ಭಾರತದ ವಿರುದ್ಧ ನೇಪಾಳವನ್ನು ಎತ್ತಿ ಕಟ್ಟುತ್ತಿದೆ ಕುತಂತ್ರಿ ಚೀನಾ
ಈಗ ಉತ್ತರಾಖಂಡ್‌ನಲ್ಲಿ ಲಿಪುಲೇಖ್ ಪಾಸ್‌ವರೆಗೆ 80 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದ್ದು, 85 ಪ್ರತಿಶತ ಯಾತ್ರೆ ಭಾರತದಲ್ಲೇ ಮಾಡಿ ಚೀನಾದಲ್ಲಿ ಸ್ವಲ್ಪವೇ ದೂರ ಕ್ರಮಿಸಿದರೆ ಮಾನಸ ಸರೋವರಕ್ಕೆ ತಲುಪಬಹುದು. ಈ ಲಿಪುಲೇಖ್ ಇರುವುದು ಭಾರತ-ಚೀನಾ-ನೇಪಾಳದ ಜಂಟಿ ಗಡಿಯಲ್ಲಿ. ಹೀಗಾಗಿ ಚೀನಾದ ಕುಮ್ಮಕ್ಕಿನಿಂದ ನೇಪಾಳ ಕ್ಯಾತೆ ತೆಗೆದಿದೆ.
ನವದೆಹಲಿ (ಜೂ. 26): ಭಾರತೀಯರು ಚೀನಾದ ಟಿಬೆಟ್‌ನಲ್ಲಿರುವ ಹಿಂದುಗಳ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ಕಾಠ್ಮಂಡುಗೆ ಹೋಗಿ ನೇಪಾಳದ ಗಡಿಯಿಂದ ನಡೆದು ಹೋಗಬೇಕಾಗಿತ್ತು. 2016ರಲ್ಲಿ ಸಿಕ್ಕಿಂನ ನಾಥುಲಾ ಪಾಸ್ ಮೂಲಕ ಪ್ರವೇಶ ಕೊಟ್ಟರೂ ಪ್ರಯಾಣಿಕರು ಟ್ರೆಕ್ಕಿಂಗ್ ಮಾಡಿಯೇ ಹೋಗಬೇಕಿತ್ತು.
ಆದರೆ ಈಗ ಉತ್ತರಾಖಂಡ್‌ನಲ್ಲಿ ಲಿಪುಲೇಖ್ ಪಾಸ್‌ವರೆಗೆ 80 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದ್ದು, 85 ಪ್ರತಿಶತ ಯಾತ್ರೆ ಭಾರತದಲ್ಲೇ ಮಾಡಿ ಚೀನಾದಲ್ಲಿ ಸ್ವಲ್ಪವೇ ದೂರ ಕ್ರಮಿಸಿದರೆ ಮಾನಸ ಸರೋವರಕ್ಕೆ ತಲುಪಬಹುದು. ಈ ಲಿಪುಲೇಖ್ ಇರುವುದು ಭಾರತ-ಚೀನಾ-ನೇಪಾಳದ ಜಂಟಿ ಗಡಿಯಲ್ಲಿ. ಹೀಗಾಗಿ ಚೀನಾದ ಕುಮ್ಮಕ್ಕಿನಿಂದ ನೇಪಾಳ ಕ್ಯಾತೆ ತೆಗೆದಿದೆ.
ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!
ಈ ರಸ್ತೆ ಶುರು ಆದರೆ ಭಾರತೀಯ ಯಾತ್ರಿಕರು ನೇಪಾಳ ಮೂಲಕ ಟಿಬೆಟ್‌ಗೆ ಹೋಗುವುದಿಲ್ಲ ಎನ್ನುವುದೂ ಕೂಡ ಸಿಟ್ಟಿಗೆ ಕಾರಣ ಇರಬಹುದು. ಆದರೆ ಒಂದು ಮಾತ್ರ ನಿಜ, ಭಾರತದ ಜೊತೆ ಮುಕ್ತ ಗಡಿ ಹಂಚಿಕೊಂಡಿರುವ ನೇಪಾಳ ಹಿಂದೂ ರಾಜಸತ್ತೆಯ ಅವಸಾನದ ನಂತರ ಹೆಚ್ಚುಹೆಚ್ಚು ಚೀನಾದತ್ತ ವಾಲುತ್ತಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ