ನಾನು ಕೀವ್‌ನಲ್ಲೇ ಇದ್ದೇನೆ, ಯಾರಿಗೂ ಹೆದರುವುದಿಲ್ಲ: ಪುಟಿನ್‌ಗೆ ಉಕ್ರೇನ್ ಅಧ್ಯಕ್ಷನ ಚಾಲೆಂಜ್!
* ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿ 13 ದಿನ
* ಝೆಲೆನ್ಸ್ಕಿ ಕೈವ್ ತೊರೆದು ಪೋಲೆಂಡ್ಗೆ ಪಲಾಯನ ಮಾಡಿದ್ದಾರೆ ಎಂಬ ವದಂತಿ
* ವದಂತಿ ಮಧ್ಯೆ ಉಕ್ರೇನ್ ಅಧ್ಯಕ್ಷನ ವಿಡಿಯೋ ಸಂದೇಶ, ಪುಟಿನ್‌ಗೆ ಸವಾಲು
ಕೀವ್(ಮಾ.08): ಉಕ್ರೇನ್ ವಿರುದ್ಧ ರಷ್ಯಾ (Russia) ಯುದ್ಧ ಆರಂಭಿಸಿ 13 ದಿನಗಳಾಗಿವೆ. ಏತನ್ಮಧ್ಯೆ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೈವ್ ತೊರೆದು ಪೋಲೆಂಡ್ಗೆ ಪಲಾಯನ ಮಾಡಿದ್ದಾರೆ ಎಂಬ ವದಂತಿಗಳಿವೆ. ರಷ್ಯಾ ಅನೇಕ ಬಾರಿ ಹೀಗೊಂದು ವಾದ ಮುಂದಿಟ್ಟಿದೆ. ಆದರೆ ಝೆಲೆನ್ಸ್ಕಿ ಈ ಎಲ್ಲಾ ವಾದ ಮತ್ತು ವದಂತಿಗಳನ್ನು ತಳ್ಳಿಹಾಕಿದ್ದಾರೆ. ಮಂಗಳವಾರ, ಝೆಲೆನ್ಸ್ಕಿ (Zelenskyy) ಕೀವ್‌ನಲ್ಲಿರುವ ರಾಷ್ಟ್ರಪತಿ ಭವನದಿಂದ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಪೋಸ್ಟ್ ಮಾಡುತ್ತಾ, 'ನಾನು ರಾಜಧಾನಿ ಕೀವ್ನಲ್ಲಿದ್ದೇನೆ ಮತ್ತು ಯಾರಿಗೂ ಹೆದರುವುದಿಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಬಹಿರಂಗ ಸವಾಲೆಸೆದಿದ್ದಾರೆ.
Ukraine Crisis: ರಷ್ಯಾದ ದಾಳಿಯಲ್ಲಿ ಉಕ್ರೇನ್‌ನ ಎರಡನೇ ಪರಮಾಣು ಸ್ಥಾವರ ನಾಶ!
ಉಕ್ರೇನಿಯನ್ ಅಧ್ಯಕ್ಷರು (Ukraine President) ತಾವು ಯಾವುದೇ ಬಂಕರ್‌ನಲ್ಲಿ ಅಡಗಿಕೊಂಡಿಲ್ಲ. ಅಲ್ಲದೇ ಈ ದೇಶಭಕ್ತಿಯ ಯುದ್ಧವನ್ನು ಗೆಲ್ಲಲು ಅಗತ್ಯವಿರುವವರೆಗೂ ಕೀವ್‌ನಲ್ಲಿಯೇ ಇರುವುದಾಗಿ ಹೇಳಿದರು. ಝೆಲೆನ್ಸ್ಕಿ ಅವರು ರಾಷ್ಟ್ರಪತಿ ಭವನದಿಂದ ತಮ್ಮ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ರಷ್ಯಾ ಮತ್ತು ಅಲ್ಲಿನ ಜನರಿಗೆ ಖಡಕ್ ಸಂದೇಶವನ್ನು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ರಾಜಧಾನಿ ಕೀವ್‌ನಲ್ಲಿರುವ ರಾಷ್ಟ್ರಪತಿ ಭವನದ ಕಾರಿಡಾರ್‌ನಲ್ಲಿ ರಾತ್ರಿ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ರಷ್ಯಾದ ಸೈನ್ಯವು ರಾಜಧಾನಿ ಕೀವ್ ಅನ್ನು ಎಲ್ಲಾ ಕಡೆಯಿಂದ ಸುತ್ತುವರೆದಿರುವ ಮತ್ತು ಅದರ ಹಿಡಿತವು ಬಲಗೊಳ್ಳುತ್ತಿರುವ ಸಮಯದಲ್ಲಿ ಝೆಲೆನ್ಸ್ಕಿ ಈ ವಿಡಿಯೋ ಮೂಲಕ ವಿಶ್ವದೆದುರು ಬಂದಿದ್ದಾರೆ. ದೇಶವನ್ನು ತೊರೆಯುವ ಪ್ರಸ್ತಾಪವನ್ನು ಸ್ವೀಕರಿಸಲು ಒಪ್ಪದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ತಾನು ಹಾಗೂ ಇತರ ಸಹಾಯಕರು ರಾಜಧಾನಿಯಲ್ಲಿ ಉಳಿಯುವುದಾಗಿ ಎಲ್ಲರಿಗೂ ಭರವಸೆ ನೀಡಿದ್ದಾರೆ.
ಭಾರತೀಯ ಸೇನೆಯಿಂದ ರಿಜೆಕ್ಟ್ ಆಗಿದ್ದ ಯುವಕ ಉಕ್ರೇನ್ ಸೇನೆ ಸೇರಿದ
'ದೇಶಭಕ್ತಿ ತುಂಬಿದ ಯುದ್ಧ ಗೆಲ್ಲುವವರೆಗೂ ನಾನು ಇಲ್ಲೇ ಇರುತ್ತೇನೆ'
Zelensky ತಮ್ಮ ವಿಡಿಯೋದಲ್ಲಿ, 'ನಮ್ಮ ಕಚೇರಿಯಿಂದ ಸೋಮವಾರ ಸಂಜೆ. ಸೋಮವಾರ ಬಹಳ ಕಷ್ಟದ ದಿನ ಎಂದು ನಾವು ಯಾವಾಗಲೂ ಹೇಳುತ್ತಲೇ ಇದ್ದೇವೆ. ನಮ್ಮ ದೇಶದಲ್ಲಿ ಯುದ್ಧ ನಡೆಯುತ್ತಿದೆ. ಹಾಗಾಗಿ ನಮಗೆ ಪ್ರತಿ ದಿನವೂ ಈಗ ಸೋಮವಾರ ಎಂದಿದ್ದಾರೆ. ರಾಷ್ಟ್ರಪತಿ ಭವನದ ಕಾರಿಡಾರ್‌ನಲ್ಲಿ ನಡೆದಾಡಿದ ನಂತರ ಅವರು ತಮ್ಮ ಕುರ್ಚಿಯಲ್ಲಿ ಕುಳಿತಿರುವುದು ಕಂಡುಬಂದಿದೆ. ಈ ವೇಳೆ, 'ನಾನು ಬಾರ್ಕೋವಾ ಬೀದಿಯಲ್ಲಿರುವ ಕೀವ್‌ನಲ್ಲಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ. ನನ್ನ ದೇಶಭಕ್ತಿಯ ಯುದ್ಧವನ್ನು ಗೆಲ್ಲುವವರೆಗೂ ನಾನು ಇಲ್ಲೇ ಇರುತ್ತೇನೆ' ಎಂದಿದ್ದಾರೆ.
ಪ್ರತಿಯೊಂದು ದೌರ್ಜನ್ಯಕ್ಕೂ ಪ್ರತೀಕಾರ ತೀರಿಸಿಕೊಳ್ಳಲಾಗುವುದು
ಉಕ್ರೇನ್ ಜನರಿಗೆ ಕಿರುಕುಳ ನೀಡುವ ಪ್ರತಿಯೊಬ್ಬರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಝೆಲೆನ್ಸ್ಕಿ ಈ ಹಿಂದೆ ಹೇಳಿದ್ದರು. ಅವರು ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡುತ್ತಾ- 'ಯುದ್ಧಕ್ಕೆ ಕಾರಣರಾದವರಿಗೆ ಶಿಕ್ಷೆಯನ್ನು ನೀಡುವುದಾಗಿ ನಾನು ಪ್ರತಿಜ್ಞೆ ಮಾಡಿದ್ದೇನೆ. ಉಕ್ರೇನ್ ಯಾವುದನ್ನೂ ಮರೆಯುವುದಿಲ್ಲ ಎಂದಿದ್ದಾರೆ.
ಚೀನಾ ಧ್ವಜ ಹಾಕಿ ರಷ್ಯಾ ಮೇಲೆ ದಾಳಿ ಮಾಡಬೇಕು, ಮಜಾ ನೋಡೋಣ: ಟ್ರಂಪ್
ಝೆಲೆನ್ಸ್ಕಿತಮ್ಮ ಭಾಷಣದಲ್ಲಿ 'ಇದು ಕೊಲೆ, ಉದ್ದೇಶಪೂರ್ವಕ ಹತ್ಯೆ, ಏಕೆಂದರೆ ರಷ್ಯಾ ಸೋಮವಾರ ಹೆಚ್ಚಿನ ಶೆಲ್ ದಾಳಿಯ ಎಚ್ಚರಿಕೆ ನೀಡಿದೆ. ನಾವು ಇದನ್ನು ಎಂದಿಗೂ ಮರೆಯುವುದಿಲ್ಲ ಅಥವಾ ಭಾಗಿಯಾಗಿರುವವರನ್ನು ಕ್ಷಮಿಸುವುದಿಲ್ಲ. ನಮ್ಮ ಭೂಮಿಗೆ ಅತಿಕ್ರಮಣ ಮಾಡುವವರೆಲ್ಲರನ್ನು ಶಿಕ್ಷಿಸುತ್ತೇವೆ. ಈ ಭೂಮಿಯ ಮೇಲೆ ಸಮಾಧಿಯನ್ನು ಹೊರತುಪಡಿಸಿ ಯಾವುದೇ ಶಾಂತಿಯುತ ಸ್ಥಳವಿಲ್ಲ' ಎಂದಿದ್ದಾರೆ.