'ಆಪರೇಷನ್ ಸಿಂದೂರ' ವೇಳೆ ಭಾರತದ ಕ್ಷಿपಣಿ ದಾಳಿಯಿಂದ ಹಾನಿಗೊಳಗಾಗಿದ್ದ ತನ್ನ ಸುಕ್ಕೂರ್ ವಾಯುನೆಲೆಯನ್ನು ಪಾಕಿಸ್ತಾನ ಮರುನಿರ್ಮಾಣ ಮಾಡುತ್ತಿದೆ. ಉಪಗ್ರಹ ಚಿತ್ರಗಳು, ಯುಎವಿಗಳಿಗೆ ಮುಖ್ಯ ನೆಲೆಯಾಗಿದ್ದ ಹ್ಯಾಂಗರ್‌ನ ಪುನರ್ನಿರ್ಮಾಣವನ್ನು ಖಚಿತಪಡಿಸಿವೆ. ಇ
ನವದೆಹಲಿ (ಡಿ.3): ಆಪರೇಷನ್ ಸಿಂದೂರ ವೇಳೆ ಭಾರತದ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗಿದ್ದ ತನ್ನ ಸುಕ್ಕೂರ್ ಏರ್‌ಬೇಸ್‌ನ ಅನ್ನು ಪಾಕಿಸ್ತಾನ ಮರು ನಿರ್ಮಾಣ ಮಾಡುತ್ತಿದೆ. ಹೈರೆಸಲ್ಯೂಷನ್ ಉಪಗ್ರಹ ಚಿತ್ರಗಳು ಇದನ್ನು ಸಾಬೀತುಪಡಿಸಿವೆ.
ಈ ಏರ್‌ಬೇಸ್‌ನ (ವಾಯುನೆಲೆ) ಹ್ಯಾಂಗರ್ (ತಂಗುದಾಣ) ಪಾಕಿಸ್ತಾನದ ಮಾನವ ರಹಿತ ವಿಮಾನಗಳಿಗೆ (ಯುಎವಿಗಳು) ಮುಖ್ಯ ನೆಲೆಯಾಗಿದೆ. ಪಹಲ್ಗಾಂ ದಾಳಿಗೆ ಪ್ರತಿಯಾಗಿ ನಡೆದ ಮೇ 10ರ ಆಪರೇಷನ್ ಸಿಂದೂರ ವೇಳೆ ಭಾರತೀಯ ವಾಯುಸೇನೆ ಸುಕ್ಕೂರ್ ಸೇರಿ ಹಲವು ವಾಯುನೆಲೆಗಳ ಮೇಲೆ ಭಾರೀ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದ ತತ್ತರಿಸಿದ್ದ ಪಾಕಿಸ್ತಾನ ಅನಿವಾರ್ಯವಾಗಿ ಕದನ ವಿರಾಮಕ್ಕೆ ಮುಂದೆ ಬಂದಿತ್ತು.
ಭಾರತದ ದಾಳಿಗೆ ಸುಕ್ಕೂರ್ ಏರ್‌ಬೇಸ್ ಉಡೀಸ್ ಆಗಿತ್ತು:
ಭಾರತದ ದಾಳಿಯಿಂದ ಸುಕ್ಕೂರ್ ಏರ್‌ಬೇಸ್‌ಗೆ ಭಾರೀ ಹಾನಿಯಾಗಿತ್ತು. ವೆಂಟರ್ ಸಂಸ್ಥೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಲ್ಲಿ ಹ್ಯಾಂಗರ್ ಸಂಪೂರ್ಣ ಹಾನಿಗೀಡಾಗಿರುವುದು ಖಚಿತವಾಗಿತ್ತು. ಇದೀಗ ಅಕ್ಟೋಬರ್‌ನಿಂದ ಹಾನಿಗೀಡಾದ ಹ್ಯಾಂಗರ್ ಅನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ.
ಹ್ಯಾಂಗರ್‌ನ ಅವಶೇಷ ನಾಶಮಾಡುವ ಕಾರ್ಯ ಸುದೀರ್ಘ ಅವಧಿ ತೆಗೆದುಕೊಳ್ಳಲು ಅಪಾಯಕಾರಿ ವಸ್ತುಗಳು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವುದೇ ಕಾರಣ ಆಗಿರಬಹುದು ಎಂದು ದಿ ಇಂಟೆಲ್ ಲ್ಯಾಬ್‌ನ ಒಎಸ್‌ಎನ್‌ಐಟಿ ತಜ್ಞ, ಗುಪ್ತಚರ ಸಂಶೋಧಕರೂ ಆಗಿರುವ ಡೆಮಿಯನ್ ಸೈಮೋನ್ ಹೇಳಿದ್ದಾರೆ.
ಉಪಗ್ರಹ ಚಿತ್ರದಲ್ಲಿ ಸ್ಪಷ್ಟ:
ಮತ್ತೊಂದು ಉಪಗ್ರಹ ಚಿತ್ರದಲ್ಲಿ ಭಾರತದ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗಿರುವ ನೂರ್ ಖಾನ್ ಬೇಸ್‌ನಲ್ಲಿರುವ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರದಲ್ಲೂ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಸ್ಪಷ್ಟವಾಗಿದೆ.


