ನೀವು ಬೆಕ್ಕು ನಾಯಿ, ಕೋಳಿಗಳನ್ನು ಜನ ತಮ್ಮ ವಾಹನಗಳಲ್ಲಿ ನಗರ ಸುತ್ತಲೂ ಕರೆತರುವುದನ್ನು ನೋಡಿರಬಹುದು, ಆದರೆ ಇಲ್ಲೊಬ್ಬ ದೈತ್ಯ ಗಾತ್ರದ ಭಾರಿ ಕೊಂಬುಗಳ ಗೂಳಿಯೊಂದನ್ನು ನಗರ ಪ್ರದಕ್ಷಿಣಿಗೆ ತನ್ನ ವಾಹನದಲ್ಲಿ ಕರೆತಂದಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರುವುದು ದೂರದ ಅಮೆರಿಕಾದಲ್ಲಿ.
ನೀವು ಬೆಕ್ಕು ನಾಯಿ, ಕೋಳಿಗಳನ್ನು ಜನ ತಮ್ಮ ವಾಹನಗಳಲ್ಲಿ ನಗರ ಸುತ್ತಲೂ ಕರೆತರುವುದನ್ನು ನೋಡಿರಬಹುದು, ಆದರೆ ಇಲ್ಲೊಬ್ಬ ದೈತ್ಯ ಗಾತ್ರದ ಭಾರಿ ಕೊಂಬುಗಳ ಗೂಳಿಯೊಂದನ್ನು ನಗರ ಪ್ರದಕ್ಷಿಣಿಗೆ ತನ್ನ ವಾಹನದಲ್ಲಿ ಕರೆತಂದಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರುವುದು ದೂರದ ಅಮೆರಿಕಾದಲ್ಲಿ.
ಈ ಭಾರಿ ಗಾತ್ರದ ಗೂಳಿಯನ್ನು ಸಾಗಿಸುವ ಸಲುವಾಗಿಯೇ ಈತ ತನ್ನ ಕಾರನ್ನು ಕಸ್ಟಮೈಸ್ ಮಾಡಿದ್ದ. ಈ ದೈತ್ಯ ಗೂಳಿ ಕಾರಿನಲ್ಲಿ ಸಾಗುತ್ತಿರುವ ವೀಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈತ ಹೀಗೆ ಗೂಳಿಯನ್ನು ಕಾರಿನ ತೆರೆದ ಜಾಗದಲ್ಲಿ ನಿಲ್ಲಿಸಿ ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ ಅಲ್ಲಿನ ಜನ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನ ವಿರುದ್ಧ ಟ್ರಾಫಿಕ್ ನಿಯಮ ಉಲ್ಲಂಘನೆಯ (Violation of traffic rules) ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಆತ ವಟುಸಿ ತಳಿಯ ದೈತ್ಯ ಗೂಳಿಯನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಈ ಬಗ್ಗೆ ಜನ ಪೊಲೀಸರಿಗೆ ದೂರು ನೀಡಿದ್ದಾರೆ, ಹೀಗಾಗಿ ನಾರ್ಫೋಕ್ ಪೊಲೀಸ್ ಸಿಬ್ಬಂದಿ ಈತನ ವಾಹನವನ್ನು ಹೈವೇಯಲ್ಲಿ ಅಡ್ಡ ಹಾಕಿ ದಂಡ ವಸೂಲಿ ಮಾಡಿದ್ದಾರೆ.
ಜಲ್ಲಿಕಟ್ಟು ಆಟ ನೋಡುತ್ತಾ ನಿಂತಿದ್ದ 14 ವರ್ಷದ ಬಾಲಕ ಹೋರಿ ತಿವಿದು ಸಾವು
ಜನರು ದೂರು ನೀಡಿದ ವೇಳೆ ಪೊಲೀಸರು, ಬಹುಶಃ ಸಣ್ಣ ಕರು ಇರಬಹುದು ಎಂದು ಭಾವಿಸಿದ್ದರಂತೆ, ಆದರೆ ರಸ್ತೆಗಿಳಿದ ಮೇಲೆ ಪೊಲೀಸರಿಗೂ ಈ ಭಾರಿ ಗಾತ್ರದ ಗೂಳಿಯನ್ನು ನೋಡಿ ಶಾಕ್ ಕಾದಿತ್ತು. ಏಕೆಂದರೆ ಇದರ ಒಂದೊಂದು ಕೊಂಬುಗಳೇ ಮನುಷ್ಯರ ಕೈಗಿಂತಲೂ ಉದ್ದವಿದ್ದಿದ್ದಲ್ಲದೇ ಗೂಳಿಯೂ ದಷ್ಟಪುಷ್ಟವಾಗಿತ್ತು. ಎಂದು ಪೊಲೀಸ್ ಕ್ಯಾಪ್ಟನ್ ಚಾಡ್ ರೈಮನ್ ಹೇಳಿದ್ದಾರೆ.
ಬಿಳಿ ಹಾಗೂ ಕಪ್ಪು ಮಿಶ್ರಿತ ಈ ಗೂಳಿಯ ಹೆಸರು ಹೌಡಿ ಡೂಡಿ, (Howdy Doody)ವೀಡಿಯೋದಲ್ಲಿ ಕಾಣಿಸುವಂತೆ ಕಾರನ್ನು ಈ ಗೂಳಿ ನಿಲ್ಲಲು ಸಾಧ್ಯವಾಗುವಂತೆ ಕಸ್ಟಮೈಸ್ಟ್ ಮಾಡಲಾಗಿದೆ. ಕಾರಿನ ಒಂದು ಬದಿ ಪೂರ್ತಿಯಾಗಿ ಗೂಳಿ ತುಂಬಿ ಹೋಗಿದ್ದು, ಕಾರಿನ ವಿಂಡ್ ಶೀಲ್ಡ್ ಪೂರ್ತಿ ಈ ಗೂಳಿಯ ಎರಡು ಕೊಂಬುಗಳೇ ಕಾಣಿಸುತ್ತಿವೆ. ಕಾರಿನ ಇತರ ಫೋಟೋಗಳಲ್ಲಿ ಗೂಳಿಯೂ ಕೆಳಗೆ ಬೀಳದಂತೆ ಕಬ್ಬಿಣದ ಸರಳನ್ನು ಅಳವಡಿಸಲಾಗಿದೆ. ಮತ್ತೊಂದು ಕಡೆ ಕಾರು ಚಾಲಕ ಇದ್ದು ಬಿಂದಾಸ್ ಆಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರೆ ಇತ್ತ ಕಡೆ ಗೂಳಿ ಗಾಂಭೀರ್ಯವಾಗಿ ಪೋಸ್ ನೀಡುತ್ತಿದೆ.
Bagalakot: ಬರೋಬ್ಬರಿ 14 ಲಕ್ಷ ರೂ.ಗೆ ಮಾರಾಟವಾದ ಬಲಭೀಮ ಎತ್ತು: ವಿಶೇಷತೆಗಳೇನು?
ವೀಡಿಯೋದಲ್ಲಿ ಕಾಣಿಸುವಂತೆ ಈ ಭಾರಿ ಗಾತ್ರದ ಗೂಳಿಯನ್ನು ಕೂರಿಸಿಕೊಂಡು ಕಾರಿನಲ್ಲಿ ಬಿಂದಾಸ್ ಆಗಿ ಹೈವೇಯಲ್ಲಿ ಸಾಗುತ್ತಿದ್ದರೆ ಮಾರ್ಗ ಮಧ್ಯೆ ಕಾರು ಅಡ್ಡ ಹಾಕಿದ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ನಗರವನ್ನು ಬಿಟ್ಟು ಕೂಡಲೇ ಈ ಗೂಳಿಯನ್ನು ಮನೆಯತ್ತ ಸಾಗಿಸುವಂತೆ ಎಚ್ಚರಿಸಿದ್ದಾರೆ. ವೀಡಿಯೋ ನೋಡಿದ ಹಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
