ಜಗತ್ತಿನ ಅತಿ ದುಬಾರಿ ನಗರಗಳಲ್ಲಿ ಒಂದು ಎಂದು ಗುರುತಿಸಿಕೊಳ್ಳುವ ಬ್ರಿಟನ್ನ ರಾಜಧಾನಿ ಲಂಡನ್ನಲ್ಲಿ ಮನೆ ಬಾಡಿಗೆ ಗಗನಕ್ಕೇರಿ ಕುಳಿತಿದ್ದು, ಮನೆ ಮಾಲೀಕರು ಮಾಸಿಕ 2.50 ಲಕ್ಷ ರು.ನಿಂದ 3 ಲಕ್ಷ ರು.ವರೆಗೂ ಬಾಡಿಗೆ ಕೇಳುತ್ತಿದ್ದಾರೆ.
ಲಂಡನ್: ಜಗತ್ತಿನ ಅತಿ ದುಬಾರಿ ನಗರಗಳಲ್ಲಿ ಒಂದು ಎಂದು ಗುರುತಿಸಿಕೊಳ್ಳುವ ಬ್ರಿಟನ್ನ ರಾಜಧಾನಿ ಲಂಡನ್ನಲ್ಲಿ ಮನೆ ಬಾಡಿಗೆ ಗಗನಕ್ಕೇರಿ ಕುಳಿತಿದ್ದು, ಮನೆ ಮಾಲೀಕರು ಮಾಸಿಕ 2.50 ಲಕ್ಷ ರು.ನಿಂದ 3 ಲಕ್ಷ ರು.ವರೆಗೂ ಬಾಡಿಗೆ ಕೇಳುತ್ತಿದ್ದಾರೆ. ಇದು ಈಗಾಗಲೇ ವಿದ್ಯುತ್‌ದರ ಏರಿಕೆ, ಸಾರ್ವಕಾಲಿಕ ಗರಿಷ್ಠ ಹಣದುಬ್ಬರ ಸಮಸ್ಯೆಯಿಂದ ಬಳಲುತ್ತಿರುವ ಜನರ ಬದುಕನ್ನು ಹೈರಾಣಾಗಿಸಿದೆ ಎಂದು ವರದಿಗಳು ತಿಳಿಸಿವೆ. ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದು, ಅಗತ್ಯ ಪ್ರಮಾಣದಲ್ಲಿ ಮನೆಗಳ ಲಭ್ಯತೆ ಇಲ್ಲದೇ ಇರುವುದು ಬಾಡಿಗೆ ದರ ಭಾರೀ ಪ್ರಮಾಣದಲ್ಲಿ ಏರಿಕೆಗೆ ಕಾರಣ ಎನ್ನಲಾಗಿದೆ. ಕಳೆದ ವರ್ಷ ಲಂಡನ್ನಲ್ಲಿ ಮನೆ ಬಾಡಿಗೆ ದರ ಶೇ.9.7ರಷ್ಟು ಹೆಚ್ಚಾಗಿತ್ತು. 2021ರಲ್ಲಿ ಶೇ.9.9ರಷ್ಟು ಹೆಚ್ಚಾಗಿತ್ತು.
