10 ವರ್ಷದ ಬಾಲಕಿಯ ರೇಪ್ ಮಾಡಿ ಗರ್ಭಿಣಿ ಮಾಡಿದ ವ್ಯಕ್ತಿ, ಅಬಾರ್ಷನ್ ಮಾಡಿಸಿ ಸಿಕ್ಕಿಬಿದ್ದ
ಹತ್ತು ವರ್ಷದ ಮುಗ್ಧ ಹುಡುಗಿಯ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ ನಂತರ ಅಬಾರ್ಷನ್ ಮಾಡಿಸಲು ಮುಂದಾಗಿದ್ದಾನೆ. ಒಹಿಯೊ ಸ್ಟೇಟ್‌ನಲ್ಲಿ ಅಬಾರ್ಷನ್ ಮಾಡಲು ಅವಕಾಶವಿಲ್ಲ ಎಂಬ ಕಾರಣಕ್ಕೆ ಅಮೆರಿಕಾದ ಇಂಡಿಯನಾಪೊಲಿಸ್‌ಗೆ ಕರೆದೊಯ್ದು ಅಬಾರ್ಷನ್ ಮಾಡಿಸಿದ ನಂತರ ಸಿಕ್ಕಿಬಿದ್ದಿದ್ದಾನೆ.
ಇದೊಂದು ವಿಲಕ್ಷಣ ಪ್ರಕರಣ. ಒಂದೆಡೆ ಮುಗ್ದ ಬಾಲಕಿಯ ಮೇಲಾದ ಕ್ರೌರ್ಯದಿಂದ ಮನಸು ಕರಗಿದರೆ, ಇನ್ನೊಂದು ಕಡೆ ವಿಜ್ಞಾನದ ವಿಸ್ಮಯಗಳು ಹೀಗೂ ನಡೆಯುತ್ತವಾ ಅನಿಸುತ್ತದೆ. ಯಾಕೆಂದರೆ ಈ ಘಟನೆಯಲ್ಲಿ ಕೇವಲ ಹತ್ತು ವರ್ಷ ವಯಸ್ಸಿಗೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಇನ್ನೊಂದು ಜೀವಕ್ಕೆ ಬದುಕು ಕೊಡಲು ಸಾಧ್ಯವೇ ಎಂಬ ಪ್ರಶ್ನೆ ಆಶ್ಚರ್ಯ ಮೂಡಿಸುತ್ತದೆ. ಮತ್ತದೇ ಸಂದರ್ಭದಲ್ಲಿ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯ ಕ್ರೌರ್ಯ ಮಾನವ ಕುಲದ ಮೇಲೆ ನಂಬಿಕೆ ಅಳಿಸುವಂತೆ ಮಾಡುತ್ತದೆ. ಅಮೆರಿಕಾದ ಬಳಿಯ ಗ್ವಾಟೆಮಾಲಾದ ವ್ಯಕ್ತಿಯೊಬ್ಬ ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ತಿಂಗಳ ನಂತರ ಆಕೆ ಗರ್ಭಿಣಿಯಾಗಿರುವುದು ಆತನಿಗೆ ಗೊತ್ತಾಗಿದೆ. ಅದಾದ ನಂತರ ಆಕೆಯನ್ನು ಗ್ವಾಟೆಮಾಲಾದಿಂದ ಬಲವಂತವಾಗಿ ಅಮೆರಿಕಾ ಒಳಕ್ಕೆ ಕದೊಯ್ದಿದ್ದಾನೆ. ಅದೂ ಅಕ್ರಮವಾಗಿ ಅಮೆರಿಕಾದೊಳಕ್ಕೆ ಪ್ರವೇಶಿಸಿದ್ದಾನೆ. ನಂತರ ಅಮೆರಿಕಾ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದು ಆತನನ್ನು ಬಂಧಿಸಲಾಗಿದೆ. ಹತ್ತು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕನ ಹೆಸರು ಗೆರ್ಸನ್ ಫ್ಲ್ಯುಂಟೆಸ್. ಗೆರ್ಸನ್‌ಗೆ 27 ವರ್ಷ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಹೆರಿಗೆ ವೇಳೆ ಗರ್ಭಿಣಿಯರಿಗೆ ಮತ್ತು ಬರುವ ಇಂಜೆಕ್ಷನ್ ನೀಡಿ ಅತ್ಯಾಚಾರ: ಕಾಮುಕ ಡಾಕ್ಟರ್ ಬಂಧನ
ವಲಸೆ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಮಗುವಿನ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ನಂತರ ಆತನ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಅಕ್ರಮವಾಗಿ ಅಮೆರಿಕಾಗೆ ಒಳನುಸುಳಿದ ಪ್ರಕರಣ ದಾಖಲಿಸಲಾಗಿದೆ. ಹತ್ತು ವರ್ಷದ ಮಗು ಒಹಿಯೊ ಸ್ಟೇಟ್‌ನವಳಾಗಿದ್ದು, ಇಂಡಿಯಾನಾಗೆ ಆಕೆಯನ್ನು ಕರೆದೊಯ್ದು ಅಬಾರ್ಷನ್ ಮಾಡಿಸಿದ್ದಾನೆ. ಅದಾದ ನಂತರ ಆತನನ್ನು ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಅಮೆರಿಕಾ ಸುಪ್ರೀಂ ಕೋರ್ಟ್ ಅಬಾರ್ಷನ್ ಹಕ್ಕನ್ನು ಕಡಿತಗೊಳಿಸಿ ಆದೇಶ ನೀಡಿತ್ತು. ಈ ಕಾರಣದಿಂದಾಗಿಯೇ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಅಬಾರ್ಷನ್ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಕೆಲ ದಿನಗಳಲ್ಲೇ ಅಮೆರಿಕಾಗೆ ಅಕ್ರಮವಾಗಿ ಬಂದು ಅಪ್ರಾಪ್ತ ಬಾಲಕಿಯ ಅಬಾರ್ಷನ್ ಮಾಡಿಸಿ ಆರೋಪಿ ಸಿಕ್ಕಿಹಾಕಿಕೊಂಡಿದ್ಧಾನೆ.
ಇದನ್ನೂ ಓದಿ: ಸ್ನೇಹಿತರೊಂದಿಗೆ ಸೇರಿ ಪತ್ನಿ ಜೊತೆ ಬಲವಂತದ ಸೆಕ್ಸ್: ಹಣ, ಮದ್ಯ ಪಡೆದು ಕುಕೃತ್ಯ!
ಜೂನ್ 22ರಂದು ತನ್ನ ಮಗಳ ಮೇಲೆ ಅತ್ಯಾಚಾರವಾಗಿದೆ, ಆಕೆಯೀಗ ಗರ್ಭಿಣಿಯಾಗಿದ್ದಾಳೆ ಎಂದು ಸಂತ್ರಸ್ಥೆಯ ತಾಯಿ ಕೋಲಂಬಸ್ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಜೂನ್ 30ರಂದು ಇಂಡಿಯಾನಾಪೊಲಿಸ್‌ನಲ್ಲಿ ಹುಡುಗಿಗೆ ಅಬಾರ್ಷನ್ ಮಾಡಿಸಲಾಗಿದೆ. ಕಾನೂನಾತ್ಮಕವಾಗಿ ಇದು ಅಪರಾಧವಾಗಿದ್ದು, ಅಬಾರ್ಷನ್ ಪರ ವಿರೋಧದ ಚರ್ಚೆಗೆ ಇದು ಮತ್ತೆ ಕಾರಣವಾಗಿದೆ.
ಇದನ್ನೂ ಓದಿ: 11 ವರ್ಷದ ಬಾಲಕಿ ಮೇಲೆ ಐವರು ಯುವಕರಿಂದ ಅತ್ಯಾಚಾರ ಯತ್ನ: ವೀಡಿಯೊ ಹರಿಬಿಟ್ಟ ದುರುಳರು
ಪೊಲೀಸರಿಗೆ ಸಂತ್ರಸ್ಥೆ ಹೇಳಿದ್ದೇನು?:
ತಾನು ಇತ್ತೀಚೆಗಷ್ಟು ಹತ್ತು ವರ್ಷದವಳಾಗಿದ್ದು ಒಂಭತ್ತು ವರ್ಷದವಳಾಗಿದ್ದಾಗ ಗೆರ್ಸನ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದ. ಎರಡು ಬಾರಿ ಅತ್ಯಾಚಾರ ಮಾಡಿದ ನಂತರ ನಾನು ಗರ್ಭಿಣಿಯಾಗಿದೆ. ನಂತರ ಇಂಡಿಯಾನಾಪೊಲಿಸ್ ನಗರಕ್ಕೆ ನನ್ನನ್ನು ಅಕ್ರಮವಾಗಿ ಕರೆದುಕೊಂಡು ಬಂದು ಜೂನ್ 30ರಂದು ಅಬಾರ್ಷನ್ ಮಾಡಿಸಿದ್ದಾನೆ ಎಂದು ಹುಡುಗಿ ಮಾಹಿತಿ ನೀಡಿದ್ದಾರೆ.