ಎಲಾನ್ ಮಸ್ಕ್ ಮತ್ತು ರಾಹುಲ್ ಗಾಂಧಿ ನಡುವಿನ ಟ್ವಿಟರ್ ಸಂವಾದ ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ವಿಚಾರವಾಗಿ ಅಮೆರಿಕನ್ ಗಾಯಕಿ ಮೇರಿ ಮಿಲ್ಬೇನ್ ಮಸ್ಕ್‌ಗೆ ಎಚ್ಚರಿಕೆ. ರಾಹುಲ್ ಗಾಂಧಿ ಸಹವಾಸ ಮಾಡಿದರೆ ಭಾರತದಲ್ಲಿ ಸ್ಟಾರ್‌ಲಿಂಕ್ ಲೈಸೆನ್ಸ್ ಸಿಗುವುದು ವಿಳಂಬವಾಗಲಿದೆ ಎಂದು ಸಲಹೆ.
ಸ್ಪೆಸ್ ಎಕ್ಸ್, ಟೆಸ್ಲಾ ಸಿಇಒ ಎಲೋನ್ ಮಾಸ್ಕ್ ಸದ್ಯ ಭಾರತ ವಿರೋಧಿ ಹೇಳಿಕೆಯಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಲ್ಲದೆ ರಾಹುಲ್ ಗಾಂಧಿಯ ಟ್ವಿಟ್ ಹಂಚಿಕೊಂಡಿದ್ದು ಇದು ದೇಶದಲ್ಲಾದಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ.
ಎಲಾನ್ ಮಸ್ಕ್ ತಮ್ಮ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಯನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಳೆದ ಐದು ವರ್ಷಗಳಿಂದ ಅವರಿಗೆ ಭಾರತದಲ್ಲಿ ಲೈಸೆನ್ಸ್ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಭಾರತದ ವಿರುದ್ಧ ಟ್ವಿಟ್ ಮಾಡಿದ್ದಲ್ಲದೆ, ಭಾರತವನ್ನು ಅಂಬಾನಿ ಆಳುತ್ತಿದ್ದಾನೆ ಎಂಬರ್ಥದಲ್ಲಿ ಟ್ವಿಟ್ ಮಾಡಿ ಸಂಚಲನ ಸೃಷ್ಟಿಸಿದ್ದರು. ಇದೀಗ ರಾಹುಲ್ ಗಾಂಧಿ ಕೂಡ ಎಲಾನ್ ಮಾಸ್ಕ್‌ಗೆ 'ವೆಲ್ ಕಂ ಇಂಡಿಯಾ..' ಟ್ವಿಟ್ ಮಾಡಿದ್ದು, ಅದನ್ನ ಮಾಸ್ಕ್ ರಿಟ್ವಿಟ್ ಮಾಡಿದ್ದಾರೆ. ಈ ವಿಚಾರವಾಗಿ ಅಮೆರಿಕನ್ ಖ್ಯಾತ ಸಿಂಗರ್ ಮೇರಿ ಮಿಲ್ಬೇನ್ ವಿವಾದಕ್ಕೆ ಸಿಲುಕಿರುವ ಎಲಾನ್ ಮಸ್ಕ್‌ಗೆ ಸಲಹೆ ನೀಡಿದ್ದಾರೆ.
Mary Millben ಹಂಚಿಕೊಂಡ ಟ್ವಿಟ್(X) ನಲ್ಲಿ ಏನಿದದೆ?
ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಮೇರಿ ಮಿಲ್ಬೇನ್ ಅವರು, 'ನನಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ. ಆದ್ದರಿಂದ ಈ ವಿಚಾರವನ್ನು ನಿಮಗೆ ಹೇಳುತ್ತಿದ್ದೇನೆ. ರಾಹುಲ್ ಗಾಂಧಿಯಂಥ ನಾಯಕ ನಿಮಗೆ ಹತ್ತಿರವಾಗುವುದರಿಂದ ಭಾರತದಲ್ಲಿ ಸ್ಟಾರ್‌ಲಿಂಕ್ ಲೈಸೆನ್ಸ್ ಸಿಗುವುದು ಇನ್ನಷ್ಟು ವಿಳಂಬವಾಗಬಹುದು ಅಥವಾ ಸಿಗದೆ ಇರಬಹುದು. ಪ್ರಪಂಚದಾದ್ಯಂತ ಕಂಪನಿಗಳು ಭಾರತದಲ್ಲಿ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿವೆ. ಯಾವುದೇ ವಿದೇಶಿ ಪಾರ್ಟನರ್ ದೇಶ ಮತ್ತು ಅದರ ನಾಯಕತ್ವದ ಮೇಲಿನ ಗೌರವದಿಂದ ಆರಂಭವಾಗುತ್ತದೆ. ರಾಹುಲ್ ಗಾಂಧಿಗೆ ದೇಶದ ಮೇಲೆ ಗೌರವವಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆಯೂ ಗೌರವ ಇಲ್ಲ. ಇಡೀ ದೇಶವೇ ರಾಹುಲ್ ಗಾಂಧಿ ನಡೆಯನ್ನು ವಿರೋಧಿಸುತ್ತಿದೆ' ಹೀಗಿರುವಾಗ ನೀವು ರಾಹುಲ್ ಗಾಂಧಿಗೆ ಹತ್ತಿರವಾದಷ್ಟು ಸ್ಟಾರ್ ಲಿಂಕ್‌ಗೆ ಭಾರತ ಲೈಸೆನ್ಸ್ ನೀಡುವುದು ವಿಳಂಬವಾಗಲಿದೆ ಎಂದು ಎಚ್ಚರಿಸಿದ್ದಾರೆ.
ರಾಹುಲ್ ಗಾಂಧಿಯವರನ್ನು ಆ ದೇಶದ ಜನರೇ ಗಂಭೀರ ಪರಿಗಣಿಸುತ್ತಿಲ್ಲ, ಇನ್ನೊಂದೆಡೆ ಪ್ರಧಾನಿ ಮೋದಿಯವರು ಇಂದು ವಿಶ್ವದ ಶ್ರೇಷ್ಠ ನಾಯಕರಾಗಿ, ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ. ಅಲ್ಲದೆ ಭಾರತವನ್ನು ಯಶಸ್ವಿಯಾಗಿ, ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ನಿಮಗೆ ನಿಜವಾಗಲೂ ಭಾರತದಲ್ಲಿ ಸ್ಟಾರ್ ಲಿಂಕ್ ಲೈಸೆನ್ಸ್ ಪಡೆಯುವ ಬಯಕೆ ಇದ್ದರೆ ರಾಹುಲ್ ಗಾಂಧಿಯವರಂಥ ಕೆಟ್ಟ ನಾಯಕರ ಸಹವಾಸ ಮಾಡುವ ಬದಲು ಸಾರ್ವಜನಿಕ ಸಂದೇಶಗಳನ್ನ ನೇರವಾಗಿ ಪ್ರಧಾನಿ ಮೋದಿಗೆ ಹೇಳುವುದು ಒಳ್ಳೆಯದು' ಎಂದು ಮೇರಿ ಸಲಹೆ ನೀಡಿದ್ದಾರೆ.
ಅಮೆರಿಕದ ಅತ್ಯುನ್ನತ ಪ್ರಶಸ್ತಿ ಪಡೆದಿದ್ದಕ್ಕೆ ಅಭಿನಂದನೆ
ಮೇರಿ ಮಿಲ್‌ಬೆನ್ ಪೋಸ್ಟ್‌ನಲ್ಲಿ ನೆಟಿಜನ್ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಯುಎಸ್ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಮಸ್ಕ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ವಿಜ್ಞಾನ ಕ್ಷೇತ್ರದಲ್ಲಿನ ಕೊಡುಗೆಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮಸ್ಕ್‌ಗೆ ಅತ್ಯುನ್ನತ ರಾಷ್ಟ್ರೀಯ ವಿಜ್ಞಾನ ಪದಕ ಪ್ರದಾನ ಮಾಡಿದ್ದಾರೆ ಈ ಸಾಧನೆಗಾಗಿ ನೆಟಿಜನ್ ಅಭಿನಂದನೆ ಸಲ್ಲಿಸಿದ್ದಾರೆ.
ಏನಿದು ಎಲಾನ್ ಮಸ್ಕ್ ಸ್ಟಾರ್ ಲಿಂಕ್ ವಿವಾದ?
ಕಳೆದ ಐದು ವರ್ಷಗಳಿಂದ ಎಲ್ಲ ನಿಯಮಗಳನ್ನು ಪಾಲಿಸಿದ್ದರೂ ಸ್ಟಾರ್‌ಲಿಂಕ್ ಭಾರತದಲ್ಲಿ ಇಂಟರ್‌ನೆಟ್ ಪ್ರಾರಂಭಿಸಲು ಲೈಸೆನ್ಸ್ ನೀಡುವಲ್ಲಿ ವಿಳಂಬವಾಗುತ್ತಿದೆ. ಈ ಕಾರಣದಿಂದ ಮಸ್ಕ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಮುಖೇಶ್ ಅಂಬಾನಿಯವರಂತಹ ಕೈಗಾರಿಕೋದ್ಯಮಿಗಳನ್ನು ಮಸ್ಕ್ ಟೀಕಿಸಿದ್ದರು. ಅಂಬಾನಿ ಭಾರತದ ಮುಖ್ಯಸ್ಥರೇ ಎಂದು ಪ್ರಶ್ನಿಸಿ ಟ್ವಿಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇನ್ನೊಂದು ತಮಾಷೆ ಎಂದರೆ ಕಳೆದ ವರ್ಷ ಸ್ಟಾರ್ ಲಿಂಕ್ ಭಾರತ ಪ್ರವೇಶಕ್ಕೆ ರಾಹುಲ್ ಗಾಂಧಿ ವಿರೋಧಿಸಿದ್ದರು. ಆದರೆ ಇದೀಗ ಎಲಾನ್ ಮಸ್ಕ್ ಸ್ಟಾರ್ ಲಿಂಕ್‌ಗೆ ವೆಲ್ ಕಂ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಈ ಇಬ್ಬಂದಿತನ ನೆಟಿಜನ್ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಹಳೆ ಪೋಸ್ಟ್‌ಗಳ ಸ್ಕ್ರೀನ್ ಶಾಟ್ ಶೇರ್ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ.


