ಅಮೆರಿಕ-ಇರಾನ್ ಶಾಂತಿ ಒಪ್ಪಂದದಲ್ಲಿ ಪಾಕಿಸ್ತಾನ ಮತ್ತು ಕತಾರ್‌ನ ಮಧ್ಯಸ್ಥಿಕೆಯನ್ನು ಇಟಾಲಿಯನ್ ಪ್ರಧಾನಿ ಜಾರ್ಜಿಯೊ ಮೆಲೋನಿ ಶ್ಲಾಘಿಸಿದ್ದಾರೆ. ಈ ರಾಜತಾಂತ್ರಿಕ ಯಶಸ್ಸನ್ನು ಯುರೋಪಿಯನ್ ನಾಯಕರು ಸ್ವಾಗತಿಸಿದ್ದು, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ವಿರೋಧಿಸಿದ್ದಾರೆ.
ಅಮೆರಿಕ-ಇರಾನ್ ಶಾಂತಿ ಒಪ್ಪಂದ(US-Iran Peace Agreement)ದಲ್ಲಿ ಪಾಕಿಸ್ತಾನ(Pakistan) ಕತಾರ್(qatar) ಮಧ್ಯಸ್ಥಿಕೆ ಬಹಳ ಮಹತ್ವದ ಪಾತ್ರವಹಿಸಿವೆ ಎಂದು ಇಟಾಲಿಯನ್ ಪ್ರಧಾನಿ ಜಾರ್ಜಿಯೊ ಮೆಲೋನಿ(Italian Prime Minister Giorgio Meloni) ಅವರಹ ಪಾಕಿಸ್ತಾನಕ್ಕೆ ಧನ್ಯವಾದ ತಿಳಿಸಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅಮೆರಿಕ-ಇರಾನ್ ನಡುವೆ ಮಧ್ಯೆಸ್ಥಗಾರನಾಗಿ ಅಮೆರಿಕ ಪಾಕಿಸ್ತಾನವನ್ನು ಸೂಚಿಸಿತ್ತು.
ಈ ವಿಚಾರವಾಗಿ ಭಾರತ ಮಧ್ಯೆಸ್ಥಿಕ ವಹಿಸದೆ ತಟಸ್ಥ ನಿಲುವು ತಾಳಿತ್ತು. ವಿರೋಧ ಪಕ್ಶಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿದ್ದವು. ಪಾಕಿಸ್ತಾನ ಅಮೆರಿಕಕ್ಕೆ ಹತ್ತಿರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಪಾಕಿಸ್ತಾನದಲ್ಲಿ ಇರಾನ್ ಅಮೆರಿಕ ನಡುವೆ ನಡೆದ ಸತತ ಸಂಧಾನ ಸಭೆಗಳು ವಿಫಲಗೊಂಡಿದ್ದವು. ಈ ನಡುವೆ ಕತಾರ್ ಕೂಡ ಮಧ್ಯಸ್ಥಿಕೆ ವಹಿಸಿತು. ಕೊನೆಗೂ ಅಮೆರಿಕ ಇರಾನ್ ಶಾಂತಿ ಒಪ್ಪಂದಕ್ಕೆ ಬಂದಿವೆ. ಈ ಹಿನ್ನೆಲೆ ಪಾಕಿಸ್ತಾನ, ಕತಾರ್, ಫ್ರಾನ್ಸ್, ಜರ್ಮನಿ ಹಾಗೂ ಬ್ರಿಟನ್ ನಾಯಕರು ಸೇರಿ ಎಲ್ಲ ಮಧ್ಯಸ್ಥಿಕೆದಾರರಿಗೂ ಮೆಲೋನಿ ಧನ್ಯವಾದ ತಿಳಿಸಿದ್ದಾರೆ.
ಜಾರ್ಜಿಯಾ ಮೆಲೋನಿ Instagram ಪೋಸ್ಟ್ ವೈರಲ್
ಅಮೆರಿಕ -ಇರಾನ್ ಒಪ್ಪಂದ ಕುರಿತಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೆಲೋನಿ ಅವರು, ನಾವು, ಫ್ರಾನ್ಸ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್ ಜೊತೆಗೆ, ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಒಪ್ಪಂದವನ್ನು ಸ್ವಾಗತಿಸುತ್ತೇವೆ. ಇದು ಶಾಂತಿ ಸ್ಥಾಪನೆಗೆ ಸಿಕ್ಕ ಅವಕಾಶವಾಗಿದ್ದು ತಪ್ಪಿಸಿಕೊಳ್ಳಬಾರದು. ಇಟಲಿ ಯಾವಾಗಲು ಸಮ ಈ ಒಪ್ಪಂದವನ್ನು ಬೆಂಬಲಿಸುತ್ತದೆ. ಆದರೆ ಇರಾನ್ ಪರಮಾಣ ಶಸ್ತ್ರಾಸ್ತ್ರ ಸಮುದ್ರ ಸಾಗಣೆಯ ಸ್ವಾತಂತ್ರ್ಯ ಖಾತರಿಪಡಿಸಬೇಕು ಎಂದು ಜಾರ್ಜಿಯಾ ಮೆಲೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತರ ಮಿತ್ರರಾಷ್ಟ್ರಗಳ ಸಹಯೋಗದೊಂದಿಗೆ ಮತ್ತು ಅಗತ್ಯ ಸಂಸತ್ತಿನ ಅನುಮೋದನೆ ಪಡೆದ ನಂತರ, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯಲು ಅಂತರರಾಷ್ಟ್ರೀಯ ನೌಕಾ ಉಪಸ್ಥಿತಿಗೆ ಕೊಡುಗೆ ನೀಡಲು ಅವರು ಸಿದ್ಧರಿದ್ದಾರೆ ಎಂದು ಮೆಲೋನಿ ಹೇಳಿದ್ದಾರೆ ಇದೇ ವೇಳೆ ಲೆಬನಾನ್‌ನಲ್ಲಿ ಯುದ್ಧವನ್ನು ನಿಲ್ಲಿಸುವುದು ಅತ್ಯಗತ್ಯ ಎಂದಿದ್ದಾರೆ.ಇಟಲಿ ಲೆಬನಾನ್‌ನ ಸಾರ್ವಭೌಮತ್ವವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಯುರೋಪಿಯನ್ ನಾಯಕರು ಹೇಳಿದ್ದೇನು?
ಯುರೋಪಿಯನ್ ನಾಯಕರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, 'ಯುಎಸ್- ಇರಾನ್ ನಡುವಿನ ತಿಳುವಳಿಕೆ ಒಪ್ಪಂದದ (MoU) ಘೋಷಣೆಯನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಈ ರಾಜತಾಂತ್ರಿಕ ಯಶಸ್ಸಿಗೆ ಅಮೆರಿಕ, ಇರಾನ್ ಸರ್ಕಾರ ಮತ್ತು ಪಾಕಿಸ್ತಾನ, ಕತಾರ್ ಮತ್ತು ಇತರ ಎಲ್ಲಾ ಮಧ್ಯವರ್ತಿಗಳು ಸೇರಿದಂತೆ ಭಾಗಿಯಾಗಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಭಾರತದ ನಿಲುವೇನಿತ್ತು?
ಇರಾನ್-ಯುಎಸ್ ಮಧ್ಯಸ್ಥಗಾರನಾಗಿ ಪಾಕಿಸ್ತಾನ ಪಾತ್ರದ ಬಗ್ಗೆ ತಾನು ವಿರೋಧಿಸುವುದಿಲ್ಲ ಎಂದೆ ಭಾರತ ಸರ್ಕಾರ ಅಧಿಕೃತವಾಗಿ ಹೇಳಿತ್ತು. ಬದಲಾಗಿ ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಹೆಚ್ಚು ಗಮನಹರಿಸಿದೆ.
ಆದರೆ ಕೆಲವು ರಾಜಕೀಯ ವಿಮರ್ಶಕರು, ವಿರೋಧ ಪಕ್ಷಗಳ ನಾಯಕರು ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಮೆರಿಕ ಇರಾನ್ ನಡುವೆ ಪಾಕಿಸ್ತಾನ ಮಧ್ಯೆಸ್ಥಿಕೆ ವಹಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆ ಹೆಚ್ಚಿಸಿದೆ. ಇತ್ತ ಅಮೆರಿಕ ಭಾರತದ ಸಂಬಂಧ ಸರಿಯಾಗಿಲ್ಲದಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದರು.
ಭಾರತ ಮಧ್ಯೆಸ್ಥಿಕೆ ವಹಿಸದಿರಲು ಕಾರಣವೇನು?
ಈ ಅನಿರೀಕ್ಷಿತ ಸಂಘರ್ಷದ ಮಾತುಕತೆಯ ಖ್ಯಾತಿ, ಆರ್ಥಿಕ ಅಪಾಯಗಳನ್ನು ತಪ್ಪಿಸಲು ಭಾರತ ವಿವೇಕಯುತ ನಡೆ ಪ್ರದರ್ಶಿಸಿತು. ಭಾರತ ಒಂದು ವೇಳೆ ಮಧ್ಯೆಸ್ಥಿಕೆ ವಹಿಸಿದ್ದರೆ ನಂತರ ಮತ್ತೆ ಪರಸ್ಪರ ದಾಳಿ ನಡೆಯದೆ ಇರುತ್ತಿರಲಿಲ್ಲ. ಹೀಗಾಗಿ ಶಾಂತಿಮಾತುಕತೆ ಮಧಸ್ಥಿಕೆ ವಹಿಸದೆ ತಟಸ್ಥವಾಗಿ ಉಳಿಯಿತು.


