ನಾಪತ್ತೆಯಾಗಿದ್ದ ರಷ್ಯಾದ AN-26 ಸಮುದ್ರದಲ್ಲಿ ಪತನ ವಿಮಾನದ ಅವಶೇಷಗಳು ಸಮುದ್ರ ತೀರದಲ್ಲಿ ಪತ್ತೆ ವಿಮಾನದಲ್ಲಿದ್ದ ಪ್ರಯಾಣಿಕರು ,ಸಿಬ್ಬಂದಿಗಳು ನಾಪತ್ತೆ

ರಷ್ಯಾ(ಜು.06): ನಾಪತ್ತೆಯಾಗಿದ್ದ ರಷ್ಯಾದ AN-26 ವಿಮಾನ ಸಮುದ್ರದಲ್ಲಿ ಪತನವಾಗಿರುವುದಾಗಿ ಮಾಹಿತಿಗಳು ಲಭ್ಯವಾಗಿದೆ. ರಷ್ಯಾದ ಪೂರ್ವಭಾಗದ ಪೆಟ್ರೋಪವ್ಲೋಸ್ಕ‌ನಿಂದ ಟೇಕ್ ಆಫ್ ಆಗಿದ್ದ ವಿಮಾನ ಕಮ್‌ಚಾಟ್ಕಕಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ AN-26 ವಿಮಾನ ರೇಡಾರ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿತ್ತು. ಇದೀಗ ಈ ವಿಮಾನ ಸಮುದ್ರದಲ್ಲಿ ಪತನವಾಗಿದ್ದು, ವಿಮಾದಲ್ಲಿದ್ದ 28 ಮಂದಿ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿಯನ್ನು ರಷ್ಯಾ ಮಾಧ್ಯಮಗಳು ಬಹಿರಂಗಪಡಿಸಿದೆ.

ರಷ್ಯಾದ 29 ಪ್ರಯಾಣಿಕರಿದ್ದ ವಿಮಾನ ಏಕಾಏಕಿ ಕಣ್ಮರೆ!..

ಕಮ್‌ಚಾಟ್ಕದಲ್ಲಿರುವ ಒಕೋಸ್ಕ್ ಸಮುದ್ರ ತೀರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಒಕೋಸ್ಕ್ ಸಮುದ್ರ ತೀರದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ಈ ನಿಲ್ದಾಣದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಸಮುದ್ರ ತೀರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ವಿಮಾನದಲ್ಲಿ 6 ಸಿಬ್ಬಂದಿ, 22 ಪ್ರಯಾಣಿಕರಿದ್ದರು. ಸಮುದ್ರ ತೀರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಸಮುದ್ರದ ಕೆಲ ಭಾಗಗಳು ತೀರದಲ್ಲಿ ಪತ್ತೆಯಾಗಿವೆ. ಆದರೆ ವಿಮಾನದಲ್ಲಿನ ಪ್ರಯಾಣಿಕರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಕಮ್‌ಚಾಟ್ಕಕಿ ಗವರ್ನರ್ ವಾಡಿಮೀರ್ ಸೊಲ್ಡೊವ್ ಹೇಳಿದ್ದಾರೆ.