ಕೊಳ್ಳಂನಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವಂತೆ ಮಾಡಲು ಪೂಜೆ ನಡೆಸುವ ನೆಪದಲ್ಲಿ 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ನಕಲಿ ಜ್ಯೋತಿಷಿ ಬಂಧನ. ಶಿನು ಎಂಬ ಈತ, ಬಾಲಕಿಯ ತಾಯಿಯ ಕೋಣೆಯಿಂದ ಹೊರಗೆ ಕಳುಹಿಸಿ ಈ ಕೃತ್ಯ ಎಸಗಿದ್ದು,  ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಕೊಲ್ಲಂ (ನ.15): ಕೊಲ್ಲಂನಲ್ಲಿ 11 ವರ್ಷದ ಬಾಲಕಿ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣದಲ್ಲಿ ನಕಲಿ ಜ್ಯೋತಿಷಿಯೊಬ್ಬನನ್ನು ಈಸ್ಟ್ ಪೊಲೀಸರು ಬಂಧಿಸಿದ್ದಾರೆ. ಮುಂಡಕ್ಕಲ್ ನಿವಾಸಿ ಶಿನು ಬಂಧಿತ ಆರೋಪಿ.

ಮಾಟ-ಮಂತ್ರ ನೆಪದಲ್ಲಿ ಲೈಂಗಿಕ ದೌರ್ಜನ್ಯ:

ಮಾಟಮಂತ್ರದ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿನು ಕೊಲ್ಲಂನ ಅಮ್ಮಚಿವೀಡು ಎಂಬಲ್ಲಿ ಶಂಖ ಜ್ಯೋತಿಷ್ಯ ಎಂಬ ಹೆಸರಿನಲ್ಲಿ ಸಂಸ್ಥೆಯೊಂದನ್ನು ನಡೆಸುತ್ತಿದ್ದ. ಈ ಕೇಂದ್ರದಲ್ಲಿ ಮಾಟಮಂತ್ರದಂತಹ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಆರೋಪಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಬರುತ್ತದೆ ಎಂದು ನಂಬಿಸಿ, ಪೂಜೆಯ ನೆಪದಲ್ಲಿ 11 ವರ್ಷದ ಬಾಲಕಿ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಬಾಲಕಿ ಜೊತೆ ಒಬ್ಬಳೇ ಮಾತನಾಡಬೇಕು ಎಂದು ಹೇಳಿ, ತಾಯಿಯನ್ನು ಕೋಣೆಯಿಂದ ಹೊರಗೆ ಕಳುಹಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

ಪೊಕ್ಸೋ ಪ್ರಕರಣ ದಾಖಲು:

ಬಾಲಕಿಯ ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿಯ ಹೇಳಿಕೆ ದಾಖಲಿಸಿಕೊಂಡ ಈಸ್ಟ್ ಪೊಲೀಸರು, ಪೋಕ್ಸೋ ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ನಕಲಿ ಜ್ಯೋತಿಷಿ ಶಿನುನನ್ನು ಬಂಧಿಸಲಾಗಿದೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಜ್ಯೋತಿಷ್ಯ ಮತ್ತು ಮಾಟಮಂತ್ರದ ಹೆಸರಿನಲ್ಲಿ ಈತ ಹಲವು ಜನರಿಗೆ ವಂಚಿಸಿದ್ದಾನೆ ಎಂಬ ದೂರುಗಳು ಕೂಡ ಕೇಳಿಬರುತ್ತಿವೆ.