ನಾಪತ್ತೆಯಾದ 4 ಮಕ್ಕಳ ತಾಯಿ ಮೂರು ದಿನ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!

ಮಹಿಳೆ ಇದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಎಷ್ಟೇ ಹುಡುಕಿದರೂ ಸಿಗಲಿಲ್ಲ, ಪೊಲೀಸರಿಗೆ ದೂರು ನೀಡಲಾಗಿತ್ತು. ಇತ್ತ ಹುಡುಕಾಟ ತೀವ್ರಗೊಂಡಿತ್ತು. 3 ದಿನಗಳ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆ ಶವ ಪತ್ತೆಯಾಗಿದೆ.

Missing Woman found dead in python stomach 3 days after in Indonesia ckm

ಮಕಸ್ಸಾರ್(ಜೂ.09) ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದರೆ, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮೂರು ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾಗಿದ್ದ ಮಹಿಳೆ ಇದೀಗ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೂರು ದಿನಗಳಿಂದ ಹುಡುಕಾಡಿದ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪೊಲೀಸರಿಗೆ ಕೊನೆಗೆ ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಈ ಘಟನೆಯಿಂದ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಹಲವರು ಗ್ರಾಮ ಖಾಲಿ ಮಾಡುತ್ತಿರುವ ಘಟನೆ ಇಂಡೋನೇಷಿಯಾದ ಮಕಸ್ಸಾರ್‌ನಲ್ಲಿ ನಡೆದಿದೆ.

ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿ 45 ವರ್ಷದ ಫರಿದಾ ಹೆಬ್ಬಾವಿಗೆ ಆಹಾರವಾಗಿದ್ದಾಳೆ. ಜೂನ್ 6 ರ ರಾತ್ರಿ 4 ಮಕ್ಕಳ ತಾಯಿ ಏಕಾಏಕಿ ನಾಪತ್ತೆಯಾಗಿದ್ದಾರೆ. ಫರಿದಾ ಮನೆಗೆ ವಾಪಸ್ ಬಾರದ ಕಾರಣ ಕುಟುಂಬ ಆತಂಕಗೊಂಡಿತ್ತು. ರಾತ್ರೋರಾತ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.  ಇತ್ತ ರಾತ್ರಿ ವೇಳೆ ಹುಡುಕಾಟ ಆರಂಭಗೊಂಡಿತ್ತು.

ಅಬ್ಬಬ್ಬಾ! ಹೆಬ್ಬಾವಿನೊಂದಿಗೆ ಆಟವಾಡೋ ಹುಡುಗ; ದೈತ್ಯ ಹಾವಿನ ಮುಖವನ್ನು ಎತ್ತಿದ್ರೂ ಏನ್ ಮಾಡಲ್ಲ!

ಮರು ದಿನ ಬೆಳಗ್ಗೆ ಮನೆಯಿಂದ ಕೆಲ ದೂರದಲ್ಲಿರುವ ದಾರಿಯ ಪಕ್ಕದಲ್ಲಿ ಪತ್ನಿಯ ವಸ್ತುಗಳು ಪತ್ತೆಯಾಗಿತ್ತು. ಅನುಮಾನಗೊಂಡ ಗ್ರಾಮಸ್ಥರು ವಸ್ತುಗಳ ಸಿಕ್ಕ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕಾಡಿನ ಅಂಚಿನಲ್ಲಿ ದೈತ್ಯಗಾತ್ರದ ಹೆಬ್ಬಾವು ಪತ್ತೆಯಾಗಿತ್ತು. ಬರೋಬ್ಬರಿ 16 ಅಡಿ ಉದ್ದದ ದೈತ್ಯ ಹೆಬ್ಬಾವಿನ ಹೊಟ್ಟೆ ಊದಿಕೊಂಡಿತ್ತು. ಹೀಗಾಗಿ ಗ್ರಾಮಸ್ಥರು ಈ ಹೆಬ್ಬಾವು ಫರಿದಾಳನ್ನು ನುಂಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. 

ಹೆಬ್ಬಾವನ್ನು ಹಿಡಿದು ಹೊಟ್ಟೆ ಸೀಳಿದ್ದಾರೆ. ಈ ವೇಳೆ ಫರಿದಾ ಉಟ್ಟ ಉಡುಗೆಯಲ್ಲೇ ಹೆಬ್ಬಾವಿನ ಹೊಟ್ಟೆ ಸೇರಿರುವುದು ಪತ್ತೆಯಾಗಿದೆ. ಫರಿದಾ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಕಾಂಡಿನಂಚಿನ ಗ್ರಾಮಸ್ಥರಿಗೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಕಲೆಂಪಂಗ್ ಗ್ರಾಮದಲ್ಲಿ ಹೆಬ್ಬಾವುಗಳ ಸಂಖ್ಯೆ ಹೆಚ್ಚಿದೆ. ಕೆಲ ಹೆಬ್ಬಾವುಗಳು 6 ರಿಂದ 10 ಮೀಟರ್ ಉದ್ದವಿದೆ. ದೈತ್ಯ ಗಾತ್ರದ ಹೆಬ್ಬಾವು ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ರಾತ್ರಿ ವೇಳೆ ಅನಗತ್ಯ ಸಂಚಾರ ತಪ್ಪಿಸಿ ಎಂದು ಸಲಹೆ ನೀಡಿದೆ.

ಗ್ರಾಮದಲ್ಲಿ ಹಾವಿನ ಕಾಟಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇದೀಗ ಹಲವರು ಗ್ರಾಮ ಖಾಲಿ ಮಾಡುತ್ತಿದ್ದಾರೆ. ಬೇರೆ ಕಡೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇಂಡೋನೇಷಿಯಾದಲ್ಲಿ ಹೆಬ್ಬಾವು ಮನುಷ್ಯರನ್ನು ನುಂಗುತ್ತಿರುವ ಘಟನೆ ಹೊಸದಲ್ಲ. 2018ರಲ್ಲೂ ಇದೇ ಸುಲವೆಸಿ ಪ್ರಾಂತ್ಯದಲ್ಲಿ 54 ವರ್ಷದ ಮಹಿಳೆಯನ್ನು ಹೆಬ್ಬಾವು ನುಂಗಿತ್ತು.

ಅಬ್ಬಾಬ್ಬ..! ಹೆಬ್ಬಾವನ್ನೇ ಬೇಟೆಯಾಡಿದ ಕಾಳಿಂಗ: ಭಯಾನಕ ವಿಡಿಯೋ
 

Latest Videos
Follow Us:
Download App:
  • android
  • ios