ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಚೀನಾ ಗೂಢಚಾರಣಿ ಜೊತೆ ಅಕ್ರಮ ಸಂಬಂಧದಿಂದ ಕೋಲಾಹಲ ಸೃಷ್ಟಿಯಾಗಿದೆ. ಕಂಪನಿ ಷೇರುಗಳು ಪಾತಾಳಕ್ಕೆ ಕುಸಿದಿದೆ. ಜೆನ್ಸನ್ ರಾಜೀನಾಮೆ ನೀಡಿದ್ದಾರೆ. ಅಮೆರಿಕನ್ ಕಂಪನಿಯ ಕೋಲಾಹಲದಲ್ಲಿ ಸಿಂಗಾಪುರದ ಸ್ಟಾರ್ಟ್ಅಪ್ ಕಂಪನಿ ಭರ್ಜರಿ ಲಾಭ ಮಾಡಿಕೊಂಡಿದೆ.
ಸಿಂಗಾಪುರ (ನ.14) ಚಿಪ್ ತಯಾರಿಕಾ ಎನ್ವಿಡಿಯಾ ಕಂಪನಿ ಸಹ ಸಂಸ್ಥಾಪಕ ಹಾಗೂ ಸಿಇಒ ಜೆನ್ಸನ್ ಹುವಾಂಗ್ ಅಕ್ರಮ ಸಂಬಂಧ, ಚೀನಾದ ಗೂಢಚರ್ಯೆ ಪ್ರಕರಣದಿಂದ ಕೋಲಾಹಲ ಸೃಷ್ಟಿಯಾಗಿದೆ. ಪತ್ನಿ ಹಾಗೂ ಮಕ್ಕಳಿಗೆ ವಂಚಿಸಿ ಚೀನಾದ ಗೂಢಚಾರಣಿ ಜೊತೆ ಅಕ್ರಮ ಸಂಬಂಧ ಬೆಳೆಸಿದ ಆರೋಪದಿಂದ ಸಮಸ್ಯೆ ತೀವ್ರಗೊಂಡಿದೆ. ಅಕ್ರಮ ಸಂಬಂಧ ಒಪ್ಪಿಕೊಂಡಿರುವ ಹುವಾಂಗ್ ಪತ್ನಿ ಹಾಗೂ ಮಕ್ಕಳಲ್ಲಿ ಕ್ಷಮೆ ಕೋರಿದ್ದಾರೆ. ಇತ್ತ ಎನ್ವಿಡಿಯಾ ಕಂಪನಿ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್ವಿಡಿಯಾ ಷೇರುಗಳು ಭಾರಿ ಕುಸಿತ ಕಂಡಿದೆ. ಕಂಪನಿ ಮೌಲ್ಯ ಕುಸಿತದಿಂದ ನಷ್ಟ ಅನುಭವಿಸಿದೆ. ಆದರೆ ಹುವಾಂಗ್ ಅಕ್ರಮ ಸಂಬಂಧದಿಂದ ಅಮೆರಿಕದಿಂದ ದೂರದಲ್ಲಿರುವ ಸಿಂಗಾಪುರದ ಸ್ಟಾರ್ಟ್ ಅಪ್ ಕಂಪನಿ ಭಾರಿ ಲಾಭ ಮಾಡಿಕೊಂಡಿದೆ.
ಲಾಭ ಮಾಡಿಕೊಂಡಿದ್ದು ಹೇಗೆ
ಎನ್ವಿಡಿಯಾ ಕಂಪನಿ ಷೇರುಗಳ ಮೌಲ್ಯ ಕುಸಿತದಿಂದ ಸಂಕಷ್ಟಗಳ ಸರಮಾಲೆ ತೀವ್ರಗೊಂಡಿದೆ. ಎನ್ವಿಡಿಯಾದಲ್ಲಿನ ಕೋಲಾಹಲ ಇದಕ್ಕೆ ಸಪ್ಲೈ ಚೈನ್ನಲ್ಲಿರುವ ಇತರ ಕಂಪನಿಗಳ ಮೇಲೂ ಪರಿಣಾಮ ಬಿದ್ದಿದೆ. ಆದರೆ ದೂರದಲ್ಲಿರುವ ಸಿಂಗಾಪುರದ ಲೈಕಾನ ಸ್ಟಾರ್ಟ್ಅಪ್ ಕಂಪನಿ ಭರ್ಜರಿ ಲಾಭ ಮಾಡಿಕೊಂಡಿದೆ. ಲೈಕಾನಾ ಎಐ ಸ್ಟಾರ್ಟ್ಅಪ್ ಕಂಪನಿಯಾಗಿದೆ. ಎನ್ವಿಡಿಯಾ ಕಂಪನಿಯಿಂದ ಹೊರನಡೆದ ಜೆನ್ಸನ್ ಹುವಾಂಗ್ ಪ್ರಕರಣವೇ ಈ ಲೈಕಾನಾ ಕಂಪನಿಯ ಲಾಭಕ್ಕೆ ಕಾರಣ. ಹೌದು ಲೌಕಾನಾ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಹೆಸರು ಕೂಡ ಜೆನ್ಸನ್ ಹುವಾಂಗ್.
ಎನ್ವಿಡಿಯಾ ಕಂಪನಿ ಸಹ ಸಂಸ್ಥಾಪಕ ಹಾಗೂ ವಿವಾದಿತ ಉದ್ಯಮಿ ಜೆನ್ಸನ್ ಹುವಾಂಗ್ ಹಾಗೂ ಲೈಕಾನ ಸಂಸ್ಥೆಯ ಸಂಸ್ಥಾಪಕನ ಹೆಸರು ಒಂದೇ. ಆದರೆ ಈ ಎರಡು ಕಂಪನಿಗೂ ಹಾೂ ಇಬ್ಬರು ಉದ್ಯಮಿಗಳಿಗೂ ಯಾವುದೇ ಸಂಬಂಧವಿಲ್ಲ. ಜೆನ್ಸನ್ ಹುವಾಂಗ್ ಅಕ್ರಮ ಸಂಬಂಧ ಮಾಧ್ಯಮಗಳಲ್ಲಿ ಹೊರಬರುತ್ತಿದ್ದಂತೆ ಲೈಕಾನ್ ಕಂಪನಿಯ ಸಂಸ್ಥಾಪಕ ಜೆನ್ಸನ್ ಹುವಾಂಗ್ಗೆ ಆತಂಕ ಎದುರಾಗಿತ್ತು. ತನ್ನ ಹೆಸರಿಗೆ ಈ ಕಳಂಕ ಅಂಟುತ್ತಾ ಅನ್ನೋ ಭಯ, ಇದರಿಂದ ತನ್ನ ಕಂಪನಿಗೂ ಸಮಸ್ಯೆಯಾಗುತ್ತಾ ಅನ್ನೋ ಆತಂಕ ಹೆಚ್ಚಾಗಿತ್ತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ವಿವಾದಿಂದ 5000ಕ್ಕೂ ಹೆಚ್ಚು ವಿಸಿಟರ್ಸ್
ಜೆನ್ಸನ್ ಹುವಾಂಗ್ ವಿವಾದ ತೀವ್ರವಾಗುತ್ತಿದ್ದಂತೆ ನನ್ನ ಆತಂಕ ದೂರವಾಯಿತು ಎಂದು ಲೈಕಾನ ಸಂಸ್ಥಾಪಕ ಹೇಳಿದ್ದಾರೆ. ಕಾರಣ ಒಂದೇ ಹೆಸರಿನ ಕಾರಣ ಸಿಂಗಾಪುರದಲ್ಲಿ ಹಲವರು ಸರ್ಚ್ ಮಾಡಿದ್ದಾರೆ. ಹುಡುಕಾಡಿದ್ದಾರೆ, ತಡಕಾಡಿದ್ದಾರೆ.ಈ ಸರ್ಚ್ನಲ್ಲಿ ಲೈಕಾನ ವೆಬ್ಸೈಟ್ ವಿಸಿಟರ್ಸ್ ಒಂದೇ ಭಾರಿ 5000ಕ್ಕೆ ಏರಿಕೆಯಾಗಿದೆ. ಲೈಕಾನಾ ಸ್ಟಾರ್ಟ್ಅಪ್ ವೆಬ್ಸೈಟ್ ವಿಸಿಟರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ಜಗತ್ತಿನ ಬೇರೆ ಬೇರೆ ಭಾಗಗಳಿಂದ ನಮ್ಮ ಸೈಟ್ ಚೆಕ್ ಮಾಡುತ್ತಿದ್ದಾರೆ. ಅತೀ ಹೆಚ್ಚು ಮಂದಿ ನಮ್ಮ ಸೈಟ್ನಲ್ಲಿ ಜೆನ್ನಸ್ ಹುವಾಂಗ್ ಕುರಿತು ಪರಿಶೀಲಿಸುತ್ತಿದ್ದಾರೆ.
ದಿಢೀರ್ ಪ್ರಚಾರ, ವಿಸಿಟರ್ಸ್ ಸಂಖ್ಯೆ ಹೆಚ್ಚಳದಿಂದ ಸ್ಟಾರ್ಟ್ಅಪ್ ಹೂಡಿಕೆದಾರರು, ಹೊಸ ಪ್ರಾಜೆಕ್ಟ್ ವಿಚಾರಣೆ, ಕ್ಲೈಂಟ್ ವಿಚಾರಣೆಗಳು ಹೆಚ್ಚಾಗಿದೆ. ಕಂಪನಿ ಮಾರ್ಕೆಟಿಂಗ್ಗೆ ಹೆಚ್ಚಿನ ಕಾಲ್ಸ್ ಬರುತ್ತಿದೆ. ಹೆಸರಿನ ಸಾಮ್ಯತೆಯಿಂದ ಲೈಕಾನ ಸ್ಟಾರ್ಟ್ಅಪ್ ಕಂಪನಿ ಭಾರಿ ಬೇಡಿಕೆ ಪಡೆದುಕೊಂಡಿದೆ. ನೆಗಟೀವ್ ಆಗಿ ಎಲ್ಲಿ ಕಂಪನಿಗೆ ಹೊಡೆತ ಬೀಳಲಿದೆ ಎಂದುಕೊಂಡಿದ್ದ ಸಂಸ್ಥಾಪಕನಿಗೆ ಇದೀಗ ಪ್ರಚಾರ ಮೇಲೆ ಪ್ರಚಾರ ಸಿಗುತ್ತಿದೆ. ಕಂಪನಿ ಕೂಡ ಭಾರಿ ಲಾಭದತ್ತ ಸಾಗುತ್ತಿದೆ.














