Asianet Suvarna News Asianet Suvarna News

Pakistan Corruption ಡ್ಯಾಮ್ ನಿರ್ಮಿಸಲು 3,000 ಕೋಟಿ ರೂ ಸಂಗ್ರಹ, ಜಾಹೀರಾತಿಗಾಗಿ 5,000 ಕೋಟಿ ರೂ ಖರ್ಚು!

ನೀರಿನ ಅಭಾವ, ಪ್ರವಾಹ, ಅಂತರ್ಜಲ ಮಟ್ಟ ಏರಿಕೆ ಸೇರಿದಂತೆ ಹಲವು ಕಾರಣಗಳಿಗಾಗಿ ಡ್ಯಾಮ್ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಆದರ ಸರಿಸುಮಾರು 30 ವರ್ಷ ಶಿಲನ್ಯಾಸ ಬಿಟ್ಟರೆ ಏನೂ ಆಗಿಲ್ಲ. ಕೊನೆಗೆ ಕೋರ್ಟ್ ಮಧ್ಯಪ್ರವೇಶಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಸರ್ಕಾರಕ್ಕೆ ಸೂಚಿಸಿತ್ತು. ಹೀಗೆ 3,000 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ. ಆದರೆ ಡ್ಯಾಮ್ ನಿರ್ಮಾಣದ ದೇಣಿಗ ಜಾಹೀರಾತಿಗಾಗಿ 5,000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

Pakistan Govt raise 40 million us dollar from public for Dam construction but 63 million us dollar spent on advertising ckm
Author
First Published Sep 16, 2022, 4:15 PM IST

ಇಸ್ಲಾಮಾಬಾದ್(ಸೆ.16):  ಡ್ಯಾಮ್ ನಿರ್ಮಾಣ 1980ರಲ್ಲಿ ಪೂರ್ಣಗೊಳ್ಳಬೇಕಿತ್ತು. 40 ವರ್ಷದ ಮೊದಲೇ ಸರ್ಕಾರ ಕೋಟಿ ಕೋಟಿ ರೂಪಾಯಿಗೂ ಹಣ ಬಿಡುಗಡೆ ಮಾಡಿತ್ತು. ಆದರೆ ಈ ಹಣದಲ್ಲಿ ಶಿಲನ್ಯಾಸ ಬಿಟ್ಟು ಬೇರೇನೂ ಆಗಿರಲಿಲ್ಲ. 38 ವರ್ಷ ಕಳೆದರೂ ಡ್ಯಾಮ್ ನಿರ್ಮಾಣ ಆಗಲೇ ಇಲ್ಲ. ಹೀಗಾಗಿ 2018ರಲ್ಲಿ ನಿವೃತ್ತ ಮುಖ್ಯನ್ಯಮೂರ್ತಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟರು. ಈ ಮೂಲಕ ಸರಿಸುಮಾರು 3,000 ಕೋಟಿ ಸಂಗ್ರಹ ಮಾಡಲಾಯಿತು. ಆದರೆ ಸರ್ಕಾರ ದೇಣಿಗೆ ಸಂಗ್ರಹ, ಡ್ಯಾಮ್ ನಿರ್ಮಾಣದ ಜಾಹೀರಾತಿಗಾಗಿ ಬರೋಬ್ಬರಿ 5,000 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಡ್ಯಾಮ್ ಅರ್ಧಕ್ಕೆ ನಿಂತಿದೆ. ಆತಂಕಗೊಳ್ಳಬೇಡಿ. ಈ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಪಾಕಿಸ್ತಾನದಲ್ಲಿ. ಇಂಡಸ್ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಜಲಾಶಯ ಕರ್ಮಕಾಂಡ ಇದು.

ಪಾಕಿಸ್ತಾನದ(Pakistan) ನೀರಿನ ಸಮಸ್ಯೆ, ಕೃಷಿ, ಪ್ರವಾಹ ಸೇರಿದಂತೆ ಹಲವು ದೃಷ್ಟಿಕೋನಗಳನ್ನು ಮುಂದಿಟ್ಟುಕೊಂಡು 1975ರಲ್ಲೇ ಡೈಯಾಮೆರ್ ಬಾಶಾ ಡ್ಯಾಮ್(Indus River Dam) ನಿರ್ಮಾಣಕ್ಕೆ ಅಂದಿನ ಪಾಕ್ ಸರ್ಕಾರ ಅನುಮೋದನೆ ನೀಡಿತ್ತು. ಅಂದಿನ ಖರ್ಚು ವೆಚ್ಚಕ್ಕಾಗುವಷ್ಟು ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. 1980ರಲ್ಲಿ ಈ ಡ್ಯಾಮ್(Diamer-Bhasha Dam) ನಿರ್ಮಾಣವಾಗಬೇಕಿತ್ತು. ಆದರೆ ಡೈಯಾಮೆರ್ ಬಾಶಾ ಡ್ಯಾಮ್ ಭ್ರಷ್ಟಾಚಾರ ಕಾರಣ ನಿರ್ಮಾಣವಾಗಲೇ ಇಲ್ಲ. ಇದಾದ ಬಳಿಕ ಹಲವು ಬಾರಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಅದರ ಲೆಕ್ಕವೂ ಇಲ್ಲ. 38 ವರ್ಷಗಳ ಬಳಿಕ ಪಾಕಿಸ್ತಾನದ ನೀರಿನ ಸಮಸ್ಯೆ(Water) ತೀವ್ರಗೊಂಡ ಬೆನ್ನಲ್ಲೇ ಪಾಕಿಸ್ತಾನದ ನಿವೃತ್ತ ಮುಖ್ಯನ್ಯಾಯಮೂರ್ತಿ ಸಾಖಿಬ್ ನಿಸಾರ್, ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ ಡ್ಯಾಮ್ ನಿರ್ಮಾಣ ಮಾಡುವ ಸಲೆಹಯನ್ನು ಸರ್ಕಾರಕ್ಕೆ ನೀಡಿದ್ದರು.

ಪಾಕ್‌ನಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ, ವಸತಿ ಒದಗಿಸಿದ ದೇವಸ್ಥಾನ!

ಇಷ್ಟು ಕೇಳಿದ್ದೇ ತಡ, ಸರ್ಕಾರ ಅತೀ ದೊಡ್ಡದಾಗಿ ಜಾಹೀರಾತು ನೀಡಿತು. ಎಲ್ಲಾ ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜಾಾಹೀರಾತು ನೀಡಿತು. ಫ್ಲೆಕ್ಸ್, ಬೋರ್ಡಿಂಗ್ ರಾರಾಜಿಸಿತು. ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿ ಎಂಬ ಟ್ಯಾಗ್ ಲೈನ ಕೂಡ ಹಾಕಲಾಗಿತ್ತು. ವಿದೇಶಗಳಲ್ಲಿರುವ ಪಾಕಿಸ್ತಾನ ಮೂಲದ ಉದ್ಯಮಿಗಳಿಗೆ ತೆರಿಗೆ ವಿನಾಯಿತಿಸಿ ಸೇರಿದಂತೆ ಹಲವು ಉಪಕ್ರಮಗಳನ್ನು ಘೋಷಿಸಿತು. ಪಾಕಿಸ್ತಾನ ಜನ ದೇಣಿಗೆ ನೀಡಿದರು. ಈ ಮೂಲಕ 3,193 ರೂಪಾಯಿ ಸಂಗ್ರಹಿಸಲಾಯಿತು.  

ದೇಣಿಗೆ ನೀಡಿದ ಜನ ಇನ್ನೇನು ಅತೀ ದೊಡ್ಡ ಡ್ಯಾಮ್ ನಿರ್ಮಾಣವಾಗಲಿದೆ. ನೀರಿನ ಬವಣೆ ಮುಗಿಯಲಿದೆ. ಕೃಷಿ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜನರು ನೆಮ್ಮದಿಯೆ ನಿಟ್ಟುಸಿರು ಬಿಟ್ಟರು. ಆದರೆ ಡ್ಯಾಮ್ ನಿರ್ಮಾಣದ ದೇಣಿಗೆಗಿಂತ ಜಾಹೀರಾತಿಗಾಗಿ ಸರ್ಕಾರ 5,030,509,743 ರೂಪಾಯಿ(Corruption) ಖರ್ಚು ಮಾಡಿತ್ತು. ಇದರಲ್ಲಿ ಸಂಪೂರ್ಣ ಹಣ ಜಾಹೀರಾತಿಗಾಗಿ ಎಷ್ಟು ಖರ್ಚು ಮಾಡಿದ್ದಾರೆ, ಸಚಿವರು ಎಷ್ಟು ಜೇಬಿಗಿಳಿಸಿದ್ದಾರೆ ಅನ್ನೋ ಯಾವುದೇ ಮಾಹಿತಿ ಇಲ್ಲ. 

ಲಂಡನ್‌ನಲ್ಲಿ ಕಳುವಾದ ಐಷಾರಾಮಿ Bentley Car ಪಾಕಿಸ್ತಾನದಲ್ಲಿ ಪತ್ತೆ

ಇತ್ತ ಆರಂಭದಲ್ಲಿ ಬಂದ ಹಣದಲ್ಲಿ ಡ್ಯಾಮ್ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಇದೀಗ ಡ್ಯಾಮ್ ನಿರ್ಮಾಣ ಮತ್ತೆ ಅರ್ಧಕ್ಕೆ ನಿಂತಿದೆ. ಮತ್ತೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಸಾಧ್ಯವಿಲ್ಲ, ಇತ್ತ ಪಾಕಿಸ್ತಾನ ಸರ್ಕಾರದ ಬಳಿ ನಯಾ ಪೈಸೆ ಇಲ್ಲ. ಡ್ಯಾಮ್ ನಿರ್ಮಾಣ ಕಾರ್ಯ ಹಾಗೇ ಉಳಿದಿದೆ.
 

Follow Us:
Download App:
  • android
  • ios