Asianet Suvarna News Asianet Suvarna News

ಅಬ್ಬಬ್ಬಾ! ಹೆಬ್ಬಾವಿನೊಂದಿಗೆ ಆಟವಾಡೋ ಹುಡುಗ; ದೈತ್ಯ ಹಾವಿನ ಮುಖವನ್ನು ಎತ್ತಿದ್ರೂ ಏನ್ ಮಾಡಲ್ಲ!

ಹಾವನ್ನು ಕಂಡರೆ ಮಾರುದೂರ ಓಡುವ ಜನ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುತ್ತಾರೆ. ಆದರೆ, ಪುಟ್ಟ ಹುಡುಗನೊಬ್ಬ ದೈತ್ಯ ದೇಹಿ ಹೆಬ್ಬಾವಿನೊಂದಿಗೆ ಆಟವಾಡುತ್ತಿರುವ ವೀಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ನೋಡುಗರನ್ನು ಭೀತರನ್ನಾಗಿಸುವಲ್ಲಿ ಇದು ಯಶಸ್ವಿಯಾಗಿದೆ. 

This viral video shows small boy playing with big python
Author
First Published Dec 25, 2023, 5:27 PM IST

ಸರೀಸೃಪಗಳ ಲೋಕದಲ್ಲಿ ಹಾವುಗಳಿಗೆ ಪ್ರಧಾನ ಸ್ಥಾನ. ಎಷ್ಟೋ ಹಾವುಗಳು ಭಯಂಕರ ವಿಷವನ್ನು ಹೊಂದಿದ್ದರೆ, ಅದೆಷ್ಟೋ ಹಾವುಗಳು ವಿಷದಿಂದ ಕೂಡಿರುವುದಿಲ್ಲ. ಆದರೂ, ಹಾವು ಎಂದರೆ ನಮಗೆ ಸಿಕ್ಕಾಪಟ್ಟೆ ಭಯ. ಸ್ನೇಕ್ ಫೋಬಿಯಾ ಎನ್ನುವುದು ಅತ್ಯಂತ ನೈಸರ್ಗಿಕವಾಗಿರುವ, ಬಹಳಷ್ಟು ಜನರಲ್ಲಿ ಆಳವಾಗಿ ಬೇರೂರಿರುವಂಥದ್ದು. ನಮ್ಮ ದೇಶದಲ್ಲಿ ಹಾವು ಕಡಿತದಿಂದಲೇ ವರ್ಷಕ್ಕೆ ಸಾವಿರಾರು ಜನ ಜೀವ ಕಳೆದುಕೊಳ್ಳುತ್ತಾರೆ. ಕೆಲವು ಜನರಿಗೆ ಹಾವಿನ ಚಿತ್ರ, ವೀಡಿಯೋಗಳು ಕೂಡ ಬೆನ್ನು ಹುರಿಯಲ್ಲಿ ನಡುಕ ಹುಟ್ಟಿಸುತ್ತವೆ. ಹಾವಿನಿಂದ ದೂರವೇ ಇರಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ, ಏನೂ ಅರಿಯದ ಮಕ್ಕಳು ಮಾತ್ರ ಹಾವಿನೊಂದಿಗೆ ಸರಸವಾಡುತ್ತಾರೆ. ಇತ್ತೀಚೆಗೆ ಇನ್ ಸ್ಟಾಗ್ರಾಮ್ ನಲ್ಲಿ ಆರ್ ಬಿ ಎಂಫೈರ್ ಟಿವಿ ಎನ್ನುವ ಖಾತೆಯಿಂದ ವೀಡಿಯೋವೊಂದು ಶೇರ್ ಹಾಗಿದೆ. ಅದರಲ್ಲಿ ಬಾಲಕನೊಬ್ಬ ದೈತ್ಯ ದೇಹಿಯಾಗಿರುವ ಹೆಬ್ಬಾವಿನೊಂದಿಗೆ ಆಟವಾಡುತ್ತಿದ್ದಾನೆ. ಅದು ಎಲ್ಲಿ ಶೂಟ್ ಮಾಡಿದ ವೀಡಿಯೋ, ಆ ಸ್ಥಳ ಯಾವುದು, ಅಲ್ಲಿಗೇಕೆ ಹಾವು ಬಂತು ಅಥವಾ ಅದು ಸಾಕಿರುವ ಹಾವಾ ಇತ್ಯಾದಿ ಯಾವುದೇ ಮಾಹಿತಿ ಅಲ್ಲಿಲ್ಲ. ಆದರೆ, ಆ ವೀಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಹೆಬ್ಬಾವೆಂದರೆ (Python) ಕೇಳಬೇಕೇ? ಅದು ದೊಡ್ಡ ಗಾತ್ರದ್ದೇ ಆಗಿರುತ್ತದೆ. ಈ ವೀಡಿಯೋದಲ್ಲಿರುವ (Video) ಹಾವು (Snake) ಸಹ ಬರೋಬ್ಬರಿ ದೊಡ್ಡ ದೇಹವನ್ನೇ (Big Body) ಹೊಂದಿದೆ. ಅದು ಮನಸ್ಸು ಮಾಡಿದರೆ ಆ ಹುಡುಗನನ್ನು ಅತಿ ಸುಲಭವಾಗಿ ನುಂಗಿ ಮುಗಿಸಬಲ್ಲದು. ಆದರೆ, ಆ ಹಾವಿನೊಂದಿಗೆ ಹುಡುಗ (Little Boy) ಹೇಗೆ ಆಟವಾಡುತ್ತಿದ್ದಾನೆ ಎಂದರೆ ನೋಡುಗರ ಮೈ ನವಿರೇಳುತ್ತದೆ.

 

ಹಾವಿನ ಮುಖ ಎತ್ತೋದು ಈಸಿನಾ?: ಮನೆಯಲ್ಲಿರೋ ಆಟಿಕೆ ವಸ್ತುವಿನೊಂದಿಗೆ ಆಡುವಷ್ಟೇ ಸಹಜವಾಗಿ ಆತ ಹಾವಿನೊಂದಿಗೆ ಆಡುತ್ತಿದ್ದಾನೆ. ಅದ ಮೈಮೇಲೆ ಏರಿ ಕುಳಿತುಕೊಳ್ಳುತ್ತಾನೆ. ಹಾವೂ ಸಹ ಅದರಿಂದೇನೂ ಕಿರಿಕಿರಿಯಾದಂತೆ ಕಾಣುವುದಿಲ್ಲ. ಬದಲಿಗೆ, ತನ್ನ ಪಾಡಿಗೆ ಸುಮ್ಮನೆ ಹರಿಯುತ್ತದೆ. ಆ ಪುಟ್ಟ ಬಾಲಕ ಅದು ಸುರುಳಿಯಾಕಾರದಲ್ಲಿ ಮಲಗಿದ್ದಾಗ ಅದರ ಮೇಲೆ ಏರುತ್ತಾನೆ. ಮುಂದೆ ಸಾಗಿದಾಗ, ಹೊರಟುಹೋಯಿತು ಎನ್ನುವಂತೆ ಕೂಗುತ್ತ ಅದರ ಮುಖದ ಭಾಗವನ್ನು ಹಿಡಿದು ಎತ್ತುತ್ತಾನೆ. ಆದರೂ ಅದು ಏನೂ ಮಾಡದೆ ಸುಮ್ಮನೆ ಇರುತ್ತದೆ. ಆ ಮಗುವಿಗೆ ಏನೂ ಭಯವಿಲ್ಲ (Fear), ಆದರೆ ವೀಡಿಯೋ ನೋಡಿದವರು ಮಾತ್ರ ಭಯಭೀತರಾಗುವುದು ಗ್ಯಾರೆಂಟಿ. 
ವರದಿಗಳ ಪ್ರಕಾರ, ಇದು ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದಲ್ಲಿ ಸೆರೆ ಹಿಡಿದ ವೀಡಿಯೋ ಆಗಿದೆ. 

ನಾವು ಶೀಘ್ರದಲ್ಲೇ ದಿವಾಳಿಯಾಗುತ್ತೇವೆ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹೀಗೆ ಹೇಳಿದ್ಯಾಕೆ?

ಈ ವೀಡಿಯೋವನ್ನು 5 ಲಕ್ಷದ 20 ಸಾವಿರಕ್ಕೂ ಅಧಿಕ ಜನ ಲೈಕ್ (Like) ಮಾಡಿದ್ದಾರೆ ಹಾಗೂ ಆನ್ ಲೈನ್ ನೋಡುಗರಿಂದ ಸಿಕ್ಕಾಪಟ್ಟೆ ಕಾಮೆಂಟ್ ಗಳನ್ನೂ ಇದು ಸ್ವೀಕಾರ ಮಾಡಿದೆ. ಹಲವು ವೀಕ್ಷಕರು (Viewers) ಇದಕ್ಕೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಮಕ್ಕಳು ಹಾವಿನೊಂದಿಗೆ ಸರಸವಾಡುವುದು ಸರಿಯಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. 

ಭಾರತದ ಗೆಲುವಿನ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಆಸೀಸ್ ನಾಯಕಿ..! ವಿಡಿಯೋ Viral

ಕೆಲವರು “ಈ ಮಗುವಿನಂತೆಯೇ ಎಲ್ಲ ಮಕ್ಕಳೂ ಹಾವಿನ್ನು ಸಮೀಪದಿಂದ ನೋಡುವುದನ್ನು ಕಲಿತುಕೊಳ್ಳಬೇಕು, ಆಗಲೇ ನಿಸರ್ಗದ (Nature) ಬಗ್ಗೆ ಗೌರವ ಮೂಡುತ್ತದೆ’ ಎಂದು ಹೇಳಿದ್ದಾರೆ. ಹಲವರು, “ಇದು ನಿಜಕ್ಕೂ ಭಯಾನಕ. ನನಗೆ ಇದನ್ನು ನೋಡಲು ಇಷ್ಟವಾಗುವುದಿಲ್ಲ’ ಎಂದು ಹೇಳಿದ್ದರೆ, ಹುಡುಗನ ಧೈರ್ಯವನ್ನು (Brave) ಹಲವರು ಮೆಚ್ಚಿಕೊಂಡಿದ್ದಾರೆ. ಸಾಕಷ್ಟು ಜನ ಇಷ್ಟು ಅಸುರಕ್ಷಿತವಾಗಿ ಮಗುವನ್ನು ಹಾವಿನೊಂಡಿಗೆ ಬಿಡುವುದು ಅಪಾಯಕರ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡಿದರೆ ಎಲ್ಲರಿಗೂ ಒಮ್ಮೆ ಬೆನ್ನುಹುರಿಯಲ್ಲಿ ಛಳಕ್ ಎನ್ನುವುದು ಖಚಿತ.  

Follow Us:
Download App:
  • android
  • ios