ಟರ್ಕಿಯಲ್ಲೊಬ್ಬ ಸಂಸದ ಏನು ಮಾಡಿದ್ದಾನೆ ಗೊತ್ತಾ. ಕಾಯ್ದೆಯೊಂದನ್ನು ವಿರೋಧಿಸಿ ತನ್ನದೇ ಮೊಬೈಲ್ ಫೋನ್ ತೆಗೆದುಕೊಂಡು ಅದನ್ನು ಸುತ್ತಿಗೆಯಿಂದ ನಾಲ್ಕೈದು ಬಾರಿ ಗುದ್ದಿ ಹುಡಿ ಮಾಡಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸಂಸದರೇಕೆ ತಮ್ಮದೇ ಮೊಬೈಲ್ ಫೋನ್ ಹುಡಿ ಹಾರಿಸಿದ್ರು ಅಂತ ಪ್ರಶ್ನಿಸುತ್ತಿದ್ದಾರೆ.
ಟರ್ಕಿ: ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರವಿರುವ ಯಾವುದೇ ಸಂಸತ್ತು ಇರಬಹುದು. ಅಲ್ಲಿ ಸಂಸದರು, ಆಡಳಿತ ಪಕ್ಷದವರು ವಿರೋಧ ಪಕ್ಷದವರು ಪರಸ್ಪರ ಕಾದಾಡುವುದು. ಮಾತಿನಲ್ಲೇ ಕೆಸರೆರಚಿಕೊಳ್ಳುವುದು ಸಾಮಾನ್ಯ. ಇಂತಹ ಕಿತ್ತಾಟ ನಮ್ಮ ದೇಶದ ಸಂಸತ್‌ನಲ್ಲಿಯೋ ಅಥವಾ ನಮ್ಮ ದೇಶದ ರಾಜ್ಯಗಳ ವಿಧಾನಸಭಾ ಕಲಾಪಗಳಲ್ಲಿಯೋ ಮಾತ್ರ ಕಾಣ ಸಿಗುವುದು, ಇಂತಹ ಕಿತಾಪತಿಗಳು ಪ್ರಪಂಚದ ಬೇರೆಲ್ಲೂ ನಡೆಯಲು ಸಾಧ್ಯವಿಲ್ಲ ಎಂದು ನೀವೂ ಊಹಿಸಿದರೆ ಅದು ನಿಮ್ಮ ತಪ್ಪು ಭ್ರಮೆ ಅಷ್ಟೇ, ಎಲ್ಲಾ ದೇಶಗಳ ಸಂಸತ್ತಿನಲ್ಲೂ ಇಂತಹ ಗಲಾಟೆಗಳಾಗುತ್ತವೆ. ಪರಸ್ಪರ ಹೊಡೆದಾಡುತ್ತಾರೆ. ಆದರೂ ಅದು ನಮ್ಮ ದೇಶದಷ್ಟು ವರ್ಣರಂಜಿತವಾಗಲು ಸಾಧ್ಯವಿಲ್ಲ ಬಿಡಿ. ಈಗ್ಯಾಕೆ ಸಂಸತ್ತಿನ ವಿಷ್ಯ ಈಗ ರಾಜ್ಯ ವಿಧಾನಸಭೆಯಲ್ಲಾಗಲಿ, ದೇಶದ ಪಾರ್ಲಿಮೆಂಟ್‌ನಲ್ಲಾಗಲಿ ಯಾವುದೇ ಕಲಾಪಗಳು ನಡೆಯುತ್ತಿಲ್ವಲ್ಲಾ ಅಂತ ನೀವು ಯೋಚಿಸುತ್ತಿರಬಹುದು. ನಿಮ್ಮ ಊಹೆ ಸರಿಯಾಗಿಯೇ ಇದೆ. ಈಗ ನಾವು ಹೇಳಲು ಹೊರಟಿರುವ ವಿಚಾರ ನಮ್ಮ ಸಂಸತ್ತಿನದ್ದಲ್ಲ. ಇದು ಟರ್ಕಿ ದೇಶದ ಸಂಸತ್ತಿನಲ್ಲಿ ನಡೆದ ಘಟನೆ.
ಸಂಸತ್ತಿನಲ್ಲಿ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆಗಳು ಇಷ್ಟವಿಲ್ಲದೇ ಹೋದಾಗ ಅದರ ವಿರುದ್ಧ ವಿರೋಧ ಪಕ್ಷಗಳು(Opposition Party) ಹೋರಾಡುವುದು, ಕಾಯ್ದೆ ಪ್ರತಿಯನ್ನು ದೂರ ಎಸೆದು ಅಥವ ಹರಿದು ಹಾಕಿ ಅದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ. ಆದರೆ ಟರ್ಕಿಯಲ್ಲೊಬ್ಬ ಸಂಸದ ಏನು ಮಾಡಿದ್ದಾನೆ ಗೊತ್ತಾ. ಕಾಯ್ದೆಯೊಂದನ್ನು ವಿರೋಧಿಸಿ ತನ್ನದೇ ಮೊಬೈಲ್ ಫೋನ್ ತೆಗೆದುಕೊಂಡು ಅದನ್ನು ಸುತ್ತಿಗೆಯಿಂದ ನಾಲ್ಕೈದು ಬಾರಿ ಗುದ್ದಿ ಹುಡಿ ಮಾಡಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸಂಸದರೇಕೆ ತಮ್ಮದೇ ಮೊಬೈಲ್ ಫೋನ್ ಹುಡಿ ಹಾರಿಸಿದ್ರು ಅಂತ ಪ್ರಶ್ನಿಸುತ್ತಿದ್ದಾರೆ.
ಮಿರರ್ ಪತ್ರಿಕೆಯ ವರದಿ ಪ್ರಕಾರ, ವಿರೋಧ ಪಕ್ಷವಾದ ರಿಪಬ್ಲಿಕನ್ ಪೀಪಲ್ ಪಾರ್ಟಿಯ (Republican People’s Party) ಸದಸ್ಯನಾಗಿರುವ ಸಂಸದ ಬುರಕ್ ಇರ್ಬೆ(Burak Erbay) ಸರ್ಕಾರ ಪ್ರಸ್ತಾಪಿಸಿದ್ದ ಮಸೂದೆಗೆ ಸಂಸತ್‌ನಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ನಕಲಿ ಸುದ್ದಿಗಳನ್ನು ತಡೆಯುವುದು ಈ ಮಸೂದೆಯ ಉದ್ದೇಶವಾಗಿದೆ. ಆದರೆ ಈ ಮಸೂದೆ ಅಡಿಯಲ್ಲಿ, ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೈಟ್‌ಗಳು 'ತಪ್ಪು ಮಾಹಿತಿಯನ್ನು ಹರಡುವ' ಶಂಕಿತ ಬಳಕೆದಾರರ ವಿವರಗಳನ್ನು ಬಿಡುಗಡೆ ಮಾಡಬೇಕು, ಅಲ್ಲದೇ ತಪ್ಪು ಮಾಹಿತಿ ಎಂಬ ಆರೋಪ ಸಾಬೀತಾದರೆ ಈ ಕಾನೂನು ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ನೀಡುತ್ತದೆ.
12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್ ಫೋನ್‌ಗಳಿಗೆ ಭಾರತದಲ್ಲಿ ನಿಷೇಧ?
ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಬುರಾಕ್, ಟರ್ಕಿ ಸರ್ಕಾರ (Turkish government) ಈ ಮಸೂದೆಯನ್ನು ಅಂಗೀಕರಿಸಿದರೆ ಜನರಿಗೆ ಖಾಸಗಿತನವಿರುವುದಿಲ್ಲ. ಇದು ನಾಗರಿಕರ ಮೊಬೈಲ್ ಫೋನ್ ಒಳನುಗ್ಗಿ ಖಾಸಗಿತನವನ್ನು ಹಾಳು ಮಾಡಬಹುದು ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಆವೇಶ ಬರಿತರಾಗಿ ತಮ್ಮ ಸ್ಮಾರ್ಟ್ ಫೋನ್ ಅನ್ನು ತೆಗೆದುಕೊಂಡು ಅದನ್ನು ಸುತ್ತಿಗೆಯಿಂದ ಹಲವು ಬಾರಿ ಹೊಡೆದು ಹುಡಿ ಮಾರಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ತಾನು ಸುತ್ತಿಗೆ ತೆಗೆದುಕೊಂಡು ಫೋನ್‌ನ್ನು ಒಡೆದು ಹಾಕುತ್ತಿರುವ ದೃಶ್ಯವನ್ನು ಸಂಸದರೇ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಯುವ ಜನರೇ ನಿಮ್ಮ ಏಕೈಕ ಸ್ವಾತಂತ್ರ್ಯ, ನಿಮ್ಮ ಜೋಬಿನಲ್ಲಿರುವ ಫೋನ್‌ಗಳು, ಅದರಲ್ಲಿ ಇನ್ಸ್ಟಾಗ್ರಾಮ್ (Instagram) ಇದೆ, ಫೇಸ್‌ಬುಕ್ (Facebook) ಇದೆ, ಯೂಟ್ಯೂಬ್ (Youtube) ಇದೆ, ನೀವು ಅಲ್ಲಿ ಸಂವಹನ ನಡೆಸುತ್ತೀರಿ. ಆದರೆ ಈಗ ಸರ್ಕಾರ ಜಾರಿಗೆ ತರಲಿಚ್ಚಿಸಿರುವ ಕಾನೂನು ಅಂಗೀಕಾರವಾದರೆ ನೀವು ನಿಮ್ಮ ಫೋನ್‌ಗಳನ್ನು ಒಡೆದು ದೂರ ಎಸೆಯಬೇಕಾಗುವುದು ಎಂದು ಬರೆದಿದ್ದಾರೆ.
12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್ ಫೋನ್‌ಗಳಿಗೆ ಭಾರತದಲ್ಲಿ ನಿಷೇಧ?
ವಿಮರ್ಶಕರ ಪ್ರಕಾರ ಟರ್ಕಿಯಲ್ಲಿ ಈ ಮಸೂದೆ ಒಂದು ವೇಳೆ ಜಾರಿಯಾದರೆ ಇದು ಪತ್ರಿಕಾ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ವ್ಯಾಪಕವಾದ ಸೆನ್ಸಾರ್‌ಶಿಪ್‌ಗೆ ಕಾರಣವಾಗುತ್ತದೆ. 2016 ರಲ್ಲಿ ವಿಫಲವಾದ ಸಾರ್ವಜನಿಕ ದಂಗೆಯ ನಂತರ ಹೆಚ್ಚಿನ ಟರ್ಕಿಶ್ ಪತ್ರಿಕೆಗಳು (Turkish newspapers) ಮತ್ತು ಟೆಲಿವಿಷನ್ ಚಾನೆಲ್‌ಗಳು ಸರ್ಕಾರಿ ಅಧಿಕಾರಿಗಳು ಮತ್ತು ಅವರ ವ್ಯಾಪಾರ ಸಹವರ್ತಿಗಳ ನಿಯಂತ್ರಣಕ್ಕೆ ಬಂದವು. ಆದರೆ ಸಾಮಾಜಿಕ ಮಾಧ್ಯಮಗಳು ನಿರ್ಬಂಧದಿಂದ ಮುಕ್ತವಾಗಿವೆ.