Asianet Suvarna News Asianet Suvarna News

ಆನ್‌ಲೈನ್ ಹಣ ವರ್ಗಾವಣೆ ವೇಳೆ ಎಡವಟ್ಟು: 15 ಸಾವಿರದ ಬದಲು 15 ಲಕ್ಷ ದಾನ ಮಾಡಿದ ಮಿಚೆಲ್

ಆನ್ಲೈನ್ ಹಣ ವರ್ಗಾವಣೆ ಮಾಡುವ ವೇಳೆ ಬಹಳ ಜಾಗರೂಕವಾಗಿರಬೇಕು. ಒಂದಂಕಿ ಹೆಚ್ಚು ಕಡಿಮೆ ಆದರೂ ಲಕ್ಷಗಟ್ಟಲೇ ಹಣ ನಿಮ್ಮ ಖಾತೆಯಿಂದ ಜಾರಿ ಹೋಗಬಹುದು.  ಅದೇ ರೀತಿ ಇಲ್ಲೊಂದು ಕಡೆ ದಾನ ಮಾಡಲು ಹೋದ ವ್ಯಕ್ತಿಯೊಬ್ಬರು ತಾವು ಮಾಡಿದ ಸಣ್ಣ ಎಡವಟ್ಟಿನಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

Mistake during online money transfer US Man Mitchell donated 15 lakhs instead of 15 thousand akb
Author
First Published Mar 14, 2024, 3:37 PM IST

ನವದೆಹಲಿ: ಆನ್ಲೈನ್ ಹಣ ವರ್ಗಾವಣೆ ಮಾಡುವ ವೇಳೆ ಬಹಳ ಜಾಗರೂಕವಾಗಿರಬೇಕು. ಇಲ್ಲದೇ ಹೋದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಂದಂಕಿ ಹೆಚ್ಚು ಕಡಿಮೆ ಆದರೂ ಲಕ್ಷಗಟ್ಟಲೇ ಹಣ ನಿಮ್ಮ ಖಾತೆಯಿಂದ ಜಾರಿ ಹೋಗಬಹುದು.  ಅದೇ ರೀತಿ ಇಲ್ಲೊಂದು ಕಡೆ ದಾನ ಮಾಡಲು ಹೋದ ವ್ಯಕ್ತಿಯೊಬ್ಬರು ತಾವು ಮಾಡಿದ ಸಣ್ಣ ಎಡವಟ್ಟಿನಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.  ಗೋ ಫಂಡ್ ಮೀಗೆ ಹಣ ಡೊನೇಟ್ ಮಾಡಲು ಹೋದ ಮಿಚೆಲ್ ಎಂಬುವವರು 12 ಸಾವಿರ ಹಾಕುವ ಬದಲು 12 ಲಕ್ಷ ಹಾಕಿದ್ದು, ಬಳಿಕ ಇಂಗು ತಿಂದ ಮಂಗನಂತಾಗಿದ್ದಾರೆ.

ವಿದೇಶಗಳಲ್ಲಿ ಗೋ ಫಂಡ್ ಮೀ ಅತ್ಯಂತ ಹೆಚ್ಚು ಪ್ರಚಲಿತದಲ್ಲಿದೆ. ಎನ್‌ಜಿಒ ಮೂಲಕ ಸಂಕಷ್ಟದಲ್ಲಿರುವವರಿಗೆ ಆನ್‌ಲೈನ್ ಮೂಲಕ ಹಣ ಸಂಗ್ರಹಿಸುವ ಅಭಿಯಾನ ಇದಾಗಿದೆ. ವೈದ್ಯಕೀಯ ಸಮಸ್ಯೆಯಿಂದ ಬಳಲುವವರು ನಿರ್ಗತಿಕರು ಸೇರಿದಂತೆ ದುರ್ಬಲ ವರ್ಗದ ನೆರವಿವಾಗಿ ಕೆಲವರು ಆನ್‌ಲೈನ್ ಮೂಲಕ ಹಣ ಸಂಗ್ರಹಿಸಲು ಗೋ ಫಂಡ್ ಮೀ ಎಂಬ ವೆಬ್ ಸೈಟ್ ಮೂಲಕ ಅಭಿಯಾನ ಮಾಡುತ್ತಾರೆ. ಇದಕ್ಕೆ ಸಾವಿರಾರು ಜನ ಸಹಾಯ ಮಾಡುತ್ತಾರೆ. ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಯೂಟ್ಯೂಬ್‌ಗಳಲ್ಲಿ ವಿಡಿಯೋ ನೋಡುತ್ತಿರುವಾಗ ಇಂತಹ ಗೋ ಫಂಡ್ ಮೀ ರೀತಿಯ ಜಾಹೀರಾತುಗಳನ್ನು  ನೀವು ಸಾಕಷ್ಟು ನೋಡಿರುತ್ತೀರಿ. 

ಡಿಜಿಟಲ್ ಪಾವತಿಯಲ್ಲಿ ಮರ್ಚೆಂಟ್ UPI ಪ್ಲಗಿನ್ ಕ್ರಾಂತಿ, ಬಳಕೆ ಎಷ್ಟು ಸುರಕ್ಷಿತ?

ಹಾಗೆಯೇ ಬಾಂಗ್ಲಾದೇಶದ ಜನರ ಜೀವನಮಟ್ಟವನ್ನು ಸುಧಾರಿಸುವುದಕ್ಕಾಗಿ ಎನ್‌ಜಿಒವೊಂದು ಗೋ ಫಂಡ್ ಮೀ ಅಭಿಯಾನದ ಮೊರೆ ಹೋಗಿದ್ದು, ಅದನ್ನು ನೋಡಿದ ಮಿಚೆಲ್ ಎಂಬುವವರು 12,435 ರೂಪಾಯಿಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಆದರೆ ಅದೇನಾಯ್ತೂ ಏನೋ 12,46, 991 ರೂಪಾಯಿ ಅವರ ಖಾತೆಯಿಂದ ಕಟ್ ಆಗಿದೆ. ಈ ವಿಚಾರವನ್ನು ಅವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪಕ್ಕದ ಮನೆಯವರು ಈ ಚಾರಿಟಿಗೆ ದಾನ ಮಾಡುವಂತೆ ಹೇಳಿದ್ದರು. ಅದರಂತೆ ನಾನು ಗೋ ಫಂಡ್ ಪೇಜ್‌ಗೆ ಹೋಗಿ 150 ಡಾಲರ್ ದಾನ ಮಾಡಲು ಮುಂದಾದೆ. ಆದರೆ ಕೆಲ ಸಮಯದ ನಂತರ ನನಗೆ ನನ್ನ ಕ್ರೆಡಿಟ್‌ ಕಾರ್ಡ್‌ನಿಂದ ಅಸಹಜವೆನಿಸಿದ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿದೆ ಎಂಬ ಮೆಸೇಜ್ ಬಂತು. ಗೊಂದಲಕ್ಕೊಳಗಾಗಿ  ನಾನು ಸಂದೇಶ ತೆರೆದು ನೋಡಿದಾಗ  150 ಡಾಲರ್ ಬದಲು ನಾನು 15,041 ಡಾಲರ್ ಹಣವನ್ನು ಗೋ ಫಂಡ್ ಮೀಗೆ ವರ್ಗಾಯಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಕೂಡಲೇ ನನಗೆ ಬೆವರಲು ಶುರುವಾಯ್ತು.  ನಾನು ಹೇಗೆ 15 ಸಾವಿರ ಡಾಲರ್ ದಾನ ಮಾಡಲು ಸಾಧ್ಯ, ನಂತರದ 10 ರಿಂದ 15 ನಿಮಿಷ  ನಾನು ಏನು ಮಾಡಿದೆ ಎಂಬುದನ್ನು ನೋಡತೊಡಗಿದೆ. ನನ್ನ ಕ್ರೆಡಿಟ್ ಕಾರ್ಡ್ 4 ಮತ್ತು 1 ಸಂಖ್ಯೆಗಳಿಂದ ಪ್ರಾರಂಭವಾಗುತ್ತದೆ ಎಂಬುದು ತಿಳಿಯಿತು ಹಾಗೂ ನಾನು ಕರ್ಸರ್ ದೇಣಿಗೆ ಮೊತ್ತವನ್ನು ಟೈಪ್ ಮಾಡುವಲ್ಲಿ ಇದ್ದಾಗಲೇ ನ್ನ ಕ್ರೆಡಿಟ್ ಕಾರ್ಡ್  ನಂಬರ್ ಟೈಪ್ ಮಾಡಿದೆ ಎಂದು ತೋರುತ್ತದೆ ಇದರಿಂದ 150 ರ ಬದಲು 15041 ಆಯ್ತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

4 ಕೋಟಿ ಚಿನ್ನಾಭರಣ ಕದ್ದ ಕಳ್ಳರು, 40 ರೂಪಾಯಿ ಪೇಟಿಎಂ ಮಾಡಿ ಸಿಕ್ಕಿಬಿದ್ರು!

ಈ ಬಗ್ಗೆ ಗೋ ಫಂಡ್ ಮಿ ಸಹಾಯವಾಣಿಯನ್ನು ಸಂಪರ್ಕಿಸಿದಾಗ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು,  ಮುಂದಿನ 3 ಅಥವಾ 7 ದಿನದೊಳಗೆ ಹಣ ಹಿಂದಿರುಗಿಸುವುದಾಗಿ ಹೇಳಿದರು ಎಂದು ಮಾಹಿತಿ ನೀಡಿದ್ದಾರೆ.  ಆದರೆ ಮಾರನೇ ದಿನ ಅವರು ತಮ್ಮ ಫೇಸ್‌ಬುಕ್ ನೋಡಿದಾಗ,  40ಕ್ಕೂ ಹೆಚ್ಚು ನೋಟಿಫಿಕೇಷನ್  ಅಲ್ಲಿದ್ದು ಅನೇಕರು ಅವರಿಗೆ ಧನ್ಯವಾದ ಹೇಳಿದ್ದರು.  ಹೀಗಾಗಿ ಅವರು  ತಾನು ಆ ಎಲ್ಲಾ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿದರು. ಅಲ್ಲದೇ 82,906 ರೂಪಾಯಿಗಳನ್ನು ದಾನ ಮಾಡಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ.

Follow Us:
Download App:
  • android
  • ios