ಜರ್ಮನಿಯ ಬರ್ಲಿನ್‌ನಲ್ಲಿ ವ್ಯಕ್ತಿಯೊಬ್ಬ 5ನೇ ಮಹಡಿಯಿಂದ ವಾಷಿಂಗ್ ಮಿಷನ್ ಎಸೆದ ವಿಡಿಯೋ ವೈರಲ್ ಆಗಿದೆ. ಹಾಸಿಗೆಯ ಮೇಲೆ ಬೀಳುವ ಬದಲು ನೆಲಕ್ಕೆ ಬಿದ್ದು ವಾಷಿಂಗ್ ಮಿಷನ್ ಪುಡಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದು ಯಾವಾಗ ವೈರಲ್ ಆಗುತ್ತದೆ ಎಂದು ಹೇಳಲು ಬರುವುದಿಲ್ಲ, ಕಷ್ಟಪಟ್ಟು ತುಂಬಾ ಶ್ರಮ ಹಾಕಿ ಮಾಡಿದ ಸುಂದರ ವೀಡಿಯೋಗಳನ್ನು ಒಬ್ಬರು ನೋಡುವುದಿಲ್ಲ, ಆದರೆ ನಿರೀಕ್ಷೆಗಳೇ ಇಲ್ಲದೇ ಮಾಡಿದ, ತುಂಬಾ ಸುಲಭವಾಗಿ ಮಾಡಿದ ವೀಡಿಯೋಗಳು ಸಖತ್ ವೈರಲ್ ಆಗುತ್ತಿರುತ್ತವೆ ಎಂಬುದು ಅನೇಕ ಕಂಟೆಂಟ್ ಕ್ರಿಯೇಟರ್‌ಗಳ ಗೋಳು. ಬಹುತೇಕ ಹಠಾತ್ ಆಗಿ ನಡೆದ ಘಟನೆಗಳ ದೃಶ್ಯಾವಳಿಗಳು ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋದಲ್ಲಿ ಅಂತಹ ಮಹತ್ವದೇನು ಇಲ್ಲ ಆದರೂ ಈ ವೀಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.
ವೀಡಿಯೋದಲ್ಲಿರೋದೇನು?
ವ್ಯಕ್ತಿಯೊಬ್ಬ ಕಟ್ಟಡವೊಂದರ 5ನೇ ಮಹಡಿಯಿಂದ ವಾಶಿಂಗ್ ಮಿಷನ್ ಅನ್ನು ಕೆಳಗೆ ಇಳಿಸುವುದಕ್ಕಾಗಿ ಕೆಳಗೆ ಹಾಸಿಗೆಯನ್ನು ಹಾಸಿ ಬಳಿಕ ವಾಶಿಂಗ್ ಮಿಷನ್‌ನನ್ನು ಕಿಟಕಿಯಿಂದ ಹೊರ ಹಾಕುತ್ತಾನೆ. ಆದರೆ ಅವನು ಅಂದುಕೊಂಡತೆ ನಡೆಯಲಿಲ್ಲ. ಈ ವಾಶಿಂಗ್ ಮಿಷನ್ ಹಾಸಿಗೆಯ ಮೇಲೆ ಬೀಳುವ ಬದಲು ಪಕ್ಕದ ನೆಲದ ಮೇಲೆ ಬಿದ್ದಿದ್ದು, ಚೂರು ಚೂರಾಗಿದೆ. ಕೇವಲ 24 ಸೆಕೆಂಡ್‌ನ ಈ ವೀಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಕ್ರೇಜಿ ಕ್ಲಿಪ್ಸ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವ್ಯಕ್ತಿಯೊಬ್ಬ ಕೆಳಗೆ ಹಾಸಿಗೆ ಹಾಸಿ ವಾಷಿಂಗ್ ಮಿಷನ್ ಅನ್ನು 5ನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ ಎಂದು ಅವರು ಬರೆದುಕೊಂಡಿದ್ದಾರೆ.
ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಘಟನೆ
ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ಈಗ ಭಾರಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಸಣ್ಣ ಎಲೆಕ್ಟ್ರಿಕ್ ಸಾಮಗ್ರಿಗಳು ಸ್ವಲ್ಪ ಆಯತಪ್ಪಿ ಕೆಳಗೆ ಬಿದ್ದರೂ ಒಡೆದು ಚೂರಾಗುತ್ತವೆ. ಹೀಗಿರುವಾಗ ವಾಶಿಂಗ್ ಮಿಷನ್‌ನಂತಹ ದೊಡ್ಡ ಯಂತ್ರಗಳನ್ನು ಕೆಳಗಿಳಿಸುವಾಗ ಕನಿಷ್ಟ ಪಕ್ಷ ಆತ ಅದಕ್ಕೊಂದು ಹಗ್ಗ ಕಟ್ಟಿ ನಿಧಾನವಾಗಿ ಕೆಳಗಿಳಿಸಿದ್ದರೂ ಆತನ ಯೋಜನೆ ಸ್ವಲ್ಪವಾದರೂ ಯಶಸ್ವಿಯಾಗುತ್ತಿತ್ತು. ಆದರೆ ಈತ ಬರೋಬ್ಬರಿ 5ನೇ ಮಹಡಿಯ ಕಟ್ಟಡದ ಕಿಟಕಿಯಿಂದ ವಾಷಿಂಗ್ ಮಿಷನ್‌ನನ್ನು ಕೆಳಗೆ ಹಾಕಿದ್ದು, ನುಚ್ಚು ನೂರಾಗಿದೆ.
ಬಿಹಾರ: ಹಾಡಹಗಲೇ ತನಿಷ್ಕ್ ಜ್ಯುವೆಲ್ಲರಿಗೆ ನುಗ್ಗಿ ದರೋಡೆ: ಗನ್ ತೋರಿಸಿ 25 ಕೋಟಿಯ ಅಭರಣ ಲೂಟಿ
ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯಲ್ಲಿ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅಪಾರ್ಟ್‌ಮೆಂಟನ್ನು ಖಾಲಿ ಮಾಡುವುದಕ್ಕಾಗಿ ಈತ ಬಳಸಿದ ವಸ್ತುಗಳನ್ನು ಹೊರಗೆ ಎಸೆದಿದ್ದಾನೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ವಾಷಿಂಗ್ ಮೆಷಿನ್ ಕೆಳಗೆ ಬಿದ್ದ ಸದ್ದು ಕೇಳಿ ಬಹಳ ಖುಷಿಯಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತ ಅದನ್ನು ಮೇಲಿನಿಂದ ಕೆಳಗೆ ಹಾಕಿದ ರಭಸ ನೋಡಿದರೆ ಅದು ಹಾಸಿಗೆ ಮೇಲೆ ಬಿದ್ದರೂ ಒಡೆದು ಚೂರಾಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಜಸ್ಟ್ ಮಿಸ್: ಎಣ್ಣೆ ಹೊಡೆದು ಟ್ರ್ಯಾಕ್ ಮೇಲೆ ಮಲಗಿದ್ದರೂ ಪವಾಡಸದೃಶವಾಗಿ ಪಾರಾದ ಕುಡುಕ
ಇಲ್ಲಿದೆ ನೋಡಿ ಆ ವೀಡಿಯೋ
