Asianet Suvarna News Asianet Suvarna News

Indo Pak ties ರಾಜಕೀಯ ಬದಿಗಿಟ್ಟು ಅಭಿಮಾನಿಗಳೇಕೆ ಇಂಡೋ ಪಾಕ್ ಪಂದ್ಯ ಆನಂದಿಸಬಾರದು? ಪಿಸಿಬಿ ಪ್ರಶ್ನೆ

  • ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಟೂರ್ನಿ ನಡೆಸಿದ ಪಿಸಿಬಿ
  • ಭಾರತದ ಜೊತಗೆ ಟೂರ್ನಿ ಆಯೋಜಿಸಲು ಕರಸರತ್ತು
  • ರಾಜಕೀಯ ಬದಿಗಿಡಿ, ಕ್ರಿಕೆಟ್ ಆನಂದಿಸೋಣ ಎಂದ ಪಿಸಿಬಿ
unfair to keep fans away from India Pakistan contests Hopeful To Schedule Bilateral series says PCB Chairman Ramiz Raja ckm
Author
Bengaluru, First Published Apr 7, 2022, 4:56 PM IST

ಪಾಕಿಸ್ತಾನ(ಏ.07): ಶ್ರೀಲಂಕಾ ತಂಡದ ಮೇಲಿನ ಭಯೋತ್ಪದನಾ ದಾಳಿ ಬಳಿಕ ಪಾಕಿಸ್ತಾನದಲ್ಲಿ ಕ್ರಿಕಟ್ ಆಯೋಜನೆ ಸವಲಾಗಿತ್ತು. ಇದರ ನಡುವೆ ಹಲವು ಯತ್ನಗಳು ನಡೆದರೂ ಮುಂದುವರಿಯಲಿಲ್ಲ. ಆದರೆ ರಮೀಜ್ ರಾಜಾ ಅದ್ಯಕ್ಷತೆಯಲ್ಲಿ ಪಿಸಿಬಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆಯೋಜಿಸಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ, ಭಾರತದ ಜೊತೆ ಕ್ರಿಕೆಟ್ ಪುನರ್ ಆರಂಭಿಸಲು ಉತ್ಸುಕರಾಗಿದ್ದಾರೆ.

ಪಾಕಿಸ್ತಾನದಲ್ಲಿನ ಇತ್ತೀಚಿಗಿನ ಸರಣಿ, ಭಾರತದ ವಿರುದ್ಧದ ಸಂಬಂಧ, ಐಪಿಎಲ್ ಸೇರಿದಂತೆ ಮುಂದಿನ ಕ್ರಿಕೆಟ್ ಚಟುವಟಿಕೆಗಳ ಕುರಿತು ರಮೀಜ್ ರಾಜಾ ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಪುನರ್ ಆರಂಬಿಸಲು ರಮೀಜ್ ರಾಜಾ ಉತ್ಸುಕರಾಗಿದ್ದಾರೆ. ಪಾಕಿಸ್ತಾನ ತಂಡದ ಭಾರತ ಪ್ರವಾಸ ಅಥವಾ ತಟಸ್ಥ ತಾಣದಲ್ಲಿ ಸರಣಿ ಆಯೋಜಿಸಲು ಪಾಕಿಸ್ತಾನ ತುದಿಗಾಲಲ್ಲಿ ನಿಂತಿದೆ. ಆದರೆ ರಾಜತಾಂತ್ರಿಕ ಕಾರಣಗಳು ಸರಣಿಗೆ ಅಡ್ಡಿಯಾಗುತ್ತಿದೆ. ಈ ಕುರಿತು ಮಾತನಾಡಿರುವ ರಮೀಜ್ ರಾಜಾ ರಾಜಕೀಯ ಬದಿಗಿಟ್ಟು, ಅಭಿಮಾನಿಳು ಭಾರತ ಹಾಗೂ ಪಾಕಿಸ್ತಾನದ ಪಂದ್ಯವನ್ನು ಯಾಕೆ ಆನಂದಿಸಿಬಾರದು. ನಾವು ಯಾಕೆ ಅಭಿಮಾನಿಗಳ ತುಡಿತವನ್ನು ಮೊಟಕುಗೊಳಿಸುವುದು ಎಂದಿದ್ದಾರೆ. ಈ ಮೂಲಕ ಭಾರತ ಪಾಕಿಸ್ತಾನ ಪಂದ್ಯಗಳು ಮತ್ತೆ ಆರಂಭಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ್ದಾರೆ.

Ramiz Raja ಯಾರು ಐಪಿಎಲ್‌ನಲ್ಲಿ ಆಡಲು ಹೋಗ್ತಾರೆ ನೋಡೋಣ ಎಂದು ಸವಾಲು ಹಾಕಿದ ಪಿಸಿಬಿ ಅಧ್ಯಕ್ಷ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಪಾಕಿಸ್ತಾನದ ಆತ್ಮವಿಶ್ವಾಸ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಯಾವುದೇ ಅಹಿತಕರ ಘಟನೆಗಳು ಇಲ್ಲದೆ, ಕ್ರಿಕೆಟ್ ಟೂರ್ನಿಗೂ ಯಾವುದೇ ಅಪಾಯವಿಲ್ಲದೆ  ಸರಣಿ ಆಯೋಜನೆ ಮಾಡಲಾಗಿತ್ತು. ಇದು ಪಿಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಕುರಿತು ಸೌರವ್ ಗಂಗೂಲಿ ಜೊತೆ ಮಾತನಾಡಿದ್ದೇನೆ. ಐಸಿಸಿ ಸಭೆಯಲ್ಲೂ ಮಾತನಾಡಿದ್ದೇನೆ. ಉತ್ತಮ ದಿನಗಳು ಬರವು ನಿರೀಕ್ಷೆ ಇದೆ ಎಂದು ರಮೀಜ್ ರಾಜಾ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷನಾದ ಮೇಲೆ ಪಾಕಿಸ್ತಾನ ಕ್ರಿಕೆಟ್ ಹಲವು ಬದಲಾವಣೆ ಕಂಡಿದೆ. ಈ ಕುರಿತು ವಿವರಿಸಿದ ರಮೀಜ್  ರಾಜಾ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಮೊದಲ ಬಾರಿಗೆ ಮಣಿಸಿದ ಪಾಕಿಸ್ತಾನ ಸಂಭ್ರಮ ಆಚರಿಸಿತ್ತು. ಇದು ಯಾವತ್ತೂ ನನ್ನ ನೆಪಿನಲ್ಲಿ ಉಲಿಯಲಿದೆ. ಭಾರತವನ್ನು ಸೋಲಿಸಲು ಸಾಧ್ಯವೇ ಇಲ್ಲ ಅನ್ನೋ ಮನಸ್ಥಿತಿಯಿಂದ ಪಾಕಿಸ್ತಾನ ತಂಡವನ್ನು ಹೊರತರವಲ್ಲಿ ಯಶಸ್ವಿಯಾಗಿದ್ದೇನೆ. ಇತ್ತೀಚಿನ ಆಸ್ಟ್ರೇಲಿಯಾ ಸರಣಿಯಲ್ಲೂ ಪಾಕಿಸ್ತಾನದ ಪ್ರದರ್ಶನ ವಿಮರ್ಷ ಮಾಡಬಹುದು. ಸದ್ಯ ಪಾಕಿಸ್ತಾನ ಅತ್ಯಂತ ಬಲಿಷ್ಠ ತಂಡವಾಗಿ ರೂಪುಗೊಂಡಿದೆ ಎಂದು ರಾಜಾ ಹೇಳಿದ್ದಾರೆ.

ಭಾರತ, ಪಾಕ್ ಟಿ20 ಸರಣಿಗೆ ಹೊಸ ಐಡಿಯಾ ಕೊಟ್ಟ ರಮೀಜ್ ರಾಜಾ..!

ನ್ಯೂಜಿಲೆಂಜ್ ತಂಡ ಭದ್ರತೆ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದ ನಿರ್ಧಾರ ನಿಜಕ್ಕೂ ಆಘಾತ ತಂದಿತ್ತು. ಪಾಕಿಸ್ತಾನದಲ್ಲಿ ಸರಣಿ ಆಯೋಜನೆ ಸಾಧ್ಯವೇ ಇಲ್ಲ ಎಂದು ವಿಶ್ವ ಮಾತಾಡಿಕೊಂಡಿತು. ನಮ್ಮ ಎಲ್ಲಾ ಪ್ರಯತ್ನಗಳು ಅಂದು ವ್ಯರ್ಥವಾಗಿತ್ತು. ಆದರೆ ಎಲ್ಲರ ವಿಶ್ವಾಸದೊಂದಿಗೆ ಟೂರ್ನಿ ಆಯೋಜಿಸಿ ಇದೀಗ ಪಾಕಿಸ್ತಾನ ಪ್ರವಾಸಕ್ಕೆ ಇತರ ತಂಡಗಳು ಮುಂದಾಗುವ ಪರಿಸ್ಥಿತಿಯನ್ನು ನಿರ್ಮಿಸಿದ್ದೇವೆ ಎಂದು ರಾಜಾ ಹೇಳಿದ್ದಾರೆ.

ಐಪಿಎಲ್ ಕುರಿತು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಐಪಿಎಲ್ ಯಶಸ್ವಿ ಟೂರ್ನಿ. ಪಾಕಿಸ್ತಾನ ಕೂಡ ಅಷ್ಟೇ ಯಶಸ್ವಿಯಾಗಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ನಡೆಸುತ್ತಿದ್ದೇವೆ. ಐಪಿಎಲ್ ರೀತಿಯಲ್ಲಿ ಹರಾಜು ಪ್ರಕ್ರಿಯೆನ್ನು ಆರಂಭಿಸುತ್ತಿದ್ದೇವೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲೂ ದೇಶ ವಿದೇಶಗಳ ಆಟಗಾರರಿದ್ದಾರೆ. ವರ್ಷದಿಂದ ವರ್ಷಕ್ಕೆ ಯಶಸ್ಸು ಕಾಣುತ್ತಿದೆ. ಇತರ ಟೂರ್ನಿ ಯಾವ ಮಟ್ಟದಲ್ಲಿದೆ ಅನ್ನೋದಕ್ಕಿಂತ ನನಗೆ ಪಾಕಿಸ್ತಾನ ಟೂರ್ನಿ ಯಶಸ್ಸು ಕಾಣುತ್ತಿದೆ ಅನ್ನೋದೇ ಮುಖ್ಯ ಎಂದು ರಾಜಾ ಹೇಳಿದ್ದಾರೆ.

Follow Us:
Download App:
  • android
  • ios