Asianet Suvarna News Asianet Suvarna News

ಅಮೆರಿಕದ ಮೇಲೆ ಮತ್ತೊಂದು ದಾಳಿಗೆ ಯೋಜಿಸಿದ್ದ ಬಿನ್ ಲಾಡೆನ್, ನೇವಿ ಸೀಲ್ ದಾಖಲೆಯಲ್ಲಿ ಬಹಿರಂಗ!

ಒಸಾಮಾ ಬಿನ್ ಲಾಡೆನ್ 9/11 ದಾಳಿಯನ್ನು ಪುನರಾವರ್ತಿಸಲು ಬಹಳ ಉತ್ಸುಕನಾಗಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.  ಆದರೆ, ತಮ್ಮ ಎದುರಿಗಿದ್ದ ಕಷ್ಟಕರವಾದ ಭದ್ರತಾ ಪರಿಸ್ಥಿತಿಗಳ ಬಗ್ಗೆ ಆತ ಎಚ್ಚರ ಹೊಂದಿದ್ದ ಎನ್ನುವುದು ನೇವಿ ಸೀಲ್ಸ್ ನೀಡಿದ ದಾಖಲೆಯಲ್ಲಿ ಬಹಿರಂಗವಾಗಿದೆ.
 

Osama bin Laden was very eager to replicate the September 11 attacks Show Navy SEAL Documents san
Author
Bengaluru, First Published Apr 25, 2022, 5:34 PM IST | Last Updated Apr 25, 2022, 5:34 PM IST

ವಾಷಿಂಗ್ಟನ್ (ಏ.25): ಅಂದಾಜು 3 ಸಾವಿರ ವ್ಯಕ್ತಿಗಳನ್ನು ಬಲಿ ಪಡೆದುಕೊಂಡ 2011ರ ಸೆಪ್ಟೆಂಬರ್ 11 ರಂದು ನಡೆದ ವಿಶ್ವ ವಾಣಿಜ್ಯ ಅವಳಿ ಕಟ್ಟಡಗಳ ಮೇಲಿನ ದಾಳಿಯ ಬಳಿಕ, ಒಸಾಮಾ ಬಿನ್ ಲಾಡೆನ್ (Osama bin Laden ) ಅಮೆರಿಕ ವಿರುದ್ಧ ಇಂಥದ್ದೇ ಮತ್ತೊಂದು ದಾಳಿ ಮಾಡುವ ಯೋಜನೆ ರೂಪಿಸಿದ್ದ ಎನ್ನುವುದು ಬಹಿರಂಗವಾಗಿದೆ.

ಸಿಬಿಎಸ್ ನ್ಯೂಸ್ ಪ್ರಕಾರ, 2011 ರಲ್ಲಿ ಬಿನ್ ಲಾಡೆನ್ ಹತ್ಯೆಯ ನಂತರ ಅಮೆರಿಕದ ನೇವಿ ಸೀಲ್‌ಗಳು (US Navy Seals) ವಶಪಡಿಸಿಕೊಂಡ ಮತ್ತು ವರ್ಗೀಕರಿಸಿದ ಪೇಪರ್‌ಗಳಲ್ಲಿ ಈ ಮಾಹಿತಿಗಳು ಪತ್ತೆಯಾಗಿದೆ. ಅಲ್ ಖೈದಾ (Al Queda) ನಾಯಕ 2ನೇ ಬಾರಿಯ ದಾಳಿಯ ವೇಳೆ ಪ್ರಯಾಣಿಕರ ವಿಮಾನದ ಬದಲಾಗಿ ಖಾಸಗಿ ಜೆಟ್ ಗಳನ್ನು ಬಳಕೆ ಮಾಡುವ ಯೋಜನೆಯನ್ನು ರೂಪಿಸಿದ್ದ. ಇದನ್ನು 9/11 ದಾಳಿಯ ಫಾಲೋಅಪ್ ದಾಳಿಯಾಗಿ ಬಿನ್ ಲಾಡೆನ್ ಹೆಸರಿಸಿದ್ದ ಎನ್ನವುದು ನೇವಿ ಸೀಲ್ಸ್ ದಾಖಲೆಗಳಲ್ಲಿ ತಿಳಿಸಿದೆ.

ಅದಲ್ಲದೆ, ತಮ್ಮ ಬೆಂಬಲಿಗರಿಗೆ, ಅಮೆರಿಕದ ರೈಲ್ವೇ ಟ್ರ್ಯಾಕ್ ಅನ್ನು (Railway Track) 12 ಮೀಟರ್ ಕತ್ತಿರಿಸುವಂತೆಯೂ ಬಿನ್ ಲಾಡೆನ್ ಪ್ರೋತ್ಸಾಹಿಸಿದ್ದ, ಆ ಮೂಲಕ ನೂರಾರು ಜನರು ಸಾಯಬಹುದು ಎನ್ನುವ ನಿರೀಕ್ಷೆಯನ್ನೂ ಇಟ್ಟಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಲೇಖಕಿ ಮತ್ತು ಇಸ್ಲಾಮಿಕ್ ವಿದ್ವಾಂಸರಾದ ನೆಲ್ಲಿ ಲಾಹೌದ್ (Nelly Lahoud) ಅವರು ತಮ್ಮ ವೃತ್ತಿಜೀವನದ ಬಹುಪಾಲು ಅಲ್-ಖೈದಾ ಸಂಘಟನೆಯ ಬಗ್ಗೆ ಸಂಶೋಧನೆ ಮಾಡಿದ್ದಾರೆ, ಒಸಾಮಾ ಬಿನ್ ಲಾಡೆನ್ ಅವರ ವೈಯಕ್ತಿಕ ಪತ್ರಗಳು ಮತ್ತು ಟಿಪ್ಪಣಿಗಳ ಸಾವಿರಾರು ಪುಟಗಳನ್ನು ಇವರು ಪರಿಶೀಲನೆ ಮಾಡಿದ್ದಾರೆ. 11 ವರ್ಷಗಳ ಹಿಂದೆ ಎರಡು ಡಜನ್ ನೇವಿ ಸೀಲ್‌ಗಳ ತಂಡವನ್ನು ಒಸಾಮಾ ಬಿನ್ ಲಾಡೆನ್ ಅನ್ನು ಕೊಲ್ಲುವ ಅಥವಾ ಸೆರೆಹಿಡಿಯುವ ಸಲುವಾಗಿ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. 60 ನಿಮಿಷಗಳ ಸಂದರ್ಶನದಲ್ಲಿ ಮಾತನಾಡಿದ ಲೌಹಾದ್, 9/11 ದಾಳಿಯ ಬಳಿಕ ಅಮೆರಿಕ ಯಾವುದೇ ಕಾರಣಕ್ಕೂ ಯುದ್ಧಕ್ಕೆ ಹೋಗುವುದಿಲ್ಲ ಎಂದು ಅಲ್ ಖೈದಾ ಕೂಡ ಯೋಚನೆಯನ್ನೂ ಮಾಡಿತ್ತು.

ಆದರೆ, ಅಫ್ಘಾನಿಸ್ತಾನದ ಮೇಲೆ ಅಮೆರಿಕ ದೊಡ್ಡ ಮಟ್ಟದಲ್ಲಿ ಆಕ್ರಮಣ ಮಾಡಿತ್ತು. ಸೆಪ್ಟಂಬರ್ 11 ರ ದಾಳಿಗೆ ಸಂಬಂಧಪಟ್ಟಂತೆ ಅಮೆರಿಕದ ಪ್ರತಿಕ್ರಿಯೆಯಿಂದ ಸ್ವತಃ ಬಿನ್ ಲಾಡೆನ್ ಕೂಡ ಅಚ್ಚರಿ ಪಟ್ಟಿದ್ದಎನ್ನುವುದು ಪತ್ರದಲ್ಲಿ ದಾಖಲಾಗಿದೆ. ಡಿಕ್ಲಾಸಿಫೈಡ್ ಪೇಪರ್‌ಗಳ ಪ್ರಕಾರ, ಅಮೆರಿಕನ್ನರು ಬೀದಿಗಿಳಿಯುತ್ತಾರೆ ಮತ್ತು ಮುಸ್ಲಿಂ ಬಹುಸಂಖ್ಯಾತ ರಾಜ್ಯದಿಂದ ಹಿಂದೆ ಸರಿಯುವಂತೆ ತಮ್ಮ ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ ಎಂದು ಬಿನ್ ಲಾಡೆನ್ ಭಾವಿಸಿದ್ದ  ಎಂದು ಲಾಹೌದ್ ಹೇಳಿದ್ದಾರೆ.

"ಇದು ಒಸಾಮಾ ಬಿನ್ ಲಾಡೆನ್‌ನ ಕಡೆಯಿಂದ ದೊಡ್ಡ ತಪ್ಪು ಲೆಕ್ಕಾಚಾರವಾಗಿತ್ತು' ಎಂದು ಲಾಹೌದ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಲಾಹೌದ್, ತನ್ನ ಗುಂಪಿನ ಸದಸ್ಯರಿಗೆ ಬರೆದ ವೈಯಕ್ತಿಕ ಪತ್ರಗಳ ಪ್ರಕಾರ, ಬಿನ್ ಲಾಡೆನ್ ತನ್ನ ಅಲ್ ಖೈದಾ ಸಹಚರರೊಂದಿಗೆ ಮೂರು ವರ್ಷಗಳ ಕಾಲ ಯಾವುದೇ ರೀತಿಯಲ್ಲೂ ಸಂವಹನ ನಡೆಸಿರಲಿಲ್ಲ. ಅಲ್ಲಿಯವರೆಗೂ ಅವರು ತಮ್ಮ ಅಡುಗುದಾಣವನ್ನು ಒಸಾಮಾ ಬಿನ್ ಲಾಡೆನ್ ಬದಲಾಯಿಸುತ್ತಲೇ ಇದ್ದ. 2004ರಲ್ಲಿ ಮತ್ತೆ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಸಾಧಿಸಿದ್ದ ಬಿನ್ ಲಾಡೆನ್, ಅಮೆರಿಕದ ಮೇಲೆ ಮತ್ತೊಮ್ಮೆ ದಾಳಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿದ್ದ ಎನ್ನಲಾಗಿದೆ.

ಮಂಡ್ಯದ ಮುಸ್ಕಾನ್ ಕುರಿತಾಗಿ ಕವನ ಬರೆದು ಶ್ಲಾಘನೆ ಮಾಡಿದ ಅಲ್ ಖೈದಾ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ!

ಒಸಾಮಾ ಬಿನ್ ಲಾಡೆನ್ 9/11 ದಾಳಿಯನ್ನು ಪುನರಾವರ್ತಿಸಲು ಬಹಳ ಉತ್ಸುಕನಾಗಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.  ಆದರೆ, ತಮ್ಮ ಎದುರಿಗಿದ್ದ ಕಷ್ಟಕರವಾದ ಭದ್ರತಾ ಪರಿಸ್ಥಿತಿಗಳ ಬಗ್ಗೆ ಆತ ಎಚ್ಚರ ಹೊಂದಿದ್ದ ಎನ್ನುವುದು ನೇವಿ ಸೀಲ್ಸ್ ನೀಡಿದ ದಾಖಲೆಯಲ್ಲಿ ಬಹಿರಂಗವಾಗಿದೆ. ಅಲ್-ಖೈದಾದ ಅಂತಾರಾಷ್ಟ್ರೀಯ ಭಯೋತ್ಪಾದನಾ ಘಟಕದ ಮುಖ್ಯಸ್ಥರಿಗೆ ಒಸಾಮಾ ಬಿನ್ ಲಾಡೆನ್ ಬರೆದ ಆಘಾತಕಾರಿ ಪತ್ರವನ್ನು ಬಹಿರಂಗಪಡಿಸಿದ ಲಾಹೌದ್, ಅವರು ದೇಶದ ಮೇಲಿನ ಮುಂದಿನ ದಾಳಿಗೆ ಪ್ರಯಾಣಿಕರ ಬದಲಿಗೆ ಚಾರ್ಟರ್ ಪ್ಲೇನ್ ಮೂಲಕ ಕಾರ್ಯನಿರ್ವಹಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದ್ದ ಎಂದು ಹೇಳಿದರು. ವಿಮಾನವನ್ನು ಬಳಸಿ ದಾಳಿ ಮಾಡುವುದು ತುಂಬಾ ಕಷ್ಟವಾಗಿದ್ದರೆ, ಯುಎಸ್ ರೈಲ್ವೆಯನ್ನು ಗುರಿಯಾಗಿಸಬೇಕು ಎಂದು ಬಿನ್ ಲಾಡೆನ್ ಬರೆದಿದ್ದ.

ಲಾಡೆನ್‌ ಸ್ತುತಿ​ಸುವ ಪಾಕ್‌​ನಿಂದ ಶಾಂತಿ ಮಾತು: ಭಾರತ ಕಿಡಿ!

ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಬಿನ್ ಲಾಡೆನ್ ಯುನೈಟೆಡ್ ಸ್ಟೇಟ್ಸ್ ಮೇಲೆ ಹೇಗೆ ದಾಳಿ ಮಾಡಬೇಕೆಂದು ನಿಖರವಾಗಿ ವಿವರಿಸಿದ್ದ ಎಂದು ಲಾಹೌದ್ ಹೇಳಿದರು. "ಅವರು 12 ಮೀಟರ್ ಉಕ್ಕಿನ ಹಳಿಯನ್ನು ಕತ್ತರಿಸಲು ಬಯಸಿದ್ದರು, ಇದರಿಂದಾಗಿ ರೈಲು ಹಳಿತಪ್ಪಿ ಬಹಳಷ್ಟು ಸಾವು ನೋವುಗಳು ಆಗಲಿದೆ ಎಂದು ಯೋಚಿಸಿದ್ದರು. ಇದಕ್ಕಾಗಿ ಸುಲಭವವಾಗಿ ಬಳಸಬಹುದಾದ ಟೂಲ್ಕಿಟ್ ಅನ್ನು ವಿವರಿಸಿದ್ದ. ಟ್ರ್ಯಾಕ್ ಗಳನ್ನು ಕತ್ತರಿಸಲು ಕಂಪ್ರೆಸರ್ ಗಳು ಅಥವಾ ಕಬ್ಬಿಣವನ್ನು ಕರಗಿಸುವ ಉಪಕರಣವನ್ನು ಬಳಸಬಹುದು ಎಂದು ಆತ ಬರೆದಿದ್ದ ಎಂದಿದ್ದಾರೆ. ಆದರೆ, ಅವರ ಈ ಯೋಜನೆಗಳು ಕಾರ್ಯಗತಗೊಳಿಸುವ ಯಾವುದೇ ಅವಕಾಶವನ್ನು ಅಮೆರಿಕದ ಭದ್ರತಾ ಪಡೆಗಳು ನೀಡಲಿಲ್ಲ.

Latest Videos
Follow Us:
Download App:
  • android
  • ios