Asianet Suvarna News Asianet Suvarna News

T20 World Cup; ಪಾಕ್ ವಿರುದ್ಧ ಸೋಲಿಗೆ ಮೊಹಮ್ಮದ್ ಶಮಿಗೆ ನಿಂದನೆ, ನೆರವಿಗೆ ನಿಂತ ಸೆಹ್ವಾಗ್!

  • ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ
  • ಟಿ20 ವಿಶ್ವಕಪ್ ಟೂರ್ನಿ ಪಂದ್ಯದ ಬಳಿಕ ಶಮಿ ಟಾರ್ಗೆಟ್
  • ದುಬಾರಿ ಬೌಲಿಂಗ್ ಮಾಡಿದ ಶಮಿ ವಿರುದ್ಧ ನಿಂದನೆ
  • ಶಮಿ ನೆರವಿಗೆ ನಿಂತ ಮಾಜಿ ಕ್ರಿಕೆಟಿಗರು
T20 World Cup Virender Sehwag Irfan Pathan slams online attack on Mohammed shami after lose against Pakistan ckm
Author
Bengaluru, First Published Oct 25, 2021, 5:34 PM IST
  • Facebook
  • Twitter
  • Whatsapp

ದುಬೈ(ಅ.25):  T20 World Cup 2021 ಟೂರ್ನಿಯನ್ನು ಟೀಂ ಇಂಡಿಯಾ(Team India) ಸೋಲಿನೊಂದಿಗೆ ಆರಂಭಿಸಿದೆ. ಅದರಲ್ಲೂ ಬದ್ಧವೈರಿ ಪಾಕಿಸ್ತಾನ(Pakistan) ವಿರುದ್ಧದ ಸೋಲು ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳುಲು ಸಾಧ್ಯವಾಗುತ್ತಿಲ್ಲ. ಸೋಲಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಟಾರ್ಗೆಟ್ ಮಾಡಿದ್ದಾರೆ. ಶಮಿಯನ್ನು ನಿಂದಿಸಿ ಹಲವರು ಪೋಸ್ಟ್ ಮಾಡಿದ್ದಾರೆ.

T20 World Cup: ಪಾಕ್ ಗೆದ್ದಿದ್ದಕ್ಕೆ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸೆಹ್ವಾಗ್

ಪಾಕಿಸ್ತಾನ ವಿರುದ್ಧದ ಸೋಲಿಗೆ ಹಲವು ಕಾರಣಗಳಿವೆ. ಆದರೆ ನೆಟ್ಟಿಗರು ಶಮಿ(Mohammed shami) ಪ್ರದರ್ಶನವನ್ನು ಟೀಕಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಮೊಹಮ್ಮದ್ ಶಮಿ ವಿಕೆಟ್ ಕಬಳಿಸಿದ ದುಬಾರಿಯಾಗಿದ್ದಾರೆ. ಭಾರತ ತಂಡದಲ್ಲಿರುವ ಪಾಕಿಸ್ತಾನ ಪ್ರೇಮಿ ಮೊಹಮ್ಮದ್ ಶಮಿ ಎಂದು ನಿಂದಿಸಲಾಗಿದೆ. ಶಮಿ ಪಾಕಿಸ್ತಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಈ ರೀತಿ ಬೌಲಿಂಗ್ ಮಾಡಿದ್ದಾರೆ ಎಂದು ನಿಂದನೆ ಮಾಡಲಾಗಿದೆ

ಶಮಿ ವಿರುದ್ಧದ ಟೀಕೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ವಿರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಟೀಕಾಕಾರ ವಿರುದ್ಧ ಸಿಡಿದೆದ್ದಿದ್ದಾರೆ. ಶಮಿ ಬೆಂಬಲಕ್ಕೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

T20 World Cup: No Ball ನಲ್ಲಿ ಕೆ.ಎಲ್ ರಾಹುಲ್‌ ಔಟ್‌?

ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದು ನಿಜಕ್ಕೂ ಆಘಾತವಾಗಿದೆ. ಮೊಹಮ್ಮದ್ ಶಮಿ ಚಾಂಪಿಯನ್ ಬೌಲರ್. ಭಾರತ ತಂಡದ ಕ್ಯಾಪ್ ಧರಿಸಿದ ಆಟಗಾರ, ಭಾರತವನ್ನು ಅತೀಯಾಗಿ ಪ್ರೀತಿಸುತ್ತಾನೆ ಸಾಮಾಜಿಕ ಜಾಲತಾಣದಲ್ಲಿನ ದಾಳಿಕೋರರಿಗಿಂತ ದೇಶದ ಮೇಲೆ ಹೆಚ್ಚು ಪ್ರೀತಿ ಟೀಂ ಇಂಡಿಯಾ ಆಟಗಾರನಿಗಿದೆ. ನಾವು ಶಮಿ ಪರ ಇದ್ದೇವೆ. ಮುಂದಿನ ಪಂದ್ಯದಲ್ಲಿ ಜಲ್ವಾ ತೋರಿಸಿ ಎಂದು ಶಮಿ ಪರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. 

 

ಶಮಿ ಪರ ನಿಂತು ಟ್ವೀಟ್ ಮಾಡಿರುವ ಮಾಜಿ ವೇಗಿ ಇರ್ಫಾನ್ ಪಠಾಣ್, ಸೋಲು ಗೆಲುವು ಇದ್ದಿದ್ದೆ. ನಾನು ಕೂಡ ಭಾರತ ಹಾಗೂ ಪಾಕಿಸ್ತಾನ ಹೋರಾಟದ ಭಾಗವಾಗಿದ್ದೆ. ನಾವು ಸೋತಿದ್ದೇವೆ. ಆದರೆ ಪಾಕಿಸ್ತಾನಕ್ಕೆ ಹೋಗಲು ಹೇಳಿಲ್ಲ. ಈ ರೀತಿಯ ಟೀಕೆ ನಿಲ್ಲಬೇಕು ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.

 

ಭಾರತದ ವಿರುದ್ಧ ಗೆದ್ದರೂ ಸಂಭ್ರಮಿಸಲಿಲ್ಲ ಪಾಕ್ ಆಟಗಾರರು: ಇಲ್ಲಿದೆ ಕಾರಣ!

ಶಮಿ ಪರ ಟೀಂ ಇಂಡಿಯಾ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಶಮಿ ಟೀಂ ಇಂಡಿಯಾ ಚಾಂಪಿಯನ್. ಪಂದ್ಯ ಸೋತರೂ ಗೆದ್ದರೂ ನಮ್ಮ ಬೆಂಬಲ ಟೀಂ ಇಂಡಿಯಾ ಹಾಗೂ ಕ್ರಿಕೆಟಿಗರಿಗಿದೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios