Asianet Suvarna News Asianet Suvarna News

ನಾಪತ್ತೆಯಾದ ಬಾಂಗ್ಲಾದೇಶದ ಸಂಸದ ಕೋಲ್ಕತಾದಲ್ಲಿ ಶವವಾಗಿ ಪತ್ತೆ: ಕೊಲೆ ಎಂದ ಬಾಂಗ್ಲಾ ಗೃಹ ಸಚಿವ

ಕಳೆದ 9 ದಿನಗಳಿಂದ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಹಿರಿಯ ಸಂಸದ ಅನ್ವರುಲ್ ಅಜಿಮ್ ಅನರ್  ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆಯಾಗಿರುವ ಅನುಮಾನ ವ್ಯಕ್ತವಾಗುತ್ತಿದೆ. 

Missing Bangladesh MP Anwarul Azim Anar found dead in Kolkata its Murder says Bangladesh Home Minister akb
Author
First Published May 22, 2024, 3:45 PM IST

ಕೋಲ್ಕತಾ: ಕಳೆದ 9 ದಿನಗಳಿಂದ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಹಿರಿಯ ಸಂಸದ ಅನ್ವರುಲ್ ಅಜಿಮ್ ಅನರ್  ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆಯಾಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಫ್ಲಾಟ್‌ವೊಂದರಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಬಾಂಗ್ಲಾದೇಶದ ಅವಾಮಿ ಲೀಗ್‌ನ ಸಂಸದ ಮೇ 12ರಂದು ಭಾರತದ ಕೋಲ್ಕತ್ತಾಕ್ಕೆ ಆಗಮಿಸಿದ್ದರು. ಅಲ್ಲಿ ಸ್ನೇಹಿತ ಗೋಪಾಲ್ ಬಿಸ್ವಾಸ್ ನಿವಾಸದಲ್ಲಿ ವಾಸವಿದ್ದರು. ಇತ್ತ ಅನ್ವರುಲ್ ನಾಪತ್ತೆಯಾದ ಬಗ್ಗೆ ಕೇವಲ 2 ದಿನದ ಹಿಂದಷ್ಟೇ ಬಿಸ್ವಾಸ್ ಕೋಲ್ಕತ್ತಾ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ಅಲ್ಲಿನ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಹೇಳುವಂತೆ, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ, ಸಂಸದ ಅನ್ವರುಲ್ ಅವರನ್ನು ಹತ್ಯೆ ಮಾಡಿದವರು ಎಲ್ಲರೂ ಬಾಂಗ್ಲಾದೇಶಿಯರೇ ಆಗಿದ್ದಾರೆ.  ಇದೊಂದು ಯೋಜಿತ ಕೊಲೆ. ಪ್ರಸ್ತುತ ಸ್ಥಿತಿಯಲ್ಲಿ ಹೆಚ್ಚಿನ ಮಾಹಿತಿ ನೀಡಲಾಗದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಸರ್ಕಾರವು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. 

ಮೊದಲ ಬಾರಿಗೆ ಸಿಎಎ ಅಡಿ 14 ವಿದೇಶಿಗರಿಗೆ ಭಾರತ ಪೌರತ್ವ!

ವರದಿಗಳ ಪ್ರಕಾರ ಬಾಂಗ್ಲಾದೇಶದ ಸಂಸದ ಅನ್ವರುಲ್  ವೈದ್ಯಕೀಯ ಚಿಕಿತ್ಸೆಗಾಗಿ ಮೇ 12ರಂದು ಭಾರತಕ್ಕೆ ಆಗಮಿಸಿದ್ದರು. ಆದರೆ ಆಗಮಿಸಿದ ಎರಡೇ ದಿನಕ್ಕೆ ಅವರು ನಾಪತ್ತೆಯಾಗಿದ್ದರು.  ಇದಾದ ನಂತರ ಕೋಲ್ಕತ್ತಾ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದರು.  ಮೇ 13ರಂದು ಅವರು ಕೊನೆಯದಾಗಿ ಸ್ನೇಹಿತರ ಜೊತೆ ಬಿಧನ್‌ನಗರದ ಮನೆಯಲ್ಲಿ ಕಾಣಿಸಿಕೊಂಡಿದ್ದರು.  ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಧನ್‌ನಗರದಲ್ಲಿ ವಾಸವಾಗಿರುವ  ಸಂಸದರ ಕುಟುಂಬ ಸ್ನೇಹಿತರೊಬ್ಬರು ಪ್ರತಿಕ್ರಿಯಿಸಿದ್ದು, ಸಂಸದ ಅನ್ವರುಲ್ ದೆಹಲಿಗೆ ಹೋಗುವುದಾಗಿ ಹೇಳಿದ್ದರು. ಆದರೆ ಮೇ 13ರಿಂದ ಅವರು ನೋಡುವುದಕ್ಕೆ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ. 

ವಿವಾದಿತ ಸಿಎಎ ಕಾಯ್ದೆ ಕೊನೆಗೂ ಜಾರಿ: 14 ವಿದೇಶಿಗರಿಗೆ ಭಾರತ ಪೌರತ್ವ

ಅನ್ವರುಲ್ ಅವರು ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಶೇಕ್ ಹಸೀನಾ ಅವರ  ಬಾಂಗ್ಲಾದೇಶ್ ಅವಾಮಿ ಲೀಗ್‌ನ ಸದಸ್ಯರಾಗಿದ್ದರು.

Latest Videos
Follow Us:
Download App:
  • android
  • ios