಮ್‌ನನ್ನು ಕರೆದಿದ್ದಾರೆ. 

Neeraj Chopra: ಚಿನ್ನದ ಹುಡುಗ ನೀರಜ್‌ ಚೋಪ್ರಾ ಈಗ ‘ವಿಶ್ವ’ ವಿಜೇತ!

ನೀರಜ್ ಚೋಪ್ರಾ ಕರೆಗೆ ಓಗೊಟ್ಟ ಅರ್ಶದ್ ನದೀಮ್ ನೀರಜ್ ಚೋಪ್ರಾ ಬಳಿ ಬಂದಿದ್ದಾರೆ. ಈ ವೇಳೆ ಧ್ವಜ ಎಲ್ಲಿ ಎಂದು ನೀರಜ್ ಕೇಳಿದ್ದಾರೆ. ಇದೇ ವೇಳೆ ಅರ್ಶದ್ ನದೀಮ್ ಧ್ವಜ ಕೊಡುವಂತೆ ತಮ್ಮ ಸಹಾಯಕ ಕೋಚ್‌ಗೆ ಮನವಿ ಮಾಡಿದ್ದಾರೆ. ಆದರೆ ತಕ್ಷಣಕ್ಕೆ ಪಾಕಿಸ್ತಾನ ಧ್ವಜ ಸಿಕ್ಕಿಲ್ಲ. ಇದೇ ವೇಳೆ ನೀರಜ್ ಚೋಪ್ರಾ, ತ್ರಿವರ್ಣ ಧ್ವಜದಡಿಯಲ್ಲಿ ಪಾಕಿಸ್ತಾನದ ಸ್ಪರ್ಧಿ ಅರ್ಶದ್ ನದೀಮ್ ನಿಲ್ಲಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ನೀರಜ್ ಚೋಪ್ರಾ ಚಿನ್ನದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

 

 

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿರುವ ನೀರಜ್‌, ಚಿನ್ನ ಗೆಲ್ಲುವ ಫೇವರಿಟ್‌ ಕ್ರೀಡಾಪಟುವಾಗಿದ್ದರು. ಎಲ್ಲರ ನಿರೀಕ್ಷೆಯಂತೆ ನೀರಜ್ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದಾರೆ. ನೀರಜ್ ಚೋಪ್ರಾಗೆ ಚೆಕ್‌ ಗಣರಾಜ್ಯದ ಜಾಕುಬ್‌ ವಡ್ಲೆಚ್‌, ಜರ್ಮನಿಯ ಜೂಲಿಯನ್‌ ವೆಬ್ಬರ್‌, ಪಾಕಿಸ್ತಾನದ ನದೀಂ ಅರ್ಷದ್‌ರಿಂದ ಕಠಿಣ ಸ್ಪರ್ಧೆ ನೀಡಿದ್ದರು.  

ಬೆಂಗ್ಳೂರಲ್ಲಿ ಚಿನ್ನದ ಹುಡುಗ: ಒಂದು ವೈಫಲ್ಯದಿಂದ ನಿರಾಶೆಗೊಳಗಾಗಬೇಡಿ ಮಕ್ಕಳಿಗೆ ನೀರಜ್ ಚೋಪ್ರಾ ಕಿವಿಮಾತು..!

ಒಲಿಂಪಿಕ್ಸ್‌, ಡೈಮಂಡ್ ಲೀಗ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿ ಚಿನ್ನ ಗೆದ್ದಿರುವ ನೀರಜ್‌ ಚೋಪ್ರಾಗೆ ಇದೀಗ ಮೊದಲ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದಾರೆ. ಕಳೆದ ಭಾರಿ ನೀರಜ್ ಬೆಳ್ಳಿಗೆ ತಪ್ತಿಪಟ್ಟುಕೊಂಡಿದ್ದರು.  

Latest Videos
Follow Us:
Download App:
  • android
  • ios