ಸಮುದ್ರದ ಮಧ್ಯೆ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಲು ಹೋದವನಿಗೆ ಶಾಕ್
ಇಲ್ಲೊಬ್ಬ ಯುವಕ ಸಮುದ್ರದ ಮಧ್ಯೆ ನೀರಿನ ಮೇಲೆ ತಾನು ಮೆಚ್ಚಿದ ಹುಡುಗಿಗೆ ಪ್ರೇಮ ನಿವೇದನೆ ಮಾಡಲು ಹೋಗಿದ್ದಾನೆ. ಆದರೆ ಅಲ್ಲಿ ಬೇರೇನೂ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮೆಚ್ಚಿದ ಹುಡುಗನ ಅಥವಾ ಹುಡುಗಿಯ ಮೆಚ್ಚಿಸುವ ಸಲುವಾಗಿ ಅನೇಕರು ಇನ್ನಿಲ್ಲದ ಸಾಹಸ ಮಾಡುತ್ತಾರೆ. ನಿನಗಾಗಿ ಏನು ಬೇಕಾದರೂ ಮಾಡಬಲ್ಲೆ ಚಂದ್ರನನ್ನೇ ತರಬಲ್ಲೆ ಎಂದು ಹೇಳುವ ಮಾತನ್ನು ಇವತ್ತಿನ ಬಹುತೇಕ ಹೆಣ್ಣು ಮಕ್ಕಳು ಒಪ್ಪಲು ಸಿದ್ಧರಿಲ್ಲ. ಹೀಗಾಗಿ ವಿಭಿನ್ನವಾಗಿ ಪ್ರಪೋಸ್ ಮಾಡಲು ಹುಡುಗರು ಹರ ಸಾಹಸ ಪಡುತ್ತಾರೆ. ತಮ್ಮ ಪ್ರೇಮ ನಿವೇದನೆ ಚಿರಕಾಲ ಉಳಿಯಬೇಕೆಂದು ನೀರಿನ ಮೇಲೆ, ವಿಮಾನದಲ್ಲಿ ಆಗಸದಲ್ಲಿ ಪ್ರೇಮ ನಿವೇದನೆ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಸಮುದ್ರದ ಮಧ್ಯೆ ನೀರಿನ ಮೇಲೆ ತಾನು ಮೆಚ್ಚಿದ ಹುಡುಗಿಗೆ ಪ್ರೇಮ ನಿವೇದನೆ ಮಾಡಲು ಹೋಗಿದ್ದಾನೆ. ಆದರೆ ಅಲ್ಲಿ ಬೇರೇನೂ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸಮುದ್ರದ (Sea) ಮಧ್ಯೆ ಬೋಟ್ ಮೇಲೆ ಇಬ್ಬರು ಪರಸ್ಪರ ತಬ್ಬಿಕೊಂಡು ಇನ್ನೇನು ಹುಡುಗಿಗೆ ಹುಡುಗ ಪ್ರೇಮ ನಿವೇದನೆ (Love proposal) ಮಾಡಬೇಕು ಎನ್ನುವಷ್ಟರಲ್ಲಿ ಹುಡುಗನ ಕೈಯಲ್ಲಿದ್ದ ಉಂಗುರವಿದ್ದ ಬಾಕ್ಸ್ ನೀರಿಗೆ ಬಿದ್ದಿದೆ. ಇದರಿಂದ ಯುವಕ ದಂಗಾಗಿದ್ದು, ಕೂಡಲೇ ಆತನೂ ಸಮುದ್ರಕ್ಕೆ ಹಾರಿದ್ದು, ನೀರಿಗೆ ಬಿದ್ದ ಉಂಗುರದ ಪೊಟ್ಟಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇದೇ ವೇಳೆ ಬೋಟ್‌ನಲ್ಲಿದ್ದ ಮತ್ತೊಬ್ಬರು ಆತನನ್ನು ಹಿಡಿದು ಮೇಲೆತ್ತಿ ಮತ್ತೆ ಬೋಟ್‌ಗೆ ಹತ್ತಿಸಿದ್ದಾರೆ. ಇತ್ತ ಉಂಗುರದ ಪೊಟ್ಟಣ ನೀರಿಗೆ ಬಿದ್ದಿದ್ದಕ್ಕೆ ಸಮುದ್ರಕ್ಕೆ ಹಾರಿದ ತನ್ನ ಇನಿಯನ ನೋಡಿ ಆಕೆಯೂ ಜೋರಾಗಿ ನಗಲಾರಂಭಿಸಿದ್ದಾಳೆ. ಆದರೆ ಆತ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಇತ್ತ ನೀರಿನಿಂದ ಮೇಲೆ ಬಂದ ಯುವಕ ಯುವತಿಗೆ ಮತ್ತೆ ಪ್ರಪೋಸ್ ಮಾಡಿ ರಿಂಗ್ ಹಾಕಿದ್ದು, ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಫೇಸ್‌ಬುಕ್ ಬಳಕೆದಾರ ಸ್ಕಾಟ್ ಸ್ಲೈನ್ ಎಂಬುವವರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಇದು 100 ಶೇಕಡಾ ನಿಜ, 100 ಶೇಕಡಾ ಅದೃಷ್ಟ 100 ಶೇಕಡಾ ಇದನ್ನು ಯಾವತ್ತಿಗೂ ಮರೆಯಲಾಗದು ಎಂದು ಬರೆದು ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ.
ವಿಲ್ ಯು ಮ್ಯಾರಿ ಮಿ? ಭಾರತ ನೆದರ್ಲೆಂಡ್ ಪಂದ್ಯದ ನಡುವೆ ಗೆಳತಿಗೆ ಪ್ರೇಮ ನಿವೇದನೆ!
ವಿಡಿಯೋದಲ್ಲಿ ಕಾಣಿಸುವಂತೆ ಬೋಟ್‌ನ ಮುಂಭಾಗದಲ್ಲಿ ನಿಂತಿರುವ ಈ ಜೋಡಿ ಟೈಟಾನಿಕ್ (Titanic cinema) ಸಿನಿಮಾದ ಸೀನ್‌ನಂತೆ ಪ್ಲೈಯಿಂಗ್ ಮೂಡ್‌ನಲ್ಲಿದ್ದು, ಕ್ಷಣದಲ್ಲಿ ಯುವಕ ಯುವತಿ ಮುಂದೆ ತನ್ನ ಮೊಣಕಾಲುಗಳನ್ನು ಊರಿ ತನ್ನ ಜೇಬಿನಲ್ಲಿದ್ದ ಉಂಗುರುವನ್ನು ಹೊರತೆಗೆಯಲು ನೋಡುತ್ತಾನೆ. ಅಷ್ಟರಲ್ಲಿ ಆತನ ಕೈ ತಪ್ಪಿ ರಿಂಗ್ ಇದ್ದ ಪೊಟ್ಟಣ ಕೆಳಗೆ ಬಿದ್ದಿದ್ದು, ಜೊತೆ ಜೊತೆಯಲ್ಲೇ ಆತನೂ ನೀರಿಗೆ ಹಾರಿದ್ದಾನೆ. ಆದರೆ ಇತ್ತ ಯುವತಿ ನಗಲು ಶುರು ಮಾಡಿದ್ದು, ಇದು ಆತಂಕದ ಕ್ಷಣವನ್ನು ಕಡಿಮೆ ಮಾಡಿದೆ. ಆದರೆ ಆತ ಸ್ವಲ್ಪ ಹೊತ್ತಿನಲ್ಲೇ ಮೇಲೇರಿ ಬಂದು ಮತ್ತೆ ಪ್ರಪೋಸ್ ಮಾಡಿದ್ದು, ಘಟನೆಯನ್ನು ಸುಖಾಂತ್ಯಗೊಳಿಸಿದೆ.
ವಿಡಿಯೋ ನೋಡಿದ ಅನೇಕರು ಈ ಜೋಡಿಗೆ ಶುಭಾಶಯ ಕೋರಿದ್ದು, ಇದು ತುಂಬಾ ತಮಾಷೆಯ ಕ್ಷಣವಾಗಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಎಲ್ಲಕ್ಕಿಂತ ಜೀವನ ತುಂಬಾ ದೊಡ್ಡದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಲ್ಲವೂ ನೆನೆಸಿದಂತೆ ನಡೆಯದಿದ್ದರೂ ಕೊನೆ ಮಾತ್ರ ಪರಿಪೂರ್ಣಾಗಿ ಬಂದಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.