Asianet Suvarna News Asianet Suvarna News

ಅಮೆರಿಕದಲ್ಲಿ ಮಂಕಿಪಾಕ್ಸ್ ಆತಂಕ, ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ ಸ್ಯಾನ್ ಫ್ರಾನ್ಸಿಸ್ಕೋ!

ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ನಗರವೊಂದು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಅಮೆರಿಕದ ಸ್ಯಾನ್ಸ್‌ಫ್ರಾನ್ಸಿಸ್ಕೋ ಈ ಘೋಷಣೆ ಮಾಡಿದೆ. ಇದು ಇತರ ನಗರ ಹಾಗೂ ದೇಶಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ.

Monkeypox outbreak san francisco declared local health emergency after 4600 cases in America ckm
Author
Bengaluru, First Published Jul 29, 2022, 10:27 PM IST

ಸ್ಯಾನ್ ಫ್ರಾನ್ಸಿಸ್ಕೋ(ಜು.29): ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಭಾರತದಲ್ಲಿ ಈಗಾಗಲೇ 4 ಪ್ರಕರಣಗಳು ದಾಖಲಾಗಿದೆ. 76 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಕೋವಿಡ್ ರೀತಿಯಲ್ಲೇ ಅಪಾಯ ತಂದೊಡ್ಡಬಲ್ಲ ಮಂಕಿಪಾಕ್ಸ್ ಪ್ರಕರಣ ಇದೀಗ ಅಮೆರಿಕದಲ್ಲಿ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಸ್ಯಾನ್ಸ್ ಫ್ರಾನ್ಸಿಸ್ಕೋ ನಗರದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಲಾಗಿದೆ. ಮಂಕಿಪಾಕ್ಸ್ ವೈರಸ್ ಕಾರಣ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ ವಿಶ್ವದ ಮೊದಲ ನಗರ ಸ್ಯಾನ್ ಫ್ರಾನ್ಸಿಸ್ಕೋ ಆಗಿದೆ. ಕೋವಿಡ್ ಅಲೆಯಿಂದ ಎಚ್ಚೆತ್ತುಕೊಂಡಿರುವ ಅಮೆರಿಕ ಮಂಕಿಪಾಕ್ಸ್ ಪ್ರಕರಣ ಏರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗಾಗಿ ಆರಂಭದಲ್ಲೇ ವೈರಸ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲೋಕಲ್ ಎಮರ್ಜೆನ್ಸಿ ಘೋಷಿಸಿದೆ.

ಅಮೆರಿಕದಲ್ಲಿ ಮಂಕಿಪಾಕ್ಸ್ ವೈರಸ್ ಸಂಖ್ಯೆ 4,600ಕ್ಕೇರಿದೆ. ಸ್ಯಾನ್ಸ್ ಫ್ರಾನ್ಸಿಸ್ಕೋದಲ್ಲಿ ದಿಢೀರ್ ಪ್ರಕರಣ ಸಂಖ್ಯೆ ಗಣನೀಯ ಏರಿಕೆ ಕಂಡು ಬಂದಿದೆ. ಸದ್ಯ 261 ಪ್ರಕರಣ ದಾಖಲಾಗಿದೆ. ಇನ್ನು ಕ್ಯಾಲಿಫೋರ್ನಿಯಾದಲ್ಲಿ 799 ಪ್ರಕರಣ ಪತ್ತೆಯಾಗಿದೆ. ಒಟ್ಟು 76 ದೇಶಗಲ್ಲಿ ಸುಮಾರು 19,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದು ಆತಂಕಕ್ಕೆ ಕಾರಣವಾಗಿದೆ.

ಮಂಕಿಪಾಕ್ಸ್ ಅಲರ್ಟ್‌; ಪುರುಷ ಸಲಿಂಗಕಾಮಿಗಳು ಲೈಂಗಿಕ ಸಂಬಂಧ ಮಿತಿಗೊಳಿಸಿ, WHO ವಾರ್ನಿಂಗ್‌

ಸಮುದಾಯಕ್ಕೆ ಹಬ್ಬುವುದನ್ನು ತಡೆಯಲು ತುರ್ತು ಆರೋಗ್ಯ ಪರಿಸ್ಥಿತಿ ಅಗತ್ಯ. ಈಗಲೇ ವೈರಸ್ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಮುಂದಿನ ದೊಡ್ಡ ಅನಾಹುತವನ್ನು ತಪ್ಪಿಸಲು ಇದು ನೆರವಾಗಲಿದೆ ಎಂದು ಫ್ರಾನ್ಸಿಸ್ಕೋ ಮೇಯರ್ ಹೇಳಿದ್ದಾರೆ. ಮಂಕಿಪಾಕ್ಸ್ ಪ್ರಕರಣದಿಂದ ಲಸಿಕೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 12,000 ಮಂಕಿಪಾಕ್ಸ್ ಲಸಿಕೆ ನೀಡಲಾಗಿದೆ. 35,000 ಮಂಕಿಪಾಕ್ಸ್ ಲಸಿಕೆಗೆ ಮನವಿ ಮಾಡಲಾಗಿದೆ ಎಂದು ಮೇಯರ್ ಹೇಳಿದ್ದಾರೆ. 

ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಿಸಿತ್ತು. ಆದರೆ ಯಾವುದೇ ದೇಶ ಮಂಕಿಪಾಕ್ಸ್ ಪ್ರಕರಣಕ್ಕೆ ಸಂಬಂಧಿಸಿ ಎಮರ್ಜೆನ್ಸಿ ಘೋಷಿಸಿಲ್ಲ. ಇದೀಗ ಸ್ಯಾನ್ಸ್ ಫ್ರಾನ್ಸಿಸ್ಕೋ ಘೋಷಿಸಿದೆ. ಇದರಿಂದ ಇತರ ದೇಶಗಳ ಆತಂಕವೂ ಹೆಚ್ಚಾಗಿದೆ. 

Monkeypox Update: ಮಂಕಿಪಾಕ್ಸ್‌ ಎಚ್ಚರಿಕೆಯ ಗಂಟೆ, ಸಾಂಕ್ರಾಮಿಕವಾಗಿ ಹರಡುವ ಭೀತಿ; WHO ವಿಜ್ಞಾನಿ

ಮಂಕಿಪಾಕ್ಸ್‌ ಸೋಂಕು ಜಗತ್ತಿನ ವಿವಿದ ರಾಷ್ಟ್ರಗಳಲ್ಲಿ ವೇಗವಾಗಿ, ಬೇರೆ ಬೇರೆ ವಿಧಾನಗಳ ಮೂಲಕ ಹರಡುತ್ತಿದೆ. ದಶಕಗಳಿಂದಲೂ ಕೇಂದ್ರ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತಿದ್ದ ಮಂಕಿಪಾಕ್ಸ್‌, ಮೇ ತಿಂಗಳ ನಂತರ ಯುರೋಪ್‌, ಉತ್ತರ ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ಭಾಗದಲ್ಲಿ ಪತ್ತೆಯಾಗುತ್ತಿದೆ. ಆದರೆ ಇದರ ಬಗ್ಗೆ ನಮಗೆ ತಿಳಿದಿರುವ ಮಾಹಿತಿ ಅತ್ಯಂತ ಅಲ್ಪವಾಗಿದೆ. ದಶಕಗಳ ಹೀಗಾಗಿ ಇದು ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆಯ ‘ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳಲ್ಲಿನ ಮಾನದಂಡ’ವನ್ನು ಪೂರೈಸುತ್ತದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೋಸ್‌ ಅಧಾನೋಮ್‌ ಘೆಬ್ರೆಯೆಸೆಸ್‌ ಟೆಡ್ರೋಸ್‌ ಹೇಳಿದ್ದರು. 

ಹೆಚ್ಚಾಗಿ ಆಫ್ರಿಕಾದಲ್ಲಿ ಪ್ರಾಣಿಗಳಿಗೆ ಮಾನವರಿಗೆ ತಗಲುತ್ತಿದ್ದ ಸೋಂಕು ಮಂಕಿಪಾಕ್ಸ್‌. ಇದು ಮಂಕಿಪಾಕ್ಸ್‌ ಎಂಬ ವೈರಸ್‌ನಿಂದ ಹರಡುತ್ತದೆ. ಸಿಡುಬಿನ ಲಕ್ಷಣಗಳನ್ನೇ ಇದು ಹೊಂದಿದೆ. ಮಂಕಿಪಾಕ್ಸ್‌ ಸೋಂಕಿತರ ಸಂಪರ್ಕಕ್ಕೆ ಬರುವವರಿಗೆ ಈ ಸೋಂಕು ಹರಡುತ್ತದೆ. ಸೋಂಕಿತರು ಸೀನಿದಾಗ, ಅವರನ್ನು ಮುಟ್ಟಿದಾಗ, ಅವರು ಮುಟ್ಟಿದ ವಸ್ತುಗಳನ್ನು ಬಳಸಿದಾಗ ಈ ಸೋಂಕು ತಗಲುತ್ತದೆ.

Follow Us:
Download App:
  • android
  • ios