ನೈಲ್ ನದಿಯಲ್ಲಿ ಪತ್ತೆಯಾದ ಹೆನ್ರಿ ಎಂಬ 123 ವರ್ಷದ ಮೊಸಳೆ ವಿಶ್ವದ ಅತಿದೊಡ್ಡ ಮೊಸಳೆ ಎಂದು ಗುರುತಿಸಲ್ಪಟ್ಟಿದೆ. 16 ಅಡಿ ಎತ್ತರ ಮತ್ತು 700 ಕೆ.ಜಿ ತೂಕವಿರುವ ಇದು ಬೋಟ್ಸ್ವಾನಾದ ಒಕಾವಾಂಗೊ ಡೆಲ್ಟಾದಲ್ಲಿ ಜನಿಸಿತು. ಪ್ರಸ್ತುತ ದಕ್ಷಿಣ ಆಫ್ರಿಕಾದ ಕ್ರೋಕ್‌ವರ್ಲ್ಡ್ ಸಂರಕ್ಷಣಾ ಕೇಂದ್ರದಲ್ಲಿ ವಾಸಿಸುತ್ತಿದೆ. ಹೆನ್ರಿಗೆ ಆರು ಹೆಣ್ಣು ಮೊಸಳೆಗಳಿದ್ದು, ಸುಮಾರು 10,000 ಮಕ್ಕಳು ಇವೆ ಎಂದು ಹೇಳಲಾಗಿದೆ.
ಈತನ ಹೆಸರು ಹೆನ್ರಿ. ತೂಕ 700 ಕೆ.ಜಿ. ಆರು ಮಂದಿ ಪತ್ನಿಯರು ಹಾಗೂ 10 ಸಾವಿರ ಮಕ್ಕಳು. ಯಾರೀತ ಎಂದು ಅಚ್ಚರಿಯಾಯ್ತೆ? ಈತ ಮನುಷ್ಯ ಅಲ್ಲ, ಬದಲಿಗೆ ಮೊಸಳೆ! ನೈಲ್ ನದಿಯಲ್ಲಿ ಪತ್ತೆಯಾಗಿರುವ ಈ ಮೊಸಳೆಯನ್ನು ವಿಶ್ವದ ಅತಿದೊಡ್ಡ ಮೊಸಳೆ ಎಂಬ ಸ್ಥಾನಮಾನ ನೀಡಲಾಗಿದೆ. 16 ಅಡಿ ಎತ್ತರದ ಈ ಮೊಸಳೆಯ ವಯಸ್ಸು 123 ವರ್ಷಗಳು. ಇದರ ತೂಕ 700 ಕೆ.ಜಿ. ಹೆನ್ರಿ ವಾಸಿಸುವ ಮೃಗಾಲಯದ ಪ್ರಕಾರ, ಈ ಮೊಸಳೆ ತನ್ನ 6 ಸಂಯೋಗ ಸಂಗಾತಿಗಳಿಂದ 10 ಸಾವಿರ ಮಕ್ಕಳನ್ನು ಹೊಂದಿದೆ. 1900ರ ಡಿಸೆಂಬರ್ 16ರಂದು ಬೋಟ್ಸ್ವಾನಾದ ಒಕಾವಾಂಗೊ ಡೆಲ್ಟಾದಲ್ಲಿ ಇದು ಜನಿಸಿದೆ.
ದಕ್ಷಿಣ ಆಫ್ರಿಕಾದ ವಿಶ್ವ ಪರಂಪರಿಕ ತಾಣವೆನಿಸಿರುವ ಬೊಟ್ಸಾವನಾದ ಒಕವಂಗೊ ಡೆಲ್ಟಾದಲ್ಲಿ ಈ ಮೊಸಳೆ ವಾಸಿಸುತ್ತದೆ. ಮಿನಿ ಬಸ್ನ ತೂಕವನ್ನು ಇದು ಹೊಂದಿರುವುದರಿಂದ ಇದನ್ನು ವಿಶ್ವದ ಅತೀ ತೂಕದ ದೈತ್ಯ ಮೊಸಳೆ ಎಂದು ಕೂಡ ಗುರುತಿಸಲಾಗಿದೆ. ಇದು ವಿಶಿಷ್ಟವಾದ ಕೋರೆಹಲ್ಲುಗಳು ಬೃಹತ್ ಆದ ಹಲ್ಲಿನ ಸೆಟ್‌ನ್ನು ಹೊಂದಿದೆ. ಒಂದು ಸಮುದಾಯದ ಮಕ್ಕಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ ಬಳಿಕ ಅದರ ಶೋಧ ಕಾರ್ಯ ನಡೆದಿತ್ತು. ಆಗ ಪ್ರಸಿದ್ಧ ಬೇಟೆಗಾರ ಸರ್ ಹೆನ್ರಿ ನ್ಯೂಮನ್ 1903 ರಲ್ಲಿ ಈ ಮೊಸಳೆಯನ್ನು ಕಂಡುಹಿಡಿದರು. ಈ ಹಿನ್ನೆಲೆಯಲ್ಲಿ ಅದಕ್ಕೆ ಅವನದ್ದೇ ಹೆಸರನ್ನು ಇಡಲಾಗಿದೆ.
ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...
ಹೆನ್ರಿ ಕಳೆದ 30 ವರ್ಷಗಳಿಂದ ದಕ್ಷಿಣ ಆಫ್ರಿಕಾದ ಸ್ಕಾಟ್‌ಬರ್ಗ್ ನಗರದ ಕ್ರೋಕ್‌ವರ್ಲ್ಡ್ ಸಂರಕ್ಷಣಾ ಕೇಂದ್ರದಲ್ಲಿ ವಾಸಿಸುತ್ತಿದೆ. ನೈಲ್ ಮೊಸಳೆಗಳು ಆಫ್ರಿಕಾದ 26 ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅವು ಸಾಮಾನ್ಯವಾಗಿ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತವೆ. ಇವು ನದಿಗಳು, ಕೊಳಗಳು ಮತ್ತು ಜೌಗು ಪ್ರದೇಶಗಳಲ್ಲಿ ಕಂಡುಬರುತ್ತವೆ. ಅವು ಹೆಚ್ಚಾಗಿ ಜೀಬ್ರಾಗಳು ಮತ್ತು ಮುಳ್ಳುಹಂದಿಗಳಂತಹ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆಫ್ರಿಕಾದಲ್ಲಿ ಪ್ರತಿ ವರ್ಷ ನೂರಾರು ಜನರು ಮೊಸಳೆಗಳಿಗೆ ಬಲಿಯಾಗುತ್ತಾರೆ. ಬೋಟ್ಸ್ವಾನಾದ ಹೆನ್ರಿ ಅತ್ಯಂತ ಹಳೆಯ ಮೊಸಳೆಯಾಗಿದ್ದರೂ, ಅತಿ ಉದ್ದದ ಮೊಸಳೆಯ ಬಿರುದು ಆಸ್ಟ್ರೇಲಿಯಾದ ಕ್ಯಾಸಿಯಸ್ ಮೊಸಳೆಯದ್ದು. 16 ಅಡಿ ಉದ್ದದ ಈ ಮೊಸಳೆಯನ್ನು 1984 ರಲ್ಲಿ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಹಿಡಿಯಲಾಯಿತು. 2011 ರಲ್ಲಿ, ಅವರ ಹೆಸರು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಅತಿ ಉದ್ದದ ಮೊಸಳೆಯಾಗಿ ದಾಖಲಾಗಿತ್ತು.
ಜುಲೈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಮೊಸಳೆಯೊಂದು 12 ವರ್ಷದ ಬಾಲಕಿಯನ್ನು ತಿಂದಿತ್ತು. ಆಸ್ಟ್ರೇಲಿಯಾದ ಮಾಧ್ಯಮ ಎಬಿಸಿ ಪ್ರಕಾರ, ಹುಡುಗಿ ಈಜು ಕಲಿಯಲು ಹೋಗಿದ್ದಳು. ತಡರಾತ್ರಿಯವರೆಗೂ ಬಾಲಕಿಯ ಯಾವುದೇ ಸುಳಿವು ಸಿಗದಿದ್ದಾಗ, ಮನೆಯವರು ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದರು. ಬಾಲಕಿಯನ್ನು ಹುಡುಕಲು ಪೊಲೀಸರು ಸ್ಥಳೀಯ ಜನರ ಸಹಾಯವನ್ನು ಕೋರಿದರು. ಇದಕ್ಕಾಗಿ ಪೊಲೀಸರು ಉದ್ಯಾನವನ ನಿರ್ವಾಹಕರು ಮತ್ತು ಅರಣ್ಯ ಇಲಾಖೆಯ ವಿಶೇಷ ತಂಡವನ್ನು ರಚಿಸಿದರು. ಇದಾದ ನಂತರ, ಮರುದಿನ ಸಂಜೆ, ಹುಡುಗಿಯ ರಕ್ತಸಿಕ್ತ ಬಟ್ಟೆಗಳು ಈಜುಕೊಳದ ಬಳಿ ಪತ್ತೆಯಾಗಿವೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ, ಮೊಸಳೆ ಪ್ರದೇಶದಲ್ಲಿ ಸ್ವಲ್ಪ ದೂರದಲ್ಲಿ ಹುಡುಗಿಯ ಅವಶೇಷಗಳು ಪತ್ತೆಯಾಗಿತ್ತು.
ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!
