ಆರ್ಥಿಕವಾಗಿ, ರಾಜಕೀಯವಾಗಿ ಸಂಕಷ್ಟದಲ್ಲಿರುವ ಪಾಕಿಸ್ತಾನ ಸಂಸತ್‌ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜೈಲು ಸೇರಿರುವ ಮಾಜಿ ಪ್ರಧಾನಿ ಇಮ್ರಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು  ಅಚ್ಚರಿಯ ರೀತಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇಸ್ಲಾಮಾಬಾದ್‌: ಆರ್ಥಿಕವಾಗಿ, ರಾಜಕೀಯವಾಗಿ ಸಂಕಷ್ಟದಲ್ಲಿರುವ ಪಾಕಿಸ್ತಾನ ಸಂಸತ್‌ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜೈಲು ಸೇರಿರುವ ಮಾಜಿ ಪ್ರಧಾನಿ ಇಮ್ರಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪ್ರಧಾನಿಯಾಗುವ ಕನಸು ಕಂಡಿದ್ದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪಿಎಂಎಲ್‌ಎನ್‌ ಮತ್ತು ಬಿಲಾವಲ್‌ ಭುಟ್ಟೋ ಅವರ ಪಿಪಿಪಿ ಭಾರೀ ಹಿನ್ನಡೆ ಸಾಧಿಸಿವೆ. ಹೀಗಾಗಿ ಅತಂತ್ರ ಪರಿಸ್ಥಿತಿಯ ಆಂತಕ ಎದುರಾಗಿದೆ.

339 ಸ್ಥಾನಗಳ ಪೈಕಿ 338 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶುಕ್ರವಾರ ರಾತ್ರಿ ವೇಳೆಗೆ ಇಮ್ರಾನ್‌ ಬೆಂಬಲಿತ ಅಭ್ಯರ್ಥಿಗಳು 90 ಕ್ಷೇತ್ರಗಳಲ್ಲಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದ್ದಾರೆ., ನವಾಜ್ ಷರೀಫ್‌ ಪಕ್ಷ 71, ಬಿಲಾವಲ್‌ ಭುಟ್ಟೋ ಅವರ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ 53 ಸ್ಥಾನಗಳಲ್ಲಿ ಗೆದ್ದಿವೆ. ಇತರ ಪಕ್ಷಗಳಿಂದ 27 ಮಂದಿ ಜಯಗಳಿಸಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ಪಿಎಂಎಲ್‌ಎನ್ 71 ಸ್ಥಾನಗಳನ್ನು, ಪಿಪಿಪಿ 53 ಮತ್ತು ಇತರರು 27 ಸ್ಥಾನಗಳನ್ನು ಗೆದ್ದಿದ್ದಾರೆ.

ಬಹುಮತವಿಲ್ಲದೆ ಚುನಾವಣೆಯಲ್ಲಿ ವಿಜಯ ಘೋಷಿಸಿದ ನವಾಜ್‌ ಷರೀಫ್‌!

ಮೈತ್ರಿಗೆ ಪಿಟಿಐ ನಕಾರ:

ಇಮ್ರಾನ್‌ ಖಾನ್‌ ಜೈಲಿನಲ್ಲಿರುವ ಕಾರಣ ಅವರ ಪಕ್ಷದ ಎಲ್ಲಾ ಸದಸ್ಯರು ಪಕ್ಷೇತರಾಗಿ ಸ್ಪರ್ಧಿಸಿದ್ದರು. ಇವರೇ ಅತಿಹೆಚ್ಚು ಸ್ಥಾನದಲ್ಲಿ ಜಯಗಳಿಸಿರುವ ಕಾರಣ ಸರ್ಕಾರ ರಚನೆಗೆ ಭುಟ್ಟೋ ಹಾಗೂ ಷರೀಫ್‌ ಇವರನ್ನು ಸಂಪರ್ಕಿಸಿದ್ದು, ಮೈತ್ರಿಯ ಮಾತುಕತೆ ನಡೆಸಿದ್ದಾರೆ. ಆದರೆ ಮೈತ್ರಿ ಮಾಡಿಕೊಳ್ಳಲು ಪಿಟಿಐ ನಿರಾಕರಿಸಿದೆ. ಪ್ರಮುಖ ಪಕ್ಷಗಳಲ್ಲದೇ ಹಲವು ಉಗ್ರ ಸಂಘಟನೆಗಳು ಸೇರಿದಂತೆ ಸಾಕಷ್ಟು ಪಕ್ಷಗಳು ಈ ಬಾರಿ ಸ್ಪರ್ಧಿಸಿದ್ದವು. ಅತಂತ್ರ ಸ್ಥಿತಿ ನಿರ್ಮಾಣವಾದರೆ ಸರ್ಕಾರ ರಚನೆ ಮಾಡುವುದು ಭಾರಿ ಸವಾಲಿನ ಕೆಲಸವಾಗಲಿದೆ.

ಹಿಂಸೆ ನಡುವೆಯೇ ಪಾಕಿಸ್ತಾನ ಸಂಸತ್ ಚುನಾವಣೆ: ನವಾಜ್‌ ಮತ್ತು ಇಮ್ರಾನ್‌ ಪಕ್ಷದ ಮಧ್ಯೆ ಟಫ್‌ ಪೈಟ್‌

ಗೆಲುವು ಘೋಷಿಸಿಕೊಂಡ ನವಾಜ್‌:

ಮತ್ತೊಂದೆಡೆ ಬಹುಮತಕ್ಕೆ ಸಾಕಷ್ಟು ದೂರದಲ್ಲಿದ್ದರೂ ಮಾಜಿ ಪ್ರಧಾನಿ ನವಾಜ್ ಷರೀಫ್‌ ತಮ್ಮ ಗೆದ್ದಿರುವುದಾಗಿ ಘೋಷಿಸಿಕೊಂಡಿದ್ದು, ಶೀಘ್ರವೇ ಮೈತ್ರಿ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದಾರೆ.

Scroll to load tweet…