ತಮ್ಮ ಮಧ್ಯೆ ಮಲಗುವ ಕಂದನಿಗೆ ಇಂಡಿಯಾ ಅಂತ ಹೆಸರಿಟ್ಟ ಬಾಂಗ್ಲಾ-ಪಾಕ್ ಜೋಡಿ
ಪಾಕಿಸ್ತಾನ ಹಾಗೂ ಬಾಂಗ್ಲಾ ಭಾರತದ ನೆರೆಯ ದೇಶಗಳು, ಭಾರತದ ಮೇಲೆ ಈ ದೇಶಗಳ ಜನರಿಗೆ ಅಂತಹ ಬಾಂಧವ್ಯವೇನಿಲ್ಲ. ಆದರೂ ಪಾಕಿಸ್ತಾನ ಹಾಗೂ ಬಾಂಗ್ಲಾದ ಜೋಡಿಯೊಂದು ತಮ್ಮ ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿದೆ. ಏಕಿರಬಹುದು?

ಕರಾಚಿ: ಪಾಕಿಸ್ತಾನ ಹಾಗೂ ಬಾಂಗ್ಲಾ ಭಾರತದ ನೆರೆಯ ದೇಶಗಳು, ಭಾರತದ ಮೇಲೆ ಈ ದೇಶಗಳ ಜನರಿಗೆ ಅಂತಹ ಬಾಂಧವ್ಯವೇನಿಲ್ಲ. ಆದರೂ ಪಾಕಿಸ್ತಾನ ಹಾಗೂ ಬಾಂಗ್ಲಾದ ಜೋಡಿಯೊಂದು ತಮ್ಮ ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿದೆ. ಏಕಿರಬಹುದು? ಇವರಿಬ್ಬರಿಗೆ ಭಾರತದ ಮೇಲೆ ಅಭಿಮಾನವಿರಬಹುದೇ? ಬದಲಾದ ವಾಸ್ತವ ಸ್ಥಿತಿಯಲ್ಲಿ ಭಾರತಕ್ಕೆ ಜಗತ್ತು ನೀಡುತ್ತಿರುವ ಮಾನ್ಯತೆಯ ಪರಿಣಾಮ ಇದು ಇರಬಹುದೇನೋ ಎಂದೆಲ್ಲಾ ನೀವು ಯೋಚಿಸ್ತೀದ್ದೀರಾ. ಹಾಗಿದರೆ ನಿಮ್ಮ ಯೋಚನೆಗೆ ಬ್ರೇಕ್ ಹಾಕಿ. ಅಂತಹ ಅಭಿಮಾನವೇನು ಭಾರತದ ಮೇಲೆ ಈ ಜೋಡಿಗಿಲ್ಲ. ಆದರೂ ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿರುವುದಕ್ಕೆ ತಮಾಷೆಯ ಕಾರಣ ಕೊಟ್ಟಿದೆ ಈ ಜೋಡಿ.
ಸಾಮಾನ್ಯವಾಗಿ ಪುಟ್ಟ ಮಕ್ಕಳು (Little children) ಅಪ್ಪ ಅಮ್ಮನ ಮಧ್ಯೆಯೇ ಮಲಗುವುದು ಸಾಮಾನ್ಯ. ಹಾಗೆಯೇ ಈ ಜೋಡಿಗೆ ಪುಟ್ಟ ಮಗುವಿದ್ದು, ಈ ಜೋಡಿಯ ಜೊತೆಯೇ ಪುಟಾಣಿ ನಿದ್ದೆಗೆ ಜಾರುತ್ತದೆ. ಇದೇ ಕಾರಣಕ್ಕೆ ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದಾಗಿ ದಂಪತಿ ಹೇಳಿದ್ದಾರೆ. ಭೌಗೋಳಿಕವಾಗಿ ಬಾಂಗ್ಲಾದೇಶ ಹಾಗೂ ಪಾಕಿಸ್ಥಾನದ ಮಧ್ಯೆ ಭಾರತ ಬರುತ್ತದೆ. ಈ ಜೋಡಿ ಬಾಂಗ್ಲಾ (Bangladesh) ಹಾಗೂ ಪಾಕಿಸ್ತಾನದವರಾಗಿರುವುದರಿಂದ (Pakistan) ತಮಗೆ ಹುಟ್ಟುವ ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದಾಗಿ ಈ ಜೋಡಿ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಇದನ್ನು ಹಂಚಿಕೊಂಡಿದ್ದು, ಇದಕ್ಕೆ ಅನೇಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಸಂಗೀತಗಾರ ಒಮರ್ ಈಶ ಎಂಬುವವರು ಫೇಸ್‌ಬುಕ್‌ನಲ್ಲಿ (Facebook) ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹಾಗೂ ಅವರ ಪತ್ನಿ ಹೇಗೆ ಮಗನನ್ನು ತಮ್ಮ ಮಧ್ಯೆ ಮಲಗಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಾರ್ಡರ್ ಸಿನಿಮಾಗೆ ಸ್ಫೂರ್ತಿಯಾಗಿದ್ದ 1971ರ ಇಂಡೋ-ಪಾಕ್ ಯುದ್ಧದ ವೀರ ರಾಥೋಡ್ ನಿಧನ
ಎಲ್ಲಾ ಹೊಸ ಪೋಷಕರಿಗೆ ಎಚ್ಚರಿಕೆ ಹಾಗೂ ನಾವು ಮಾಡಿದಂತೆ ಮಾಡಿದ ಎಲ್ಲಾ ಪೋಷಕರಿಗೆ ನನ್ನ ಸಂತಾಪಗಳು. ನಾನು ಹಾಗೂ ನನ್ನ ಪತ್ನಿ ಬೇಗಂ ನಮ್ಮ ಮೊದಲ ಮಗು ಇಬ್ರಾಹಿಂ ಚಿಕ್ಕ ಮಗುವಾಗಿದ್ದಾಗ ಆತನನ್ನು ನಮ್ಮ ಜೊತೆಯಲ್ಲೇ ಮಲಗಿಸಿಕೊಳ್ಳುವ ಮೂಲಕ ಸಣ್ಣ ತಪ್ಪು ಮಾಡಿದೆವು. ಹೊಸದಾಗಿ ಪೋಷಕರಾದ ಎಲ್ಲರಿಗೂ ಮಗುವಿನ ಬಗ್ಗೆ ಅತೀವ ಕಾಳಜಿ ಇರುತ್ತದೆ. ಹೀಗಾಗಿ ನಾವು ಆತನನ್ನು ನಮ್ಮ ಜೊತೆಯೇ ಮಲಗಿಸಿಕೊಳ್ಳುತ್ತಿದ್ದೆವು. ಈಗ ನಾವು ಆತನಿಗೆ ಮಲಗಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದರೂ ಸಹ ಆತ ನಮ್ಮ ಮಧ್ಯೆಯೇ ಮಲಗುತ್ತಾನೆ. ನಾನು ಪಾಕಿಸ್ತಾನಿ ಆಗಿರುವುದರಿಂದ ಹಾಗೂ ನನ್ನ ಪತ್ನಿ ಬಾಂಗ್ಲಾದೇಶಿಯಾಗಿರುವುದರಿಂದ ನಾವು ನನ್ನ ಮಗ ಇಬ್ರಾಹಿಂಗೆ (Ibrahim) ಹೊಸ ಹೆಸರನ್ನು ಇಟ್ಟಿದ್ದೇವೆ. ನಾವು ಈಗ ಅವನನ್ನು ಭಾರತ/ಇಂಡಿಯಾ ಎಂದು ಕರೆಯುತ್ತೇವೆ. ಆತ ಪಾಕಿಸ್ತಾನಿ ಹಾಗೂ ಬಾಂಗ್ಲಾದೇಶಿ ಪೋಷಕರ ಮಧ್ಯೆ ಇದ್ದಾನೆ. ಹಾಗೂ ಇಂಡಿಯಾ ನನ್ನ ಜೀವನದಲ್ಲಿ ಸಾಕಷ್ಟು ಹುಚ್ಚು ಸಮಸ್ಯೆಗೆ ಕಾರಣವಾಗಿದೆ ಎಂದು ಆತ ಬರೆದುಕೊಂಡಿದ್ದಾನೆ.
ದಂಪತಿ ತಮ್ಮ ಮಧ್ಯೆ ಮಗು ಮಲಗಿರುವ ಫೋಟೋದೊಂದಿಗೆ ಈ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಫೇಸ್‌ಬುಕ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕ ಪೋಷಕರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ನಮಗೂ ಒಬ್ಬ ಇಂಡಿಯಾ ಹುಟ್ಟಿದ್ದು, ಆತ ನಮ್ಮ ಹಾಸಿಗೆಯ ಶೇಕಡಾ 50 ಜಾಗವನ್ನು ಆಕ್ರಮಿಸಿಕೊಳ್ಳುತ್ತಾನೆ. ಬಳಿಕ ನನ್ನ ಹೆಂಡತಿಯನ್ನು ಒದ್ದು ಕೆಳಗೆ ಬೀಳಿಸುತ್ತಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತೀಯರು ಕೂಡ ಇದಕ್ಕೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಭಾರತ ಮತ್ತೆ ಬಾಂಗ್ಲಾದೇಶದ ನೆರವಿಗೆ ಧಾವಿಸಿದೆ. ಇಲ್ಲದಿದ್ದರೆ ನೀವು ಬಾಂಗ್ಲಾವನ್ನು ಮಕ್ಕಳ ಕಾರ್ಖಾನೆ ಮಾಡ್ತೀರಿ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.
Indo Pak ties ರಾಜಕೀಯ ಬದಿಗಿಟ್ಟು ಅಭಿಮಾನಿಗಳೇಕೆ ಇಂಡೋ ಪಾಕ್ ಪಂದ್ಯ ಆನಂದಿಸಬಾರದು? ಪಿಸಿಬಿ ಪ್ರಶ್ನೆ
ಮತ್ತೊಬ್ಬ ನೋಡುಗರು ಬಹುಶಃ ಫೋಟೋಗ್ರಾಪರ್ ಅಮೆರಿಕದವ (America) ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಮರ್ ಇಶಾ, ಈ ಫೋಟೋವನ್ನು ನನ್ನ ಸಹೋದರಿ ತೆಗೆದಿದ್ದಾಳೆ. ಆಕೆ ಅಮೆರಿಕಾದಲ್ಲಿ ವಾಸವಿದ್ದಾಳೆ. ಹಾಗೂ ಆಕೆ ಅಮೆರಿಕಾ ಪ್ರಜೆಯಾಗಿದ್ದಾಳೆ ಹಾಗಾಗಿ ಇದು ಅಮೆರಿಕಾದವರೆ ತೆಗೆದ ಫೋಟೋ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟ್ ಭಾರತ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಿ ನೆಟ್ಟಿಗರ ನಡುವೆ ಹಾಸ್ಯ ಕಾಲೆಳೆಯುವುದಕ್ಕೆ ಕಾರಣವಾಗಿದೆ.