Asianet Suvarna News Asianet Suvarna News

ಬೆದರಿಕೆಗೆ ಹೆದರಿ ಪಾಕಿಸ್ತಾನ ಸರ್ಕಾರದಿಂದ 350 ಉಗ್ರ ಬೆಂಬಲಿಗರ ಬಿಡುಗಡೆ!

*ನಿಷೇಧಿತ ಉಗ್ರ ಸಂಘಟನೆಯ ಗಡುವಿಗೆ ಬೆದರಿದ ಪಾಕಿಸ್ತಾನ ಸರ್ಕಾರ!
*ಸೋಮವಾರ 350 ಉಗ್ರ ಬೆಂಬಲಿಗರನ್ನು ಬಿಡುಗಡೆ ಮಾಡಿದ ಸರ್ಕಾರ
*ಲಾಹೋರ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಸಂಘಟನೆ
 

Pakistan govt releases 350 activists of banned Tehreek e Labbaik
Author
Bengaluru, First Published Oct 26, 2021, 11:03 AM IST
  • Facebook
  • Twitter
  • Whatsapp

ಇಸ್ಲಾಮಾಬಾದ್‌ (ಅ. 26 ): ನಿಷೇಧಿತ ಉಗ್ರ ಸಂಘಟನೆಯ ಗಡುವಿಗೆ ಬೆದರಿದ ಪಾಕಿಸ್ತಾನ ಸರ್ಕಾರ, ತೆಹ್ರೀಕ್‌ ಎ ಲಬಾಯ್‌ಕ್ (Tehreek-e-Labbaik) ಎಂಬ ಉಗ್ರ ಸಂಘಟನೆಯ 350 ಬೆಂಬಲಿಗರನ್ನು ಸೋಮವಾರ ಬಿಡುಗಡೆ ಮಾಡಿದೆ. ಸಂಘಟನೆಯ ಮುಖ್ಯಸ್ಥ ಹುಸೇನ್‌ ರಿಜ್ವಿ (Hussain Rizvi) ಸೇರಿದಂತೆ ಕೆಲ ಮುಖಂಡರನ್ನು ಕೆಲ ತಿಂಗಳ ಹಿಂದೆ ಬಂಧಿಸಲಾಗಿತ್ತು. ಅವರ ಬಿಡುಗಡೆಗೆ ಒತ್ತಾಯಿಸಿ ಬೆಂಬಲಿಗರು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ಆರಂಭಿಸಿದ್ದರು. ಜತೆಗೆ  ಮುಖಂಡರನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡದಿದ್ದರೆ ಇಸ್ಲಾಮಾಬಾದ್‌ಗೆ (Islamabad) ಮುತ್ತಿಗೆ ಹಾಕುವುದಾಗಿ ಗಡುವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ 350 ಉಗ್ರ ಬೆಂಬಲಿಗರನ್ನು ಸರ್ಕಾರ ಬಿಡುಗಡೆ ಮಾಡಿದೆ.

ಬಾಲಾಕೋಟ್‌ ಏರ್‌ಸ್ಟ್ರೈಕ್ ನಿಜ, ಒಪ್ಪಿಕೊಂಡ ಪಾಕಿಸ್ತಾನ: ರಾಹುಲ್‌, ಕೇಜ್ರಿಗೆ ಮುಖಭಂಗ!

ತಮ್ಮ ಪಕ್ಷದ ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿ ಅವರನ್ನು ಬಿಡುಗಡೆ ಮಾಡುವಂತೆ, ಪ್ರಧಾನಿ ಇಮ್ರಾನ್ ಖಾನ್ (Imran Khan) ಸರ್ಕಾರದ ವಿರುದ್ಧ ಟಿಎಲ್‌ಪಿ ಕಾರ್ಯಕರ್ತರು ದೇಶಾದ್ಯಂತ, ವಿಶೇಷವಾಗಿ ಲಾಹೋರ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿದ್ದರು.  ಟಿಎಲ್‌ಪಿ ಯ ಬೇಡಿಕೆಗಳನ್ನು ಪರಿಶೀಲಿಸಿದ ನಂತರ, ಮಂಗಳವಾರದೊಳಗೆ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲಾಗುವುದು ಎಂದು ಆಂತರಿಕ ಸಚಿವರಾದ ಶೇಕ್‌ ರಶೀದ್‌ ಅಹಮದ್‌ (Sheik Rashid Ahmed) ಹೇಳಿದ್ದರು.

ಕಾಶ್ಮೀರ ಯುವಕರ ಜೊತೆ ಮಾತನಾಡುತ್ತೇನೆ, ಪಾಕ್ ಜೊತೆಗಲ್ಲ; ಕುಟುಕಿದ ನಾಯಕರಿಗೆ ಶಾ ತಿರುಗೇಟು!

ವಿರೋಧ ಪಕ್ಷಗಳು ಮತ್ತು ನಿಷೇಧಿತ ಸಂಘಟನೆಯು ದೇಶದ ಅನೇಕ ನಗರಗಳಲ್ಲಿ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿತ್ತು, ಇದರ ಪರಿಣಾಮವಾಗಿ ಇಸ್ಲಾಮಾಬಾದ್, ಲಾಹೋರ್ (Lahore) ಮತ್ತು  ರಾವಲ್ಪಿಂಡಿ (Rawalpindi) ನಗರಗಳನ್ನು  ಭಾಗಶಃ ಮುಚ್ಚಲಾಯಿತು. ಬುಧವಾರದ ಘರ್ಷಣೆಯಲ್ಲಿ ಮೂವರು ಪೊಲೀಸರು ಮತ್ತು ಏಳು ಟಿಎಲ್‌ಪಿ ಕಾರ್ಯಕರ್ತರು ಸಾವನ್ನಪ್ಪಿದ್ದರು. "ನಾವು ಇಲ್ಲಿಯವರೆಗೆ 350 ಟಿಎಲ್‌ಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದೇವೆ ಮತ್ತು ಟಿಎಲ್‌ಪಿಯೊಂದಿಗಿನ ನಿರ್ಧಾರದ ಪ್ರಕಾರ ಮುರಿಡ್ಕೆ ರಸ್ತೆಯ (Muridke Road) ಎರಡೂ ಬದಿಗಳನ್ನು ತೆರೆಯಲು ನಾವು ಇನ್ನೂ ಕಾಯುತ್ತಿದ್ದೇವೆ" ಎಂದು ಮುಖ್ಯಸ್ಥ ರಿಜ್ವಿ ಸೇರಿದಂತೆ ಇತರ ಟಿಎಲ್‌ಪಿ ಪ್ರತಿನಿಧಿಗಳ ಜತೆ  ಮಾತುಕತೆಯಲ್ಲಿ ಸರ್ಕಾರದ ತಂಡವನ್ನು ಮುನ್ನಡೆಸಿದ ನಂತರ ಆಂತರಿಕ ಸಚಿವರಾದ ಶೇಕ್‌ ರಶೀದ್‌ ಅಹಮದ್‌ ಟ್ವೀಟ್ ಮಾಡಿದ್ದಾರೆ.  

 

 

ಟಿಎಲ್‌ಪಿಯ ಸಂಸ್ಥಾಪಕ ದಿವಂಗತ ಖಾದಿಮ್ ರಿಜ್ವಿ (Khadim Rizvi) ಅವರ ಪುತ್ರ ಸಾದ್ ಹುಸೇನ್ ರಿಜ್ವಿ (Hussain Rizvi) ಅವರನ್ನು ಸರ್ಕಾರವು ಕಳೆದ ಏಪ್ರಿಲ್‌ನಿಂದ 'ಸಾರ್ವಜನಿಕ ಸುವ್ಯವಸ್ಥೆ' (Public Order) ನಿರ್ವಹಣೆ  ಕಾನೂನು ಅಡಿಯಲ್ಲಿ ಬಂಧಿಸಿದೆ. ಫ್ರಾನ್ಸ್‌ನಲ್ಲಿ ಪ್ರಕಟವಾದ ಇಸ್ಲಾಂ ಪ್ರವಾದಿಯ ಧರ್ಮನಿಂದೆಯ ವ್ಯಂಗ್ಯಚಿತ್ರಗಳ ವಿರುದ್ಧ ಪಕ್ಷದ ಪ್ರತಿಭಟನೆಯ ನಂತರ ಸಾದ್ ಬಂಧನವಾಗಿತ್ತು. ಫ್ರೆಂಚ್ ರಾಯಭಾರಿಯನ್ನು ಹಿಂದಕ್ಕೆ ಕಳುಹಿಸಬೇಕು ಮತ್ತು ಫ್ರಾನ್ಸ್ ದೇಶದಿಂದ ಸರಕುಗಳ ಆಮದನ್ನು ನಿಷೇಧಿಸಬೇಕು ಎಂದು ಟಿಎಲ್‌ಪಿ ಒತ್ತಾಯಿಸಿತ್ತು.

T20 World Cup; ಪಾಕ್ ವಿರುದ್ಧ ಸೋಲಿಗೆ ಮೊಹಮ್ಮದ್ ಶಮಿಗೆ ನಿಂದನೆ, ನೆರವಿಗೆ ನಿಂತ ಸೆಹ್ವಾಗ್!

ಟಿಎಲ್‌ಪಿಯು 2017 ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಮೂರು ವಾರಗಳ ಕಾಲ  ಫೈಜಾಬಾದ್ ಇಂಟರ್‌ಚೇಂಜ್ (Fizabad Interchange) ಬಳಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಖ್ಯಾತಿಯನ್ನು ಗಳಿಸಿತ್ತು. ಸರ್ಕಾರವು ಆಗಿನ ಕಾನೂನು ಸಚಿವ ಜಾಹಿದ್ ಹಮೀದ್ ಅವರನ್ನು ವಜಾಗೊಳಿಸಿದ ನಂತರವೇ  ಟಿಎಲ್‌ಪಿ ಲಾಕ್‌ಡೌನ್ಅನ್ನು ತೆಗೆದುಹಾಕಿತ್ತು.

Follow Us:
Download App:
  • android
  • ios