ಭಾರತದ ಚಂದ್ರಯಾನ 3 ಸಾಧನೆ ವಿಶ್ವವನ್ನೇ ಬೆರಗುಗೊಳಿಸಿದೆ.  ವಿಶ್ವದೆಲ್ಲೆಡೆಯ ರಾಷ್ಟ್ರಗಳು ಭಾರತದ ಸಾಧನೆಗೆ ಶುಭಾಶಯದ ಮಹಾಪೂರವನ್ನೇ ಹರಿಸುತ್ತಿವೆ. ಹಾಗೆಯೇ ಪಾಕಿಸ್ತಾನದ ನಟಿ ಶೆಹರ್ ಶಿನ್ವಾರಿ (Shehar Shinwari) ಕೂಡ ಭಾರತದ ಚಂದ್ರಯಾನ 3 ಯಶಸ್ವಿಯಾಗಿರುವುದಕ್ಕೆ ಭಾರತಕ್ಕೆ ಶುಭ ಹಾರೈಸಿದ್ದಾರೆ. 

ಕರಾಚಿ: ಭಾರತದ ಚಂದ್ರಯಾನ 3 ಸಾಧನೆ ವಿಶ್ವವನ್ನೇ ಬೆರಗುಗೊಳಿಸಿದೆ. ವಿಶ್ವದೆಲ್ಲೆಡೆಯ ರಾಷ್ಟ್ರಗಳು ಭಾರತದ ಸಾಧನೆಗೆ ಶುಭಾಶಯದ ಮಹಾಪೂರವನ್ನೇ ಹರಿಸುತ್ತಿವೆ. ಇತ್ತ ಶತ್ರು ರಾಷ್ಟ್ರ ನೆರೆಯ ಪಾಕಿಸ್ತಾನದ ಜನರು ಕೂಡ ಇಸ್ರೋ ಸಾಧನೆಗೆ ಕೌತುಕರಾಗಿದ್ದರು. ಪಾಕಿಸ್ತಾನದ ಅನೇಕ ಗಣ್ಯರು ಕೂಡ ಈಗ ಇಸ್ರೋ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ನಟಿ ಶೆಹರ್ ಶಿನ್ವಾರಿ (Shehar Shinwari) ಕೂಡ ಭಾರತದ ಚಂದ್ರಯಾನ 3 ಯಶಸ್ವಿಯಾಗಿರುವುದಕ್ಕೆ ಭಾರತಕ್ಕೆ ಶುಭ ಹಾರೈಸಿದ್ದಾರೆ. 

ಭಾರತದೊಂದಿಗಿನ ಎಲ್ಲಾ ಶತ್ರುತ್ವವನ್ನು ಹೊರಗಿಟ್ಟು, ನಾನು ನಿಜವಾಗಿಯೂ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿ ಶುಭಹಾರೈಸುತ್ತಿದ್ದೇನೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಅಂತರ ಮೊದಲಿಗಿಂತಲೂ ಹಲವು ಪಟ್ಟು ವಿಸ್ತರಿಸಲ್ಪಟ್ಟಿದೆ. ಎಷ್ಟು ವಿಸ್ತರಿಸಲ್ಪಟ್ಟಿದೆ ಎಂದರೆ ಈಗಿನ ಪಾಕಿಸ್ತಾನ ಇಂತಹ ಸಾಧನೆ ಮಾಡಲು ಇನ್ನೂ ಕನಿಷ್ಠ ಎರಡರಿಂದ ಮೂರು ದಶಕಗಳೇ ಬೇಕು ಎಂದು ನಟಿ ಶೆಹರ್ ಶಿನ್ವಾರಿ ಹೇಳಿದ್ದಾರೆ. ದುರಾದೃಷ್ಟವಶಾತ್ ಇಂದಿನ ನಮ್ಮ ದುಸ್ಥಿತಿಗೆ ನಾವೇ ಕಾರಣ ಹೊರತು ಬೇರಾರೂ ಅಲ್ಲ ಎಂದು ನಟಿ ಹೇಳಿದ್ದಾರೆ. 

ಈ ಮೂಲಕ ಭಾರತದ ತಂತ್ರಜ್ಞಾನಕ್ಕೆ ಹೋಲಿಸಿದರೆ ತನ್ನ ದೇಶ ಎಷ್ಟು ಹಿಂದೆ ಉಳಿದಿದೆ ಎಂಬುದನ್ನು ನಟಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವಿಟ್ ಮಾಡಿರುವ ಶೆಹರ್, ಭಾರತದ ಬಾಹ್ಯಾಕಾಶ ಸಂಸ್ಥೆಗೆ ಶುಭಾಶಯ ತಿಳಿಸಿದ್ದಾರೆ. ನಿನ್ನೆ ಭಾರತದ ಚಂದ್ರಯಾನ್ 3 ನೌಕೆಯ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. 

Scroll to load tweet…

ಹಮ್ ಅಲ್‌ರೆಡಿ ಚಾಂದ್ ಪೇ ಹೈ: ತನ್ನ ದೇಶವ ಅಣಕಿಸುತ್ತ ಎಲ್ಲರ ನಕ್ಕು ನಗಿಸಿದ ಪಾಕಿಸ್ತಾನಿ ಯುವಕ

ನಿನ್ನೆ ಪಾಕಿಸ್ತಾನದ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಮಾಜಿ ಸಚಿವ ಫಹಾದ್ ಚೌಧರಿ ಪಾಕಿಸ್ತಾನ ಸರ್ಕಾರಕ್ಕೆ ಭಾರತದ ಚಂದ್ರಯಾನ 3 ಕಾರ್ಯಕ್ರಮವನ್ನು ನ್ಯಾಷನಲ್ ಚಾನೆಲ್‌ನಲ್ಲಿ (National Channel) ನೇರ ಪ್ರಸಾರ ಮಾಡುವಂತೆ ಮನವಿ ಮಾಡಿದ್ದರು. ಇದು ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಸೃಷ್ಟಿಸಿತ್ತು. ಹೀಗಾಗಿ ಅಲ್ಲಿನ ಕೆಲ ಯೂಟ್ಯೂಬರ್‌ಗಳು ಬೀದಿಗಿಳಿದು ಜನರ ಅಭಿಪ್ರಾಯ ಕೇಳಲು ಶುರು ಮಾಡಿದ್ದರು. ಈ ವೇಳೆ ಕೆಲವರು ನೀಡಿದ ಪ್ರತಿಕ್ರಿಯೆಗಳು ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ನಗೆಯುಕ್ಕಿಸುತ್ತಿವೆ. 

ಯೂಟ್ಯೂಬರ್ ಒಬ್ಬರು ಯುವಕನ ಬಳಿ ಭಾರತದ ಚಂದ್ರಯಾನ-3 (Chandryaan 3)ಯಶಸ್ವಿಯಾದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಆತ ನೀಡಿದ ಉತ್ತರ ಮಾತ್ರ ಪಾಕಿಸ್ತಾನ ಜನ ಎಂಥ ಸಂದರ್ಭದಲ್ಲೂ ನಗೆಯುಕ್ಕಿಸುತ್ತಾರೆ ಎಂಬುದನ್ನು ಸಾಬೀತು ಪಡಿಸಿದೆ. ಆತ ಹೇಳಿದ್ದೇನು?

ಅವರು ದುಡ್ಡು ವೆಚ್ಚ ಮಾಡಿ ಚಂದ್ರಯಾನ ಮಾಡುತ್ತಿದ್ದಾರೆ. ಆದರೆ ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ ನಿಮಗೆ ಈ ವಿಚಾರ ಗೊತ್ತಿಲ್ವಾ ಎಂದು ಪಾಕಿಸ್ತಾನದ ಯುವಕ ಯೂಟ್ಯೂಬರ್‌ನನ್ನೇ (Youtuber) ಮರು ಪ್ರಶ್ನಿಸಿದ್ದಾನೆ. ಈತನ ಮಾತಿಗೆ ಯೂಟ್ಯೂಬರ್ ಕುತೂಹಲದಿಂದ ಅದು ಹೇಗೆ ಎಂದು ಕೇಳಿದ್ದಾರೆ. ಆಗ ಆತ ಚಂದ್ರನ ಮೇಲೆ ನೀರಿದೆಯೇ ಎಂದು ಕೇಳಿದ್ದಾನೆ. ಯೂಟ್ಯೂಬರ್ ಇಲ್ಲ ಎನ್ನುತ್ತಾನೆ. ಹಾಗೆಯೇ ನೋಡಿ ಇಲ್ಲೂ ನೀರಿಲ್ಲ, ಅಲ್ಲಿ ಗ್ಯಾಸ್ ಇದೆಯೇ ಎಂದು ಮರು ಪ್ರಶ್ನಿಸುತ್ತಾನೆ ಇಲ್ವಲ್ಲಾ ಎಂದು ಯೂಟ್ಯೂಬರ್ ಹೇಳುತ್ತಾನೆ. ಇಲ್ಲೂ ಇಲ್ಲ ನೋಡಿ ಅಂತಾನೆ ಯುವಕ, ಅಲ್ಲಿ ವಿದ್ಯುತ್ (Power) ಇದೆಯೇ ಎಂದು ಮರು ಪ್ರಶ್ನಿಸುತ್ತಾನೆ. ಇಲ್ಲ ಎಂದ ಯುಟ್ಯೂಬರ್‌ಗೆ ನೋಡಿ ಇಲ್ಲಿ ಕೂಡ ಇಲ್ಲ ಎಂದು ಯುವಕ ಹಾಸ್ಯಮಯವಾಗಿ ಉತ್ತರಿಸುತ್ತ ಪಾಕಿಸ್ತಾನವನ್ನು ಚಂದ್ರನಿಗೆ ಹೋಲಿಸಿದ್ದಾನೆ ಈ ಯುವಕ. ಯುವಕನ ಈ ಹಾಸ್ಯಮಯ ಮಾತು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಬಿಕ್ಸ್‌ ಶೃಂಗದಲ್ಲಿ ಚೀನಾ ಅಧ್ಯಕ್ಷಗೆ ಮುಜುಗರ: ಜಿನ್‌ಪಿಂಗ್‌ ಗಾರ್ಡ್‌ ತಡೆದ ಸಿಬ್ಬಂದಿ: ವೈರಲ್ ವೀಡಿಯೋ