ಚುನಾವಣಾ ಅಕ್ರಮ : ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ?
2020ರಲ್ಲಿ ನಡೆದ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ.

ನ್ಯೂಯಾರ್ಕ್: 2020ರಲ್ಲಿ ನಡೆದ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ. ಜಾರ್ಜಿಯಾದಲ್ಲಿ 2020ರಲ್ಲಿ ಅಧ್ಯಕ್ಷಿಯ ಚುನಾವಣೆ ವೇಳೆ, ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಇತರ 18 ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ ಆರೋಪ ಡೊನಾಲ್ಡ್ ಟ್ರಂಪ್ ಮೇಲಿದೆ. ಈ ಬಗ್ಗೆ ಅಟ್ಲಾಂಟಾದಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿಸಿ ಕೆಲ ಸಮಯದ ನಂತರ ಟ್ರಂಪ್ ಅವರನ್ನು ಬಿಡುಗಡೆಗೊಳಿಸಲಾಗಿದ್ದು, ಅವರು 20 ನಿಮಿಷ ಜೈಲಿನಲ್ಲಿ ಕಳೆದಿದ್ದಾರೆ ಎಂದು ತಿಳಿದು ಬಂದಿದೆ. ಕ್ರಿಮಿನಲ್ ಆರೋಪ ಹೊತ್ತು ಬಂಧಿತರಾಗಿರುವ ಅಮೆರಿಕಾದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾಗಿದ್ದಾರೆ. ಫುಲ್ಟನ್ ಕೌಂಟಿ ಜೈಲ್ ದಾಖಲೆಗಳ ಪ್ರಕಾರ ಟ್ರಂಪ್‌ಗೆ ಕೈದಿ ಸಂಖ್ಯೆ P01135809 ನೀಡಲಾಗಿತ್ತು ಎಂದು ತಿಳಿದು ಬಂದಿದೆ.
ಟ್ರಂಪ್ ಮಗ್‌ಶಾಟ್‌ನ್ನು ಪೊಲೀಸರು ಬಿಡುಗಡೆಗೊಳಿಸಿದ್ದು ಸ್ವತಃ ಟ್ರಂಪ್ ಕೂಡ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. (ಮಗ್ ಶಾಟ್ ಎಂದರೆ ಪೊಲೀಸ್ ದಾಖಲೆಗಾಗಿ ತೆಗೆಯಲ್ಪಟ್ಟ ಆರೋಪಿಯ ಛಾಯಾಚಿತ್ರವಾಗಿದೆ). 2021 ಜನವರಿಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಅಮಾನತುಪಡಿಸಿತ್ತು. ಈ ವೇಳೆ ಟ್ರಂಪ್‌ಗೆ 88 ಲಕ್ಷ ಫಾಲೋವರ್ಸ್‌ಗಳಿದ್ದರು. ಬಂಧಿಸಿ ಬಿಡುಗಡೆಯಾದ ನಂತರ ತನ್ನ ನ್ಯೂಜೆರ್ಸಿಯಲ್ಲಿರುವ ಗಾಲ್ಫ್ ಕ್ಲಬ್‌ಗೆ ಹಿಂತಿರುಗುವ ಮೊದಲು ಟ್ರಂಪ್ ಜೈಲಿನಲ್ಲಿ ಕೇವಲ 20 ನಿಮಿಷಗಳನ್ನು ಕಳೆದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಧ್ಯಕ್ಷೀಯ ಚುನಾವಣಾ ಅಕ್ರಮ, ಕೋರ್ಟ್‌ಗೆ ಶರಣಾಗುತ್ತೇನೆಂದ ಡೋನಾಲ್ಡ್ ಟ್ರಂಪ್