ಹೆರಿಗೆ ವೇಳೆ ಗರ್ಭಿಣಿಯರಿಗೆ ಮತ್ತು ಬರುವ ಇಂಜೆಕ್ಷನ್ ನೀಡಿ ಅತ್ಯಾಚಾರ: ಕಾಮುಕ ಡಾಕ್ಟರ್ ಬಂಧನ
ವೈದ್ಯೋ ನಾರಾಯಣ ಹರಿಃ ಎಂಬ ಮಾತನ್ನು ಸಾಮಾನ್ಯವಾಗಿ ಬಹುತೇಕರು ನಂಬುತ್ತಾರೆ. ವೈದ್ಯರ ಬಳಿ ಯಾರೂ ಸತ್ಯವನ್ನು ಮುಚ್ಚಿಡುವುದಿಲ್ಲ, ಅವರ ಮೇಲಿನ ನಂಬಿಕೆಯದು. ಆದರೆ ಇಲ್ಲೊಬ್ಬ ವಿಕೃತ ವೈದ್ಯ, ಹೆರಿಗೆಗೆ ಬರುವ ಗರ್ಭಿಣಿಯರಿಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಮಾಡುತ್ತಿದ್ದ. ನಂತರ ಸಹೋದ್ಯೋಗಿಗಳೇ ಅತ್ಯಾಚಾರದ ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿದ ಬಳಿಕ, ಕಾಮುಕನನ್ನು ಬಂಧಿಸಲಾಗಿದೆ.
ಎಂತೆಂತದ್ದೋ ಚಿತ್ರ ವಿಚಿತ್ರ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಕೆಲವು ಬಳಕಿಗೆ ಬಂದರೆ ಕೆಲವು ಮುಚ್ಚೇ ಹೋಗುತ್ತದೆ. ಆದರೆ ಹೇಯ ಕೃತ್ಯಗಳು ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇವೆ. ಇಂಥದ್ದೇ ಒಂದು ಪೈಶಾಚಿಕ ಕೃತ್ಯ ದೂರದ ಬ್ರೆಜಿಲ್‌ನಲ್ಲಿ ನಡೆದಿದೆ. ವೈದ್ಯೋ ನಾರಾಯಾಣ ಹರಿಹಿ ಎಂದು ನಂಬುವ ಜನರ ಮೇಲೆ ವೈದ್ಯನೇ ಪೈಶಾಚಿಕ ಕೃತ್ಯ ನಡೆಸಿದ ಘಟನೆ ಇದಾಗಿದೆ. ಹೆರಿಗೆಗೆಂದು ಬರುವ ಮಹಿಳೆಯರಿಗೆ ಅತಿಯಾಗಿ ಮದ್ದು ಬರುವ ಔಷಧ ನೀಡಿ ನಂತರ ಹೆರಿಗೆ ಮಾಡಿಸುವ ಬದಲು ಅತ್ಯಾಚಾರ ಮಾಡುತ್ತಿದ್ದ ವಿಕೃತ ವ್ಯಕ್ತಿಯನ್ನು ಈಗ ಬಂಧಿಸಲಾಗಿದೆ. ಈತನ ಹೆಸರು ಗ್ಯೋವನ್ನಿ ಕ್ವಿಂಟೆಲ್ಲಾ ಬೆಜೆರ್ರಾ. ಈತ ಬ್ರೆಜಿಲ್‌ನ ರಿಯೋ ಡಿ ಜನೇರೋದ ಮಹಿಳಾ ಆಸ್ಪತ್ರೆಯೊಂದರಲ್ಲಿ ಅನಸ್ಥೇಟಿಸ್ಟ್ (ಮತ್ತು ಬರುವ ಇಂಜೆಕ್ಷನ್ ಕೊಡುವ ವೈದ್ಯ) ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಅವನು ವೈದ್ಯ ವೃತ್ತಿ ಆರಂಭಿಸಿದ್ದ. ಆದರೂ ಹಲವಾರು ಹೆರಿಗೆಗಳನ್ನು ಆತ ಮಾಡಿಸಿದ್ದ. ಹೆರಿಗೆಯ ವೇಳೆ ನೀಡಬೇಕಾದ ಪ್ರಮಾಣಕ್ಕಿಂತ ಹೆಚ್ಚು ಸೆಡೇಟಿವ್ ಕೊಡುತ್ತಿದ್ದ. ಇದರ ಬಗ್ಗೆ ಸಹೋದ್ಯೋಗಿಗಳಿಗೆ ಅನುಮಾನ ಬರದಿದ್ದರೆ ಆತ ಬಂಧನವೂ ಆಗುತ್ತಿರಲಿಲ್ಲ ಮತ್ತು ಇಂತಾ ಅದೆಷ್ಟು ಅಮಾಯಕ ಗರ್ಭಿಣಿಯರು ಈತನ ಕಾಮಕ್ಕೆ ನಲುಗುತ್ತಿದ್ದರೋ ಊಹಿಸುವುದೂ ಅಸಾಧ್ಯ. ವೈದ್ಯನೊಬ್ಬನ ವಿಚಿತ್ರ ವಿಕೃತ ಕಾಮ ಕಥೆ ಇಲ್ಲಿದೆ.
ಇದನ್ನೂ ಓದಿ: ಸ್ನೇಹಿತರೊಂದಿಗೆ ಸೇರಿ ಪತ್ನಿ ಜೊತೆ ಬಲವಂತದ ಸೆಕ್ಸ್: ಹಣ, ಮದ್ಯ ಪಡೆದು ಕುಕೃತ್ಯ!
ಈತನ ಕಾಮಪಿಪಾಸು ಘಟನೆಯ ಬಗ್ಗೆ ದೂರು ಬಂದ ನಂತರ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕೇವಲ ಒಂದೇ ಗರ್ಭಿಣಿಯ ಮೇಲೆ ಅತ್ಯಾಚಾರ ಮಾಡಿಲ್ಲ, ಹಲವರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳು ಈತನ ಬಗ್ಗ ಅನುಮಾನ ಮೂಡಿ, ಅವನಿಗೆ ತಿಳಿಯದಂತೆ ಗರ್ಭಿಣಿಗೆ ಅನಸ್ತೇಷಿಯಾ ಕೊಡಲು ಹೋದಾಗ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಯಾಕೆಂದರೆ ಈತ ಗರ್ಭಿಣಿಯರಿಗೆ ಮಾತ್ರ ಹೆಚ್ಚು ಮತ್ತು ಬರುವಷ್ಟು ಅನಸ್ತೇಷಿಯಾವನ್ನು ನೀಡುತ್ತಿದ್ದ. ಇದನ್ನು ಹಲವು ಬಾರಿ ಪ್ರಶ್ನಿಸಿದಾಗ ಅನಸ್ತೇಷಿಯಾ ತಜ್ಞ ನಾನಾ ಅಥವಾ ನೀವಾ ಎಂಬ ಮರು ಪ್ರಶ್ನೆ ಹಾಕಿದ್ದ. ಅವನ ಮೇಲೆ ಸಂಶಯ ಮೂಡಿ ವಿಡಿಯೋ ರೆಕಾರ್ಡ್ ಮಾಡಿದಾಗ, ಆತ ಗರ್ಭಿಣಿಯನ್ನು ನಿದ್ದೆ ಬರುವಂತೆ ಮಾಡಿ ಅತ್ಯಾಚಾರ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಗೆಳೆಯರೊಂದಿಗೆ ಸೇರಿ ಪತ್ನಿಯ ಮೇಲೆ ಮದ್ಯವ್ಯಸನಿ ಪತಿ ಅತ್ಯಾಚಾರ: ವೀಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್
ಇತ್ತೀಚೆಗೆ ಈತ ಇಬ್ಬರು ಗೃಹಿಣಿಯರಿಗೆ ಹೆರಿಗೆ ಮಾಡಿಸಿದ್ದ. ಆದರೆ ಅಲ್ಲಿ ಚಿತ್ರೀಕರಣ ಮಾಡಲು ಸಹೋದ್ಯೋಗಿಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಮೂರನೇ ಹೆರಿಗೆಯ ವೇಳೆ ಕಡೆ ಕ್ಷಣದಲ್ಲಿ ಹೆರಿಗೆ ರೂಮನ್ನು ಬದಲಿಸಲಾಯಿತು. ಗರ್ಭಿಣಿಯನ್ನು ಮೊದಲೇ ಕ್ಯಾಮೆರಾ ಅಡಗಿಸಿಟ್ಟಿದ್ದ ರೂಮಿಗೆ ಕರೆತರಲಾಯಿತು. ಆಗ ಈತ ಒಂಟಿಯಾಗಿ ಗರ್ಭಿಣಿಯ ಜತೆಗಿದ್ದಾಗ ಮಾಡುವ ಕೃತ್ಯ ಸೆರೆಯಾಗಿದೆ. ನಂತರ ಆಸ್ಪತ್ರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆತನನ್ನು ಪೊಲೀಸರು ಬಂಧಿಸುವಾಗ ಆತ ಯಾವುದೇ ಸಮಜಾಯಿಷಿ ನೀಡಿಲ್ಲ. ಎಷ್ಟಾದರೂ ವಿಡಿಯೋ ರೆಕಾರ್ಡಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದಾನೆ, ಏನು ಹೇಳಿದರೂ ನಂಬುವವರಾರು.
ಇದನ್ನೂ ಓದಿ: 11 ವರ್ಷದ ಬಾಲಕಿ ಮೇಲೆ ಐವರು ಯುವಕರಿಂದ ಅತ್ಯಾಚಾರ ಯತ್ನ: ವೀಡಿಯೊ ಹರಿಬಿಟ್ಟ ದುರುಳರುಸಂತ್ರಸ್ಥೆಯರಿಗೆ ಕಾನೂನು ಹೋರಾಟಕ್ಕೆ ಬೇಕಾದ ಎಲ್ಲಾ ಸಹಕಾರವನ್ನೂ ಆಸ್ಪತ್ರೆ ನೀಡುವುದಾಗಿ ಹೇಳಿಕೊಂಡಿದೆ. ಜತೆಗೆ ಆಸ್ಪತ್ರೆಯೇ ಕಾಮುಕ ವೈದ್ಯನನ್ನು ಹಿಡಿದು ದೂರು ಕೊಟ್ಟಿರುವುದರಿಂದ ಸಂತ್ರಸ್ತರಿಗೂ ಆಸ್ಪತ್ರೆಯ ಮೇಲೆ ಸಿಟ್ಟಿಲ್ಲ ಎನ್ನಲಾಗಿದೆ. ಆದರೆ ನಂಬಿ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ವೈದ್ಯರು ಮತ್ತು ಬರುವ ಔಷಧ ನೀಡಿ ಈ ರೀತಿ ಮಾಡಲು ಆರಂಭಿಸಿದರೆ ಜಗತ್ತಿನಲ್ಲಿ ಇನ್ಯಾನ್ನು ನಂಬುವುದು ಎಂಬ ಭಯ ಕಾಡುವುದು ಸಹಜ.