ನಮ್ಮಆರ್ಥಿಕತೆ ನಿಮ್ಮನ್ನೇ ಅವಲಂಬಿಸಿದೆ ನಮ್ಮಲ್ಲಿಗೆ ಬನ್ನಿ ಪ್ಲೀಸ್: ಭಾರತೀಯರಿಗೆ ಮಾಲ್ಡೀವ್ಸ್ ಸಚಿವ ಮನವಿ
ದುಬೈನಲ್ಲಿ ಪಿಟಿಐ ವಿಡಿಯೋ ಸುದ್ದಿಸಂಸ್ಥೆ ಜತೆ ಮಾತನಾಡಿದ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್, ನಾವು ಭಾರತೀಯರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಪ್ರವಾಸೋದ್ಯಮ ಸಚಿವನಾಗಿ, ದಯವಿಟ್ಟು ಮಾಲ್ಡೀವ್ಸ್ ಪ್ರವಾಸೋದ್ಯಮದ ಭಾಗವಾಗಲು ನಾನು ಭಾರತೀಯರಿಗೆ ಕೋರುವೆ ಎಂದಿದ್ದಾರೆ.
ದುಬೈ: ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಸರ್ಕಾರದ ಭಾರತ ವಿರೋಧಿ ಧೋರಣೆಗೆ ಬೇಸತ್ತು ಅಲ್ಲಿಗೆ ಹೋಗುವುದನ್ನೇ ಕಡಿಮೆ ಮಾಡಿದ್ದಾರೆ. ಇದರಿಂದ ಕಂಗೆಟ್ಟಿರುವ ಮಾಲ್ಡೀವ್ಸ್ ಸರ್ಕಾರ, ‘ನಮ್ಮ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ದೇಶಕ್ಕೆ ಬಂದು ಆರ್ಥಿಕತೆಗೆ ಕೊಡುಗೆ ನೀಡಬೇಕು’ ಎಂದು ಮನವಿ ಮಾಡಿದೆ.
ದುಬೈನಲ್ಲಿ ಪಿಟಿಐ ವಿಡಿಯೋ ಸುದ್ದಿಸಂಸ್ಥೆ ಜತೆ ಮಾತನಾಡಿದ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್, ‘ನಮ್ಮ ಹೊಸ ಚುನಾಯಿತ ಸರ್ಕಾರ ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತದೆ. ನಾವು ಯಾವಾಗಲೂ ಶಾಂತಿ ಮತ್ತು ಸೌಹಾರ್ದ ವಾತಾವರಣ ಉತ್ತೇಜಿಸುತ್ತೇವೆ. ನಾವು ಭಾರತೀಯರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಪ್ರವಾಸೋದ್ಯಮ ಸಚಿವನಾಗಿ, ದಯವಿಟ್ಟು ಮಾಲ್ಡೀವ್ಸ್ ಪ್ರವಾಸೋದ್ಯಮದ ಭಾಗವಾಗಲು ನಾನು ಭಾರತೀಯರಿಗೆ ಕೋರುವೆ. ನಮ್ಮ ಆರ್ಥಿಕತೆ ಪ್ರವಾಸೋದ್ಯಮದ ಮೇಲೇ ಅವಲಂಬಿತವಾಗಿದೆ’ ಎಂದರು.
ಭಾರತ ಧ್ವಜಕ್ಕೆ ಅಗೌರವ ತೋರಿ ಪೋಸ್ಟ್, ವಿವಾದ ಬಳಿಕ ಕ್ಷಮೆ ಯಾಚಿಸಿದ ಮಾಲ್ಡೀವ್ಸ್ ಮಾಜಿ ಸಚಿವೆ!
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಲಕ್ಷದ್ವೀಪವನ್ನು ಮಾಲ್ಡೀವ್ಸ್‌ಗೆ ಪ್ರವಾಸಿ ತಾಣ ಮಾಡಲು ಕರೆ ನೀಡಿದ್ದರು. ಆಗ ಮಾಲ್ಡೀವ್ಸ್ ಸರ್ಕಾರ ಭಾರತ ವಿರೋಧಿ ಧೋರಣೆ ತಾಳಿದ್ದರಿಂದ ಪ್ರವಾಸಿಗರ ಪ್ರಮಾಣ ಗಣನೀಯವಾಗಿ ಕುಸಿದಿತ್ತು.
ಚೀನಾಗೆ ಬೆಂಬಲಿಸಿ ಭಾರತದ ಬಳಿ ನೆರವಿಗೆ ಕೈ ಚಾಚಿದ ಮಾಲ್ಡೀವ್ಸ್: ಅಗತ್ಯ ವಸ್ತುಗಳ ಪೂರೈಕೆಗೆ ಭಾರತ ಒಪ್ಪಿಗೆ