ಮಂಡ್ಯದ ಮುಸ್ಕಾನ್ ಕುರಿತಾಗಿ ಕವನ ಬರೆದು ಶ್ಲಾಘನೆ ಮಾಡಿದ ಅಲ್ ಖೈದಾ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ!
ಮುಸ್ಕಾನ್ ಖಾನ್ ಅವರನ್ನು 'ಸಹೋದರಿ' ಎಂದು ಉಲ್ಲೇಖಿರುವ ಅಲ್-ಖೈದಾ ಮುಖ್ಯಸ್ಥ, ಆಕೆಯ ಕೃತ್ಯದಿಂದ, ವಿಶೇಷವಾಗಿ "ತಕ್ಬೀರ್‌ನ ಕೂಗು" ಮಾಡಿದ್ದರಿಂದ ತುಂಬಾ ಪ್ರಭಾವಿತನಾಗಿದ್ದಾಗಿ ಹೇಳಿದ್ದಾನೆ.
ಬೆಂಗಳೂರು (ಏ.6): ರಾಜ್ಯದಲ್ಲಿ ನಡೆದ ಹಿಜಾಬ್ (Hijab) ಗಲಾಟೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ (Terror organisation) ಅಲ್-ಖೈದಾ ( Al Qaeda) ಮೂಗು ತೂರಿಸಿದೆ. ಟೆರರಿಸ್ಟ್ ಸಂಘಟನೆಯ ಮುಖ್ಯಸ್ಥ, ಕರ್ನಾಟಕದ ಉಡುಪಿಯಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ಪ್ರಚೋದನಕಾರಿ “ಅಲ್ಲಾಹು ಅಕ್ಬರ್” ಎಂದು ಕೂಗಿದ ಬುರ್ಖಾ ಧರಿಸಿದ ಹುಡುಗಿ ಬೀಬಿ ಮುಸ್ಕಾನ್ ಜೈನಾಬ್ ಖಾನ್‌ಗೆ (Bibi Muskan Zainab Khan) ಬೆಂಬಲ ನೀಡುವ ಮೂಲಕ ಕರ್ನಾಟಕದ ಹಿಜಾಬ್ ವಿವಾದದಲ್ಲಿ ನೇರವಾಗಿ ತಲೆಹಾಕಿದ್ದಾನೆ.
ಅಲ್-ಖೈದಾದ ಅಧಿಕೃತ ಶಬಾಬ್ ಮಾಧ್ಯಮ ಬಿಡುಗಡೆ ಮಾಡಿದ ಒಂಬತ್ತು ನಿಮಿಷಗಳ ವೀಡಿಯೊದಲ್ಲಿ, ಭಯೋತ್ಪಾದಕ ಸಂಘಟನೆ ಅಲ್-ಖೈದಾದ ನಾಯಕ ಅಯ್ಮಾನ್ ಅಲ್-ಜವಾಹಿರಿ (Ayman al Zawahiri), "ಅಲ್ಲಾಹು ಅಕ್ಬರ್" ಘೋಷಣೆಗಳನ್ನು ಕೂಗಿದ ನಂತರ ಬೆಳಕಿಗೆ ಬಂದ ಬುರ್ಖಾ ಧರಿಸಿದ ಹುಡುಗಿ ಮುಸ್ಕಾನ್ ಖಾನ್ ಅವರನ್ನು ಹೊಗಳಿದ್ದಾರೆ. ಉಡುಪಿಯಲ್ಲಿ ಹಿಜಾಬ್ ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ "ಅಲ್ಲಾಹು ಅಕ್ಬರ್" ಕೂಗು ಹೇಳುವ ಮೂಲಕ ಮುಸ್ಕಾನ್ ಜನಪ್ರಿಯರಾಗಿದ್ದರು.
"ದಿ ನೋಬಲ್ ವುಮನ್ ಆಫ್ ಇಂಡಿಯಾ" ಎಂಬ ಶೀರ್ಷಿಕೆಯ ವೀಡಿಯೊದಲ್ಲಿ, ಮುಸ್ಕಾನ್ ಜೈನಾಬ್ ಖಾನ್ ಅನ್ನು ಚಿತ್ರಿಸುವ ಇನ್ಫೋಗ್ರಾಫಿಕ್ ಅನ್ನು ಹೊಂದಿದ್ದು, ಜವಾಹಿರಿ ಅವರು ಖಾನ್, ಮುಸ್ಕಾನ್ ಖಾನ್ ಕುರಿತಾಗಿ ಬರೆದ ಕವನವನ್ನು ಓದಿದ್ದಲ್ಲದೆ, ಈ ಕವನವನ್ನು ಆಕೆಗೆ ಅರ್ಪಿಸುವುದಾಗಿ ಹೇಳಿದ್ದಾನೆ.
ಜಿಹಾದಿ ಭಯೋತ್ಪಾದಕ ಮುಸ್ಕಾನ್ ಖಾನ್ ಬಗ್ಗೆ ವೀಡಿಯೋಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಕಲಿತಿದ್ದೇನೆ ಎಂದು ತಿಳಿಸಿದ್ದಾನೆ. ಮುಸ್ಕಾನ್ ಖಾನ್ ಅವರನ್ನು 'ಸಹೋದರಿ' ಎಂದು ಉಲ್ಲೇಖಿರುವ ಅಲ್-ಖೈದಾ ಮುಖ್ಯಸ್ಥ, ಆಕೆಯ ಕೃತ್ಯದಿಂದ, ವಿಶೇಷವಾಗಿ "ತಕ್ಬೀರ್‌ನ ಕೂಗು" ಮಾಡಿದ್ದರಿಂದ ತುಂಬಾ ಪ್ರಭಾವಿತನಾಗಿದ್ದಾಗಿ ಹೇಳಿದ್ದಾನೆ. ಆಕೆಯ ಪ್ರಚೋದನಕಾರಿ ಇಸ್ಲಾಮಿಕ್ ಘೋಷಣೆಗಳಿಂದ ಪ್ರಭಾವಿತನಾದ ಕಾರಣದಿಂದಾಗಿ ಐಮನ್ ಅಲ್-ಜವಾಹಿರಿ ಅವರು ಕವಿತೆಯನ್ನು ಬರೆಯಲು ನಿರ್ಧರಿಸಿದ್ದೆ ಎಂದಿದ್ದಾನೆ.
ಭಯೋತ್ಪಾದಕನ ಅಲ್-ಜವಾಹಿರಿ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಲು ಕೂಡ ಪ್ರಯತ್ನಿಸಿದ್ದಾನೆ. ಭಾರತದಲ್ಲಿರುವ ಮುಸ್ಲಿಮರು ತಮ್ಮ ಮೇಲಿನ "ದಬ್ಬಾಳಿಕೆ" ಗೆ ಪ್ರತಿಕ್ರಿಯಿಸಬೇಕಾಗಿದೆ ಎಂದು ಹೇಳಿದರು. ಅದರೊಂದಿಗೆ ಈಗಾಗಲೇ ಹಿಜಾಬ್ ಅನ್ನು ನಿಷೇಧ ಮಾಡಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ವಿರುದ್ಧವೂ ಟೀಕಾಪ್ರಹಾರ ಮಾಡಿದ್ದಾನೆ. ಈ ದೇಶಗಳನ್ನು ಪಶ್ಚಿಮದ ಮಿತ್ರರಾಷ್ಟ್ರಗಳು ಎಂದೂ ಆರೋಪಿಸಿದ್ದಾನೆ.
ಪರೀಕ್ಷೆಗೆ ಗೈರಾದ ಮಂಡ್ಯದ ಮುಸ್ಕಾನ್, ಶಿಕ್ಷಣಕ್ಕಿಂತ ಹೆಚ್ಚಾಯ್ತಾ ಹಿಜಾಬ್?
ವಿಶೇಷವೆಂದರೆ, ಐದು ತಿಂಗಳ ನಂತರ ಜವಾಹಿರಿಯ ಮೊದಲ ವೀಡಿಯೊ ಇದಾಗಿದೆ. "ಮೋಸ್ಟ್ ವಾಂಟೆಡ್" ಜೆಹಾದಿ ಭಯೋತ್ಪಾದಕನಲ್ಲಿ ಒಬ್ಬನಾಗಿರುವ ಅಲ್-ಜವಾಹಿರಿ ಇನ್ನೂ ಜೀವಂತವಾಗಿದ್ದು, ವಿಶ್ವದಾದ್ಯಂತ ವ್ಯವಹಾರಗಳನ್ನು ಸಕ್ರಿಯವಾಗಿ ನಡೆಸುತ್ತಿದ್ದಾರೆ ಎನ್ನುವುದು ಈ ವಿಡಿಯೋ ಮೂಲಕ ಸಾಬೀತಾಗಿದೆ. 2020 ರಲ್ಲಿ, ಜವಾಹಿರಿ ವಯೋಸಹಜ ಕಾಯಿಲೆಯಿಂದ ಸಾವು ಕಂಡಿದ್ದಾನೆ ಎಂದು ಊಹಿಸಲಾಗಿತ್ತು. ಆದರೆ, ಆ ಬಳಿಕ ಅವರು ಜೀವಂತವಾಗಿದ್ದಾನೆ ಎಂದು ಸಾರುವ ದಿನಾಂಕವಿಲ್ಲದ ವಿಡಿಯೋವೊಂದು ಪ್ರಕಟವಾಗಿತ್ತು. ಅಫ್ಘಾನಿಸ್ತಾನದ ಗುಪ್ತ ಸ್ಥಳದಲ್ಲಿ ಆತ ಇನ್ನೂ ನೆಲೆಸಿದ್ದಾನೆ ಎನ್ನಲಾಗಿದೆ.
ಶಿಕ್ಷಣ, ಧರ್ಮ ಎರಡು ಕಣ್ಣುಗಳಿದ್ದಂತೆ: ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ತಂದೆ ಹೇಳಿಕೆ
ಮುಸ್ಕಾನ್ ಜೈನಾಬ್ ಖಾನ್ ಯಾರು?: ಮುಸ್ಕಾನ್ ಜೈನಾಬ್ ಖಾನ್ ಕರ್ನಾಟಕದ ಮಂಡ್ಯದಲ್ಲಿರುವ ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ. ಬುರ್ಖಾವನ್ನು ಧರಿಸಿ ಇಸ್ಲಾಮಿಕ್ ಘೋಷಣೆಗಳೊಂದಿಗೆ "ಅಲ್ಲಾಹು ಅಕ್ಬರ್" ಎಂದು ಸಾರ್ವಜನಿಕವಾಗಿ ಕೂಗಿದ ವಿಡಿಯೋ ವೈರಲ್ ಆದ ಬಳಿಕ ಜನಪ್ರಿಯಳಾಗಿದ್ದಳು. ಹಿಜಾಬ್ ಮತ್ತು ಬುರ್ಖಾ ಧರಿಸಿ ಬರುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ವಿದ್ಯಾರ್ಥಿಗಳು ಪಿಇಎಸ್ ಕಾಲೇಜು ಕ್ಯಾಂಪಸ್‌ನಲ್ಲಿ ಇಸ್ಲಾಮಿಕ್ ಘೋಷಣೆಗಳಿಗೆ ಪ್ರತಿಯಾಗಿ "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗುತ್ತಿದ್ದರು.