Bagalakot: ಬರೋಬ್ಬರಿ 14 ಲಕ್ಷ ರೂ.ಗೆ ಮಾರಾಟವಾದ ಬಲಭೀಮ ಎತ್ತು: ವಿಶೇಷತೆಗಳೇನು?
ಬಾಗಲಕೋಟೆ (ಜ.28): ಸಾಮಾನ್ಯವಾಗಿ ಹಸು, ಹೋರಿ ಅಥವಾ ಎತ್ತುಗಳು 20 ರಿಂದ 50 ಸಾವಿರ ರೂ.ಗೆ ಮಾರಾಟವಾಗುತ್ತವೆ. ಇನ್ನು ಬಲಿಷ್ಠ ಮತ್ತು ಭಾರಿ ವಿಶೇಷವಾದ ಎತ್ತುಗಳು ಇದ್ದರೆ 1 ರಿಂದ 2 ಲಕ್ಷ ರೂ. ಬೆಲೆ ಬಾಳಬಹುದು. ಅದಕ್ಕೂ ಮಿಗಿಲೆಂದರೆ 10 ಲಕ್ಷ ರೂ.ಗೆ ಎತ್ತು ಮಾರಾಟ ಆಗಿರಬಹುದು. ಆದರೆ, ಬಾಗಲಕೋಟೆಯಲ್ಲಿ ಒಂದು ಎತ್ತು (ಹೋರಿ) ಬರೋಬ್ಬರಿ 14 ಲಕ್ಷ ರೂ.ಗೆ ಮಾರಾಟವಾಗಿದೆ. ಈ ಮೂಲಕ ಹೈನುಗಾರಿಕೆ ಹಾಗೂ ಬೇಸಾಯ ಮಾಡುವ ಎಲ್ಲ ರೈತರ ಹುಬ್ಬೇರಿಸುವಂತೆ ಮಾಡಿದೆ. ಇಲ್ಲಿದೆ ನೋಡಿ ಆ ಎತ್ತಿನ ಸುಂದರ ಚಿತ್ರಗಳು.
ಬಾಗಲಕೋಟೆ ಜಿಲ್ಲೆಯ ಮೆಟಗುಡ್ಡ ಗ್ರಾಮದಲ್ಲಿ ದಾಖಲೆಯ 14 ಲಕ್ಷ ರೂಪಾಯಿಗೆ ಒಂದೇ ಎತ್ತು ಮಾರಾಟವಾಗಿದೆ. ಮೆಟಗುಡ್ಡ ಗ್ರಾಮದ ರೈತ ಕಾಶಿಲಿಂಗಪ್ಪ ಗಡಾದ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ.
ರೈತ ಕಾಶಿಲಿಂಗಪ್ಪ ಗಡಾದ ತಾನು ಖರೀದಿಸಿದ ಒಂದೇ ವಾರದಲ್ಲಿ ಬರೊಬ್ಬರಿ 9 ಲಕ್ಷ ರೂ. ಲಾಭ ತಂದುಕೊಟ್ಟಿದೆ. ಕೋವಿಡ್ ನಂತರದ ಅವಧಿಯಲ್ಲಿ ಎತ್ತು ಮತ್ತು ಹಸುಗಳ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ.
ನಂದಗಾಂವ ಗ್ರಾಮದ ರೈತ ವಿಠ್ಠಲ ಅವರು 14 ಲಕ್ಷ ರೂ. ಕೊಟ್ಟು ಈ ಎತ್ತನ್ನು ಖರೀದಿ ಮಾಡಿದ್ದಾರೆ. ಈ ಎತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿದ್ದ ಬಂಡಿ ೋಟ ಸ್ಪರ್ಧೆಯಲ್ಲಿ ಹೆಚ್ಚಿನ ಬಹುಮಾನ ಗಳಿಸಿ ಬಲಭೀಮನೆಂದು ಪ್ರಸಿದ್ಧಿ ಪಡೆದಿತ್ತು.