ಪಾಕ್ ಚುನಾವಣೆ ಫಲಿತಾಂಶ ಸಂಭ್ರಮದಲ್ಲಿ ಬಲೂನ್ ಬದಲು ಕಾಂಡೋಮ್ ಬಳಕೆ, ವಿಡಿಯೋ ವೈರಲ್!

ಪಾಕಿಸ್ತಾನದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇಮ್ರಾನ್ ಖಾನ್ ಪಕ್ಷ ಮುನ್ನಡೆ ಪಡೆದರೂ, ಇತ್ತ ನವಾಜ್ ಷರೀಪ್‌ಗೆ ಸೇನೆ ಬೆಂಬಲ ನೀಡಿದೆ. ಇತ್ತ ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಬಜೆಟ್ ಫ್ರೆಂಡ್ಲಿ ಸಂಭ್ರಮಾಚರಣೆ ನಡೆಸಿದೆ. ಸಂಭ್ರಮಾಚರಣೆ ವೇಳೆ ಬಲೂನ್ ಹಾರಿಬಿಡುವ ಬದಲು ಬಳಸಿದ ಕಾಂಡೋಮ್‌ಗಳನ್ನು ಹಾರಿ ಬಿಟ್ಟ ವಿಡಿಯೋ ವೈರಲ್ ಆಗಿದೆ.
 

Pakistan Election Result 2024 Condoms used for celebration instead of Balloons viral video erupt discussion ckm

ಇಸ್ಲಾಮಾಬಾದ್(ಫೆ.11) ಪಾಕಿಸ್ತಾನ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ನವಾಜ್ ಷರಿಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಮ್ ಲೀಗ್ ಸ್ಪಷ್ಟ ಬಹುಮತ ಪಡೆದಿಲ್ಲ. ಇತ್ತ ಷರಿಫ್‌ಗೆ ಠಕ್ಕರ್ ನೀಡಿದ ಇಮ್ರಾನ್ ಖಾನ್ ಪಿಟಿಐ ಗರಿಷ್ಠ ಸ್ಥಾನ ಗೆದ್ದರೂ ಸರ್ಕಾರ ರಚಿಸುವ ಭಾಗ್ಯ ಷರೀಫ್ ಪಾಲಾಗಿದೆ. ಕಾರಣ ನವಾಜ್ ಷರೀಫ್‌ಗೆ ಪಾಕಿಸ್ತಾನ ಸೇನೆ ಬೆಂಬಲ ನೀಡಿದೆ. ಇತ್ತ ಉಭಯ ಪಕ್ಷದ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ಸಂಭ್ರಮಾಚರಣೆಯ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಸಂಭ್ರಮಾಚರಣೆ ವೇಳೆ ಬೆಂಬಲಿಗರು, ಕಾರ್ಯಕರ್ತರು, ಬಲೂನ್ ಹಾರಿಬಿಡುವ ಬದಲು ಬಳಸಿದ ಕಾಂಡೋಮ್‌ಗಳನ್ನು ಹಾರಿ ಬಿಟ್ಟ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಪಾಕಿಸ್ತಾನ ಚುನಾವಣೆ ಫಲಿತಾಂಶ ಬಳಿಕ ನಡೆದ ಸಂಭ್ರಮಾಚರಣೆ ವಿಡಿಯೋ ಎಂದು ಹೇಳಲಾಗುತ್ತಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಬಜೆಟ್ ಫ್ಲೆಂಡ್ಲಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.ಕಾರಣ ಬಳಸಿದ ಕಾಂಡೋಮ್‌ಗಳನ್ನು ಹೆಕ್ಕಿ ತಂದು ಗಾಳಿ ತುಂಬಿದ್ದಾರೆ. ಬಳಿಕ ಈ ಕಾಂಡೋಮ್‌ಗಳನ್ನು ಬಲೂನ್‌ಗಳಂತೆ ಹಾರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಬಹುಮತ ಪಡೆಯದ ನವಾಜ್‌ ಷರೀಫ್‌ ಪರ ಪಾಕ್ ಸೇನೆ ಬ್ಯಾಟಿಂಗ್‌ : ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಸೇನೆ ಸೂಚನೆ!

ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಗಾಳಿ ತುಂಬಿದ ಕಾಂಡೋಮ್‌ಗಳನ್ನು ಹಾರಿಬಿಡುತ್ತಿದ್ದಾರೆ. ಈ ಕಾಂಡೋಮ್ ಕೆಳ ಭಾಗದಲ್ಲಿ ಪಕ್ಷದ ಧ್ವಜ ಕಟ್ಟಿ ಆಕಾಶಕ್ಕೆ ಹಾರಿಬಿಡಲಾಗುತ್ತಿದೆ. ಪಾಕಿಸ್ತಾನದ ಮಾಧ್ಯಮಗಳಲ್ಲೂ ಈ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ. ಇದರ ಮೇಲೆ ಚರ್ಚೆ ಕೂಡ ನಡೆದಿದೆ. ಬಳಸಿದ ಕಾಂಡೋಮ್, ವಿಶ್ವಸಂಸ್ಥೆ ಹಾಗೂ ಪಾಕಿಸ್ತಾನಕ್ಕೆ ನೆರವು ನೀಡುವ ಸಂದರ್ಭದಲ್ಲಿ ಉಚಿತವಾಗಿ ನೀಡಿರುವ ಕಾಂಡೋಮ್‌ಗಳನ್ನು ತಂದು ಈ ರೀತಿಯ ಸಂಭ್ರಮಾಚರಣೆ ಮಾಡಲಾಗಿದೆ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ.  ಆದರೆ ಈ ವಿಡಿಯೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣಧಲ್ಲಿ ಭಾರಿ ವೈರಲ್ ಆಗುತ್ತಿದೆ.

 

 

ಈ ವಿಡಿಯೋಗೆ ಬಂದಿರುವ ಪ್ರತಿಕ್ರಿಯೆಗಳ ಪೈಕಿ, ಇದು ಹಳೇ ವಿಡಿಯೋ ಎಂಬ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ವಿಡಿಯೋದಲ್ಲಿ ಪ್ರಮುಖವಾಗಿ ಕಾಂಡೋಮ್ ಬಲೂನ್ ಹಾರಿಬಿಡುತ್ತಿರುವ ನಾಯಕ ಖಾದ್ರಿ ಬಕ್ಷ್ ಕಲ್ಮಟಿ, ಈ ನಾಯಕ ನವಾಜ್ ಷರೀಪ್ ಅರ ಪಾಕಿಸ್ತಾನ ಮುಸ್ಲಿಮ್ ಲೀಗ್ ಪಕ್ಷದಿಂದ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದಕ್ಕೂ ಮೊದಲು ಪಿಪಿಪಿ ಹಾಗೂ ಪಿಟಿಐ ಪಕ್ಷಕ್ಕೂ ಹಾರಿ ಕೆಲ ಕಾಲ ಚುನಾವಣೆ ಎದುರಿಸಿದ್ದರು.ಆದರೆ ಈ ವಿಡಿಯೋ 9 ರಿಂದ 10 ವರ್ಷ ಹಳೇ ವಿಡಿಯೋ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ಪಾಕಿಸ್ತಾನ ಫಲಿತಾಂಶ ಅತಂತ್ರ: ಜೈಲಲ್ಲಿರುವ ಇಮ್ರಾನ್ ಬೆಂಬಲಿಗರ ಅಚ್ಚರಿಯ ಗೆಲುವು

Latest Videos
Follow Us:
Download App:
  • android
  • ios