Asianet Suvarna News Asianet Suvarna News

Round Up 2021: ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ 2021 ರ ಟಾಪ್ 5 ವೈರಲ್ ವಿಡಿಯೋಗಳು

ಕೋವಿಡ್‌ ಸೋಂಕು ಜಗತ್ತನ್ನು ಬಾಧಿಸಿದ 2021 ರ ವರ್ಷದಲ್ಲಿ  ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿದಂತೆ ಹಲವು ಡಿಜಿಟಲ್‌ ಮಾಧ್ಯಮಗಳಲ್ಲಿ ತಿಳಿದೋ ತಿಳಿಯದೆಯೋ ಫುಲ್ ಫೇಮಸ್‌ ಆದ ಕೆಲ ವ್ಯಕ್ತಿಗಳ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದೇವೆ. 

Meet 2021s top 5 viral sensations who won over the internet
Author
Bangalore, First Published Dec 27, 2021, 1:32 PM IST
  • Facebook
  • Twitter
  • Whatsapp

ನವದೆಹಲಿ: ಕೋವಿಡ್‌ನಿಂದಾಗಿ ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಸ್ತಬ್ಧಗೊಂಡಿದ್ದಂತಹ ಜಗತ್ತು ಸಹಜ ಸ್ಥಿತಿಯತ್ತ ಸಾಗಲು ಪ್ರಯತ್ನಿಸುತ್ತಿದ್ದಂತೆ, ಭಾಷೆ ಅಥವಾ ರಾಷ್ಟ್ರೀಯತೆಯ ಅಡೆತಡೆಗಳನ್ನು ಲೆಕ್ಕಿಸದೆ ಜನರು ಮನೋರಂಜನೆ ನೀಡುವ ವ್ಯಕ್ತಿಗಳ ಕಡೆಗೆ ಆಕರ್ಷಿತರಾದರು. ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕೈಯಲ್ಲಿ ಸ್ಮಾರ್ಟ್‌ಫೋನ್‌ ಹಿಡಿದು ಸದಾ ಇಂಟರ್‌ನೆಟ್‌ನಲ್ಲಿ ಜಾಲಾಡುವ ಜನಕ್ಕೆ ಇಡೀ ಜಗತ್ತಿನ ಇನ್ಯಾವುದೋ ಮೂಲೆಯಲ್ಲಿ ಕುಳಿತ ವ್ಯಕ್ತಿ ನೀಡಿದ ಮನೋರಂಜನೆ ಇಷ್ಟವಾಗ ತೊಡಗಿತ್ತು. ನೆಟ್ಟಿಗರು ದೇಶ, ಭಾಷೆ, ಧರ್ಮಗಳ ಎಲ್ಲೆ ಮೀರಿ ತಮಾಷೆಯ ವೀಡಿಯೊಗಳನ್ನು ಎಂಜಾಯ್ ಮಾಡಿದರು. ಹೀಗೆ ಜನರನ್ನು ಕುಳಿತಲ್ಲಿಂದಲೇ ಮನೋರಂಜಿಸಿದ ಕೆಲ ವ್ಯಕ್ತಿಗಳ ಪರಿಚಯ ಇಲ್ಲಿದೆ ನೋಡಿ...

ಸಹದೇವ್ ಡಿರ್ಡೊ
ಸಹದೇವ್‌ ಡಿರ್ಡೊ(Sahdev Dirdo)ಎಂಬ ಚಿಕ್ಕ ಹುಡುಗನೊಬ್ಬ ಹಾಡಿದ ಸ್ಥಳೀಯ ಹಾಡೊಂದು ಎರಡು ವರ್ಷಗಳ ನಂತರ ವೈರಲ್ ಆಗಿ ಬಾಲಕ ಇಂಟರ್‌ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದ.  2019 ರ ಈ ವೀಡಿಯೊವನ್ನು ಆತನ ಶಿಕ್ಷಕರು ಚಿತ್ರೀಕರಿಸಿದ್ದರು. ಇದನ್ನು ಮೂಲತಃ ಗುಜರಾತಿ ಜಾನಪದ ಗಾಯಕ ಕಮಲೇಶ್ ಬರೋಟ್ (Kamlesh Barot) ಹಾಡಿದ್ದಾರೆ. ಆದರೆ ಬಾಲಕ ಡಿರ್ಡೊ ಈ ವಿಡಿಯೋದಲ್ಲಿ 'ಬಚ್ಪಾನ್' ಅನ್ನು 'ಬಾಸ್ಮನ್' ಎಂದು ಉಚ್ಚರಿಸುವ ಮುಗ್ಧ ಅಭಿನಯವು ಎಲ್ಲರ ಪ್ರೀತಿಗೆ ಪಾತ್ರವಾಯಿತು. ಈ ವಿಡಿಯೋ ಶೀಘ್ರದಲ್ಲೇ ಅದರ ಅನೇಕ ಸ್ಪಿನ್-ಆಫ್‌ಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆದವು. ರಾಪರ್ ಬಾದ್‌ಶಾ(Rapper Badshah) ಮತ್ತು ಗಾಯಕಿ ಆಸ್ತಾ ಗಿಲ್(Aastha Gill) ಅವರು ಹಾಡಿನ ರಿಮಿಕ್ಸ್ ಆವೃತ್ತಿಯಲ್ಲಿ ಡಿರ್ಡೊ ಅವರೊಂದಿಗೆ ನಟಿಸಿದರು ಮತ್ತು ನಿಮಿಷಗಳಲ್ಲಿ ಈ ವಿಡಿಯೋ ಐದು ಲಕ್ಷ ವೀಕ್ಷಣೆಗಳನ್ನು ಗಳಿಸಿತು. ನಂತರ ಸಹದೇವ್‌ ಡಿರ್ಡೊ ಅವರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು.

ದನನೀರ್ ಮೊಬೀನ್
2021ರಲ್ಲಿ ಭಾರತೀಯರು ಮತ್ತು ಪಾಕಿಸ್ತಾನಿಗಳನ್ನು ಒಂದುಗೂಡಿಸಿದ ವಿಷಯವೊಂದಿದ್ದರೆ ಅದು ದನನೀರ್ ಮೊಬೀನ್(Dananeer Mobeen)ಅವರ "ಪಾವ್ರಿ ಹೋ ರಹೀ ಹೈ" ವಿಡಿಯೋ. ಇದು  ಉತ್ತರ ಪಾಕಿಸ್ತಾನದ ನಾಥೈಗಲಿ ಪರ್ವತಗಳಲ್ಲಿ(Nathaigali mountains) 19 ವರ್ಷದ ಯುವತಿ ಚಿತ್ರೀಕರಿಸಿದ ಸಂಕ್ಷಿಪ್ತ ವಿಡಿಯೋ ಆಗಿದೆ. ಇದು ಯುವಕರ ಗುಂಪು ರಸ್ತೆಬದಿಯಲ್ಲಿ ಆನಂದಿಸುತ್ತಿರುವುದನ್ನು ತೋರಿಸುತ್ತದೆ. ವೀಡಿಯೊದಲ್ಲಿ ಮೊಬೀನ್ ತನ್ನ ಹಿಂದೆ ಸನ್ನೆ ಮಾಡಿ, 'ಯೇ ಹಮ್ ಹೈ, ಯೇ ಹಮಾರಿ ಕಾರ್ ಹೈ, ಔರ್ ಯೇ ಹಮಾರಿ ಪಾವ್ರಿ ಹೋ ರಹೀ ಹೈ (ಇದು ನಮ್ಮ ಕಾರು, ಇದು ನಾವು, ಮತ್ತು ಇದು ನಮ್ಮ ಪಾರ್ಟಿ ನಡೆಯುತ್ತಿದೆ' ಎಂದು ಹೇಳುತ್ತಾರೆ. ಅಂದರೆ ಪಾಶ್ಚಿಮಾತ್ಯ ಉಚ್ಚಾರಣೆಗಳನ್ನು ಅಳವಡಿಸಿಕೊಳ್ಳುವ ದಕ್ಷಿಣ ಏಷ್ಯಾದವರಿಗೆ ತಮಾಷೆ ಮಾಡುವ ರೀತಿ 'ಪಾರ್ಟಿ' ಪದವನ್ನು 'ಪಾವ್ರಿ' ಎಂದು ಅವಳು ಉದ್ದೇಶಪೂರ್ವಕವಾಗಿ ತಪ್ಪಾಗಿ ಉಚ್ಚರಿಸುವುದರಲ್ಲಿ ಈ ವೀಡಿಯೊದ ಮೋಜು ಅಡಗಿದೆ. ಈ ವೀಡಿಯೊ ತಕ್ಷಣವೇ ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಯೂ ಫುಲ್‌ ಫೇಮಸ್‌ ಆಗಿ ಟ್ರೆಂಡ್‌ ಆಗತೊಡಗಿತ್ತು.

Round Up 2021 : ಇಲ್ಲಿವೆ ಇಂಟರ್‌ನೆಟ್‌ನಲ್ಲಿ ಸೋಜಿಗ ಮೂಡಿಸಿದ 2021ರ ವಿದ್ಯಮಾನಗಳು

ಯೋಹಾನಿ
ಶ್ರೀಲಂಕಾದ ಗಾಯಕಿ ಮತ್ತು ಗೀತೆ ರಚನೆಕಾರ್ತಿ ಯೋಹಾನಿ ದಿಲೋಕಾ ಡಿ ಸಿಲ್ವಾ (Yohani Diloka de Silva) ಅವರು ಸತೀಶನ್ ರಥನಾಯಕ (Satheeshan Rathnayaka) ಅವರೊಂದಿಗೆ ಸೇರಿ ಹಾಡಿದ ಸಿಂಹಳೀಯ ಸೂಪರ್‌ಹಿಟ್ ಹಾಡು 'ಮಾನಿಕೆ ಮಾಗೆ ಹಿತೆ'  ಉತ್ತಮ ಸಂಗೀತಕ್ಕೆ ಯಾವುದೇ ದೇಶ ಭಾಷೆಯ ಗಡಿ ಇಲ್ಲ ಎಂಬುದನ್ನುಸಾಬೀತುಪಡಿಸಿತ್ತು. ಈ ಹಾಡಿಗೆ ಮಾಧುರಿ ದೀಕ್ಷಿತ್(Madhuri Dixit), ಪರಿಣಿತಿ ಚೋಪ್ರಾ (Parineeti Chopra) ಮತ್ತು ಟೈಗರ್ ಶ್ರಾಫ್ ಅವರೂ ಕೂಡ ತಾಳಕ್ಕೆ ತಕ್ಕಂತೆ ಕುಣಿದಿದ್ದು ಗಮನ ಸೆಳೆಯಿತು. ಪೃಥ್ವಿರಾಜ್ ಸುಕುಮಾರನ್ ಅದರ ಮಾಧುರ್ಯವನ್ನು  ಕಾಜಾನ್‌ನಲ್ಲಿ ಮರುಸೃಷ್ಟಿಸಿದರು.

ಎಲೋನ್ ಮಸ್ಕ್
ಎಲೋನ್ ಮಸ್ಕ್(Elon Musk) ವ್ಯಾಪಾರದ ದೊರೆ, ​​ಬಾಹ್ಯಾಕಾಶದ ಬಗ್ಗೆಉತ್ಸಾಹಿ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ 2021 ರ ಟೈಮ್ಸ್ ವರ್ಷದ ವ್ಯಕ್ತಿ.  ಆಟೋಮೊಬೈಲ್ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದಲ್ಲೂ ಅವರು ಪ್ರಾಬಲ್ಯ ಸಾಧಿಸಿದ್ದಾರೆ. ಆದಾಗ್ಯೂ, ಈ ಬಿಲಿಯನೇರ್ ಇಡೀ ವರ್ಷ ವಿವಾದದಿಂದ ಸುದ್ದಿಯಾಗಿದ್ದರು. ತೆರಿಗೆ ಸುಧಾರಣೆ ಬಗ್ಗೆ ಎಲಿಜಬೆತ್ ವಾರೆನ್ (Elizabeth Warren) ಮತ್ತು ಬರ್ನಿ ಸ್ಯಾಂಡರ್ಸ್ (Bernie Sanders) ಅವರೊಂದಿಗೆ ಇವರ ಟ್ವಿಟ್‌ಗಳು ನೆಟ್ಟಿಗರನ್ನು ಕೆರಳಿಸಿತ್ತು.

Round Up 2021: ಸೈಫ್‌- ರಾಜ್‌ ಕುಂದ್ರಾ ವಿವಾದಕ್ಕೆ ಸಿಲುಕಿದ ಸೆಲೆಬ್ರೆಟಿಗಳು!

ಖಾಬಿ ಲೇಮ್
2021 ರಲ್ಲಿ, ಖಾಬಿ ಲೇಮ್ (Khaby Lame)ಜಗತ್ತಿನ ಎರಡನೇ ಅತಿ ಹೆಚ್ಚು ಜನ ಫಾಲೋ ಮಾಡಿದ ಟಿಕ್-ಟಾಕರ್ ಆದರು.  2020 ರಲ್ಲಿ ಕೋವಿಡ್‌ನಿಂದಾಗಿ ತನ್ನ ಕೆಲಸದಿಂದ ವಜಾಗೊಂಡ ಅವರು ಮನೆಗೆ ಮರಳಿದ್ದರು. ನಂತರ ಸರಳವಾದ ಆದರೆ ಉಲ್ಲಾಸದ ಟಿಕ್-ಟಾಕ್ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು.  ಇವು ಜನರನ್ನು  ಅತೀ ಹೆಚ್ಚು ಆಕರ್ಷಿಸಿ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು.

ಬರ್ನಿ ಮತ್ತವರ ಕೈಗವಸು

ಈ ವರ್ಷದ ಜನವರಿಯಲ್ಲಿ ಜೋ ಬೈಡೆನ್ (Joe Biden) ಮತ್ತು ಕಮಲಾ ಹ್ಯಾರಿಸ್ ( Kamala Harris) ಅವರು ಅಮೆರಿಕ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅಲ್ಲೇ ಇದ್ದ ವಸ್ತುವೊಂದು ನೆಟಿಗರ ಗಮನ ಸೆಳೆಯಿತು . ಅದು ಅಮೆರಿಕಾದ ರಾಜಕಾರಣಿ ಬರ್ನಿ ಸ್ಯಾಂಡರ್ಸ್ (Bernie Sanders)ಬೃಹತ್ ಆದ ಕೈಗವಸುಗಳನ್ನು ಧರಿಸಿ ತೆಗೆದ ಫೋಟೋ ಆಗಿತ್ತು. ಇದನ್ನು ಜೆನ್ ಎಲ್ಲಿಸ್ (Jen Ellis) ಎಂಬ ಶಾಲಾ ಶಿಕ್ಷಕ ತಯಾರಿಸಿದ್ದರು. 

ಬಿಟಿಎಸ್
2021 ರಲ್ಲಿ, ದಕ್ಷಿಣ ಕೊರಿಯಾದ ಬಾಯ್ ಬ್ಯಾಂಡ್ 23 ವಿಭಿನ್ನ ದಾಖಲೆಗಳನ್ನು ಮುರಿದು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಹಾಲ್ ಆಫ್ ಫೇಮ್‌ಗೆ ಪ್ರವೇಶಿಸಿತು. ಈ ತಂಡ ವಿಶ್ವಸಂಸ್ಥೆಯಲ್ಲಿ ಶೋ ನೀಡಿತ್ತು. ಇದನ್ನು ಗಂಟೆಗಳಲ್ಲಿಯೇ 3.89 ಬಿಲಿಯನ್ ವೀಕ್ಷಕರು ನೋಡಿದ್ದರು. ಇದರಲ್ಲಿದ್ದ ಕಲಾವಿದರ ವೈಯಕ್ತಿಕ ಇನ್ಟ್ಟಾಗ್ರಾಮ್‌ ಖಾತೆಗಳಲ್ಲಿ ಫಾಲೋವರ್‌ಗಳ ಸಂಖ್ಯೆ  ಒಮ್ಮೆಲೆ ಲಕ್ಷ ದಾಟಿತ್ತು. ಇವರ 'ಬಟರ್‌' ಹಾಡು ಇತಿಹಾಸದಲ್ಲೇ ಅತಿದೊಡ್ಡ ಯೂಟ್ಯೂಬ್ ಪ್ರೀಮಿಯರ್ ಅನ್ನು ಕಂಡಿತು. ಪ್ರಸ್ತುತ, BTS ವಿಶ್ವದ ಅತಿದೊಡ್ಡ ಸಂಗೀತ ನೀಡುವ ಗುಂಪುಗಳಲ್ಲಿ ಒಂದಾಗಿದೆ.

Follow Us:
Download App:
  • android
  • ios