Asianet Suvarna News Asianet Suvarna News

ಅಧ್ಯಕ್ಷೀಯ ಚುನಾವಣಾ ಅಕ್ರಮ, ಕೋರ್ಟ್‌ಗೆ ಶರಣಾಗುತ್ತೇನೆಂದ ಡೋನಾಲ್ಡ್‌ ಟ್ರಂಪ್‌

2020ರ ಅಧ್ಯಕ್ಷೀಯ ಚುನಾವಣೆ ವೇಳೆ ಜಾರ್ಜಿಯಾ ರಾಜ್ಯದ ಚುನಾವಣಾ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ  ಕೋರ್ಟ್‌ಗೆ ಶರಣಾಗುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

Donald Trump  Says He Will Surrender Thursday In Georgia Election Fraud Case gow
Author
First Published Aug 23, 2023, 2:36 PM IST

ವಾಷಿಂಗ್ಟನ್‌ (ಆ.23): 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಜಾರ್ಜಿಯಾ ರಾಜ್ಯದ ಚುನಾವಣಾ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಜಾರ್ಜಿಯಾ ಕೋರ್ಚ್‌ಗೆ ಶರಣಾಗುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ‘ನಿಮಗೆ ನಂಬಲು ಸಾಧ್ಯವೇ?, ಬಂಧಕನಕ್ಕೊಳಪಡಲು ನಾನು ಗುರುವಾರ ಜಾರ್ಜಿಯಾದ ಅಂಟ್ಲಾಂಟಾಗೆ ಹೋಗುತ್ತಿದ್ದೇನೆ’ ಎಂದು ಟ್ರಂಪ್‌ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಕೋರ್ಚ್‌ 1.65 ಕೋಟಿ ರು. ಬಾಂಡ್‌ ನಿಗದಿ ಪಡಿಸಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಟ್ರಂಪ್‌ 4ನೇ ಬಾರಿ ನ್ಯಾಯಾಲಯಕ್ಕೆ ಶರಣಾಗುತ್ತಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷರಾಗಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಮೊದಲಿಗ ಎಂಬ ಕುಖ್ಯಾತಿಗೂ ಟ್ರಂಪ್‌ ಪಾತ್ರರಾಗಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವಿರುದ್ಧ ಕುತಂತ್ರ ನಡೆಸಲಾಗಿದೆ ಎಂದು ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದಲ್ಲದೇ, 2024ರ ಚುನಾವಣೆಗೆ ಪ್ರಚಾರವನ್ನೂ ಸಹ ಆರಂಭಿಸಿದ್ದಾರೆ. ಒಂದು ವೇಳೆ ಈ ಪ್ರಕರಣದಲ್ಲಿ ಟ್ರಂಪ್‌ ಶಿಕ್ಷೆಗೊಳಪಟ್ಟರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಟ್ರಂಪ್‌ ಕೋರ್ಚ್‌ಗೆ ಹಾಜರಾಗುವ ಸಮಯದಲ್ಲಿ ಕೋರ್ಚ್‌ ಆವರಣದಲ್ಲಿ ಲಾಕ್ಡೌನ್‌ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಜಿಯಾದಲ್ಲಿ 2020ರ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಟ್ರಂಪ್‌ ಪಿತೂರಿ ನಡೆಸಿದ್ದರು ಎಂದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರ್ಥಿಕ ಹಿಂಜರಿತದತ್ತ ಚೀನಾ, ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯ ದೇಶದಲ್ಲಿ ಗಂಭೀ

ಭಾರತದ ಉತ್ಪನ್ನಗಳ ಮೇಲೆ ಭಾರಿ ತೆರಿಗೆ: ಟ್ರಂಪ್‌ ಎಚ್ಚರಿಕೆ
ತಾವು ಅಮೆರಿಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರಿ ತೆರಿಗೆ ಹೇರುವ ಮೂಲಕ ಭಾರತದ ಧೋರಣೆಗೆ ಪ್ರತೀಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ರಿಪಬ್ಲಿಕನ್‌ ಪಕ್ಷದ ಅಮೆರಿಕ ಅಧ್ಯಕ್ಷೀಯ ಸ್ಥಾನಾಕಾಂಕ್ಷಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ.

ಅಮೆರಿಕ ಅಧ್ಯಕೀಯ ಚುನಾವಣೆ: ಭಾರತೀಯ ಮೂಲದ ವಿವೇಕ್‌ 2ನೇ ಸ್ಥಾನಕ್ಕೆ, ಟ್ರಂಪ್‌ಗೆ

ಭಾರತದಲ್ಲಿ ಹಾರ್ಲೆ ಡೇವಿಡ್ಸನ್‌ ಬೈಕ್‌ ಸೇರಿದಂತೆ ಹಲವು ಅಮೆರಿಕ ಉತ್ಪನ್ನಗಳ ಮೇಲೆ ಭಾರಿ ತೆರಿಗೆ ಹೇರಲಾಗುತ್ತಿದೆ. ಭಾರತವು ಇದೇ ಧೋರಣೆ ಮುಂದುವರಿಸಿದರೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಗೆದ್ದರೆ, ಅಮೆರಿಕದಲ್ಲಿನ ಭಾರತೀಯ ಉತ್ಪನ್ನಗಳ ಬಗ್ಗೆಯೂ ಇದೇ ಧೋರಣೆ ಅನುಸರಿಸಲಾಗುತ್ತದೆ ಎಂದು ಅವರು ಸೋಮವಾರ ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದಾರೆ.

‘ಭಾರತದ ಬೈಕ್‌ ಕಂಪನಿಗಳು ಅಮೆರಿಕದಲ್ಲಿ ಈಗ ಮಾರಾಟ ಮಾಡುತ್ತಿರುವುದಕ್ಕೆ ಯಾವುದೇ ತೆರಿಗೆ ಹಾಕುತ್ತಿಲ್ಲ. ಆದರೆ ಅಮೆರಿಕ ಬೈಕ್‌ ಕಂಪನಿಗಳ ಬೈಕ್‌ಗಳ ಮೇಲೆ ಶೇ.100, ಶೇ.200 ಹೀಗೆ ಭಾರಿ ತೆರಿಗೆ ಹಾಕಲಾಗುತ್ತಿದೆ. ಏಕೆ ಈ ತಾರತಮ್ಯ?’ ಎಂದು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios