Asianet Suvarna News Asianet Suvarna News

ತುಂಟಾಟದಿಂದ ವರದಿಗಾರ್ತಿಗೆ ಅಡ್ಡಿಪಡಿಸಿದ ಉಕ್ರೇನ್ ಮಗು... ವಿಡಿಯೋ

 

  • ತುಂಟಾಟದಿಂದ ವರದಿಗಾರ್ತಿಗೆ ಅಡ್ಡಿಪಡಿಸಿದ ಉಕ್ರೇನ್ ಮಗು
  • ನಿರಾಶ್ರಿತರ ಶಿಬಿರದಲ್ಲಿರುವ ಉಕ್ರೇನ್‌ ಮಗು
  • ನಿರಾಶ್ರಿತರ ಶಿಬಿರದಲ್ಲಿ ವರದಿ ಮಾಡುತ್ತಿದ್ದ ವರದಿಗಾರ್ತಿ
     
NBC News reporter Ellison Barber was interrupted by a Ukrainian girl in refugee camp akb
Author
Bangalore, First Published Mar 8, 2022, 5:56 PM IST

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣವೂ ಎರಡನೇ ಮಹಾಯುದ್ಧದ ನಂತರದ ಮಹಾ ವಲಸೆಗೆ ಕಾರಣವಾಗಿದೆ. ಯುದ್ಧ ಪೀಡಿತ ಉಕ್ರೇನ್‌ನಿಂದ ಕೋಟ್ಯಾಂತರ ಜನ ಸಮೀಪದ ಯುರೋಪ್‌ ರಾಷ್ಟ್ರಗಳ ನಿರಾಶ್ರಿತ ಶಿಬಿರದಲ್ಲಿ ಹಾಗೂ ಗಡಿ ಪ್ರದೇಶಗಳ ಸಮೀಪವಿರುವ ಶಿಬಿರಗಳಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಆದಾಗ್ಯೂ ಉಕ್ರೇನಿಗರ ಜೀವನೋತ್ಸಾಹವೇನು ಕುಗ್ಗಿಲ್ಲ. ಒಂದೇಡೆ ಯುದ್ಧವಾಗುತ್ತಿದ್ದರೆ ಮತ್ತೊಂದೆಡೆ ವಿವಾಹವಾಗುತ್ತಾ ಭಯಾನಕ ವಾತಾವರಣದಲ್ಲೂ ಸಹಜವಾಗಿರಲು ಪ್ರಯತ್ನಿಸುತ್ತಿರುವ ಉಕ್ರೇನಿಗರ ಧೈರ್ಯ ಹಾಗೂ ಜೀವನೋತ್ಸಾಹವನ್ನು ಈಗ ಪ್ರಪಂಚವೇ ಮೆಚ್ಚುತ್ತಿದೆ. ಬಲಿಷ್ಠ ರಷ್ಯಾ ಮುಂದೆ ಉಕ್ರೇನಿಗರು ಶೌರ್ಯ ಮೆರೆದ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನೋಡಿರಬಹುದು. ಈಗ ಇಲ್ಲಿ ನಾವು ತೋರಿಸುತ್ತಿರುವ ವಿಡಿಯೋ ಪುಟ್ಟ ಉಕ್ರೇನ್‌ ಬಾಲಕಿಯ ಉತ್ಸಾಹ ತುಂಬುವ ನಗು ತುಂಟಾಟದ್ದಾಗಿದೆ.

ಉಕ್ರೇನ್‌ ನಿರಾಶ್ರಿತರ ಶಿಬಿರಗಳಲ್ಲಿ ನಿರಾಶ್ರಿತರ ಜೀವನದ ಬಗ್ಗೆ ಜಗತ್ತಿಗೆ ತಿಳಿಸಲು ಯುರೋಪ್‌ನ ಹಲವು ಮಾಧ್ಯಮಗಳು ನಿರಾಶ್ರಿತರ ಶಿಬಿರಕ್ಕೆ ತೆರಳಿ ವರದಿ ಮಾಡುತ್ತಿವೆ. ಹೀಗೆ ವರದಿ ಮಾಡಲು ಹೊರಟ ಎನ್‌ಬಿಸಿ ನ್ಯೂಸ್ ವರದಿಗಾರ್ತಿ ಎಲಿಸನ್ ಬಾರ್ಬರ್( Ellison Barber)ಗೆ  ನಿರಾಶ್ರಿತರ ಶಿಬಿರದಲ್ಲಿದ್ದ ಪುಟ್ಟ ಬಾಲಕಿಯೊಬ್ಬಳು ಅಚ್ಚರಿ ಮೂಡಿಸಿದ್ದಾಳೆ. ಸಾಕರ್ ಚೆಂಡಿನೊಂದಿಗೆ ಆಟವಾಡುತ್ತಿದ್ದ ಆ ಬಾಲಕಿ ವರದಿಗಾರ್ತಿ ಲೈವ್‌ ರಿಪೋರ್ಟಿಂಗ್‌ ಮಾಡುತ್ತಿದ್ದಂತೆ ಜೊತೆ ಜೊತೆಯಾಗಿ ಕ್ಯಾಮರಾ ಮುಂದೆ ಬಂದಿದ್ದಾಳೆ. 

ಎಲಿಸನ್ ಬಾರ್ಬರ್ ಪ್ರಸ್ತುತ ಪೋಲೆಂಡ್‌ನಲ್ಲಿದ್ದು(Poland) ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ವರದಿ ಮಾಡುತ್ತಿದ್ದಾರೆ. ಈ ವೇಳೆ ಅವರು ಉಕ್ರೇನ್‌ನಿಂದ ಪಲಾಯನ ಮಾಡಿದ 1.5 ಮಿಲಿಯನ್ ಜನರ ದುರವಸ್ಥೆಯನ್ನು ಹಂಚಿಕೊಂಡರು, ತಮ್ಮ ಮನೆಗಳನ್ನು ಮತ್ತು ಹತ್ತಿರದ ಸಂಬಂಧಿಗಳನ್ನು ತೊರೆದು ನೆರೆಯ ದೇಶಗಳಾದ ಪೋಲೆಂಡ್, ಹಂಗೇರಿ ಮತ್ತು ರೊಮೇನಿಯಾಕ್ಕೆ ವಲಸೆ ಹೋದ ಜನರ ದುಸ್ಥಿತಿಯನ್ನು ಅವರು ತೆರೆದಿಡುತ್ತಿದ್ದರು.

ಯುದ್ಧ ಪೀಡಿತ ಉಕ್ರೇನ್‌ನಿಂದ ಒಂಟಿಯಾಗಿ 1400 ಕಿ.ಮೀ ಪ್ರಯಾಣಿಸಿದ 11ರ ಬಾಲಕ
 

ನಾವು ಇಂದು ಇಲ್ಲಿ ಕೆಲವು ಜನರೊಂದಿಗೆ ಮಾತನಾಡಿದ್ದೇವೆ, ಅವರು ಉಕ್ರೇನ್‌ನ ಹೊರಗಿರುವ ಬಂಧುಗಳಿಗಾಗಿ ಕೊನೆಕ್ಷಣದವರೆಗೆ ಕಾಯಲು ಸಿದ್ಧರಿದ್ದಾರೆ. ಅವರು ತಮ್ಮ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗುವಂತೆ ಉಕ್ರೇನ್‌ ಹೊರಗಿನ ಬಂಧುಗಳು ಹಾಗೂ ಸ್ನೇಹಿತರಿಗೆ ಮನವರಿಕೆ ಮಾಡಲಿದ್ದಾರೆ. ಅವರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋದ ಬಳಿಕ ಇವರು ಉಕ್ರೇನ್‌ಗೆ ಹಿಂದಿರುಗುತ್ತೇವೆ ಎಂದು ನಿರಾಶ್ರಿತರ ಕ್ಯಾಂಪ್‌ನಲ್ಲಿರುವ ಕೆಲವರು ಹೇಳಿದರು ಎಂದು ವರದಿಗಾರ್ತಿ ಬಾರ್ಬರ್ ಟಿವಿ ಲೈವ್‌ನಲ್ಲಿ ಹೇಳುತ್ತಿರುವುದನ್ನು ಕಾಣಬಹುದು. ಹೀಗೆ ವರದಿ ಮಾಡುತ್ತಾ ಮುಂದೆ ಸಾಗುತ್ತಿದ್ದ ಆಕೆಗೆ ನಿರಾಶ್ರಿತರ ಶಿಬಿರದಲ್ಲಿ ಉಳಿದುಕೊಂಡಿದ್ದ  ಮುಖದಲ್ಲಿ ಮಂದಹಾಸ ತುಂಬಿದ ಮಗುವೊಂದು ತನ್ನ ನಗುವಿನಿಂದಲೇ ಆಕೆಯನ್ನು ಅಡ್ಡಿಪಡಿಸಿತು. ಮಗು ಸಾಕರ್ ಚೆಂಡನ್ನು ಹಿಡಿದು ವರದಿಗಾರ್ತಿಯತ್ತ ಮಿಲಿಯನ್ ಡಾಲರ್ ನಗುವನ್ನು ಬೀರಿತು.

ನಾನು ಕೀವ್‌ನಲ್ಲೇ ಇದ್ದೇನೆ, ಯಾರಿಗೂ ಹೆದರುವುದಿಲ್ಲ: ಪುಟಿನ್‌ಗೆ ಉಕ್ರೇನ್ ಅಧ್ಯಕ್ಷನ ಚಾಲೆಂಜ್!
ನನ್ನ ಇದುವರೆಗಿನ ಲೈವ್ ಶಾಟ್‌ನ ಆದಂತಹ ಅತ್ಯುತ್ತಮ ಅಡಚಣೆ ಇದು ಎಂದು ಎಲಿಸನ್ ಬಾರ್ಬರ್ ಈ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹೃದಯಸ್ಪರ್ಶಿ ವಿಡಿಯೋ ಎಲ್ಲರ ಮುಖದಲ್ಲಿ ನಗುವನ್ನು ಮೂಡಿಸಿದೆ. ಕೆಲವರು ಯುದ್ಧದ ಕಠೋರ ಚಿತ್ರಣಗಳ ಬಗ್ಗೆ ಮಾತನಾಡಿದರೆ, ಇತರರು ಈ ವೀಡಿಯೊ ಹೇಗೆ ನಗುವಂತೆ ಮಾಡಿದೆ ಎಂದು ಬರೆದಿದ್ದಾರೆ. ಇದು ನನಗೆ ಅಳುವಂತೆ ಮಾಡಿತು. ಆ  ಮಕ್ಕಳಿಗೆ ನಿಮ್ಮ ಗಮನವನ್ನು ಮತ್ತು ಕ್ಯಾಮರಾದ ಶಾಟ್‌ಗಳ ನಡುವೆ ನಿಮ್ಮ ಸಮಯವನ್ನು ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನೀವು ಅದನ್ನು ಅರಿತುಕೊಳ್ಳದಿರಬಹುದು, ಆದರೆ ನೀವು ಆಘಾತವನ್ನು ಸರಿಪಡಿಸಲು ಸಹಾಯ ಮಾಡುತ್ತಿದ್ದೀರಿ ಎಂದು ಬಳಕೆದಾರರು ಬರೆದಿದ್ದಾರೆ.

Follow Us:
Download App:
  • android
  • ios