ಫ್ರಾನ್ಸ್‌ನ ಸೂಪರ್‌ಮಾರ್ಕೆಟ್‌ಗಳ ರೆಫ್ರಿಜರೇಷನ್‌ ವ್ಯವಸ್ಥೆ ಮೇಲೆ ದುಷ್ಕರ್ಮಿಗಳು ಭಾರೀ ಸೈಬರ್ ದಾಳಿ ನಡೆಸಿದ್ದಾರೆ. ಇದರಿಂದ ಫ್ರಿಜ್‌ಗಳ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ದಾಟಿ ಆಹಾರ ಪದಾರ್ಥಗಳು ಹಾಳಾಗಿವೆ. ಪರಿಣಾಮವಾಗಿ 700ಕ್ಕೂ ಹೆಚ್ಚು ಸೂಪರ್‌ಮಾರ್ಕೆಟ್‌ಗಳು ಬಾಗಿಲು ಮುಚ್ಚಿವೆ.

ಪ್ಯಾರಿಸ್‌: ದುಷ್ಕರ್ಮಿಗಳ ತಂಡವೊಂದು ಮಂಗಳವಾರ ಫ್ರಾನ್ಸ್‌ನಲ್ಲಿ ಸೂಪರ್‌ಮಾರ್ಕೆಟ್‌ ಕಂಪನಿಗಳ ರೆಫ್ರಿಜರೇಷನ್‌ ವ್ಯವಸ್ಥೆ ಮೇಲೆ ಭಾರೀ ಪ್ರಮಾಣದ ಸೈಬರ್ ದಾಳಿ ನಡೆಸಿದೆ. ಪರಿಣಾಮ ಈ ಮಾರ್ಕೆಟ್‌ಗಳಲ್ಲಿನ ರೆಫ್ರಿಜರೇಟರ್‌ಗಳಲ್ಲಿನ ಉಷ್ಣಾಂಶ 50 ಡಿ.ಸೆ.ದಾಟಿದೆ. ಹೀಗಾಗಿ ಹಲವು ಕಡೆ ಬೆಂಕಿ ಕಾಣಿಸಿಕೊಂಡಿದ್ದರೆ, ಉಳಿದ ಬಹುತೇಕ ಕಡೆ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಇಟ್ಟಿದ್ದ ಆಹಾರ ಪದಾರ್ಥ ಹಾಳಾಗಿವೆ.

ಆಹಾರ ಪೂರೈಕೆ ಸೇವೆ ಸ್ಥಗಿತ

ಪರಿಣಾಮ 700ಕ್ಕೂ ಹೆಚ್ಚು ಸೂಪರ್‌ಮಾರ್ಕೆಟ್‌ಗಳು ಮಂಗಳವಾರ ಏಕಾಏಕಿ ಬಾಗಿಲು ಹಾಕಿವೆ. ಅಲ್ಲದೆ ಅಮೆರಿಕ ಮತ್ತು ಯುರೋಪ್‌ಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಹಲವು ವೆಬ್‌ಸೈಟ್‌ಗಳು ಕೂಡಾ ಅನಿವಾರ್ಯವಾಗಿ ಸೇವೆ ಸ್ಥಗಿತಗೊಳಿಸಬೇಕಾಗಿ ಬಂದಿದೆ.

ಹವಾನಿಯಂತ್ರಿತ ವ್ಯವಸ್ಥೆ ಮೇಲೆ ಸೈಬರ್‌ ದಾಳಿ

ಹ್ಯಾಕರ್‌ಗಳ ಗುಂಪು ದೊಡ್ಡ ದೊಡ್ಡ ಸೂಪರ್‌ಮಾರ್ಕೆಟ್‌ಗಳಲ್ಲಿ ಇರುವ ಹವಾನಿಯಂತ್ರಿತ ವ್ಯವಸ್ಥೆ ಮೇಲೆ ಸೈಬರ್‌ ದಾಳಿ ನಡೆಸುವ ಮೂಲಕ ಅವುಗಳ ಉಷ್ಣಾಂಶ ಹೆಚ್ಛಾಗುವಂತೆ ಮಾಡಿದೆ. ಹೀಗಾಗಿ ಅವುಗಳ ಉಷ್ಣಾಂಶ 50 ಡಿ.ಸೆ. ದಾಟಿ ಹಲವು ಕಡೆ ಬೆಂಕಿ ಕಾಣಿಸಿಕೊಂಡಿದೆ. ಉಳಿದಂತೆ 700ಕ್ಕೂ ಹೆಚ್ಚು ಮಾರ್ಕೆಟ್‌ಗಳಲ್ಲಿ ಹವಾನಿಯಂತ್ರಿತ ವ್ವವಸ್ಥೆಯಲ್ಲಿ ಇಟ್ಟಿದ್ದ ಆಹಾರ ವಸ್ತುಗಳ ಅಧಿಕ ಉಷ್ಣಾಂಶದಿಂದ ಬಳಸಲಾಗದ ಸ್ಥಿತಿ ತಲುಪಿದೆ. ಹೀಗಾಗಿ ಸೂಪರ್‌ ಮಾರ್ಕೆಟ್‌ಗಳು ಬಂದ್‌ ಆಗಿದೆ.

Scroll to load tweet…