Asianet Suvarna News Asianet Suvarna News

ಅತೀ ಬುದ್ಧಿವಂತ... ಕಾರಿಗೆ ಗುದ್ದಿ 100 ಡಾಲರ್‌ ಪರಿಹಾರ ಇಟ್ಟು ಹೋದ..!

ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ವ್ಯಕ್ತಿಯೊಬ್ಬ ಬಳಿಕ  ಚೀಟಿಯೊಂದರಲ್ಲಿ ಸಾರಿ ಎಂದು ಬರೆದು 100 ಡಾಲರ್ ಪರಿಹಾರ ಇರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆದರೆ ಕಾರಿಗೆ ಆಗಿರುವ ಹಾನಿ ನೋಡಿದರೆ ಇದೇನು ಸಾಲದು ಎಂದು ಕಾರು ಮಾಲೀಕ ಅವಲತ್ತುಕೊಂಡಿದ್ದಾನೆ. 

Man rams into parked car and put sorry note and compensation in Florida akb
Author
First Published Nov 6, 2022, 1:42 PM IST

ಪ್ಲೋರಿಡಾ: ಇಲ್ಲಿನ ಎಪ್ಕಾಟ್‌ ಥೀಮ್‌ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬ ಪಾರ್ಕಿಂಗ್‌ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಪಾರ್ಕ್ ನೋಡಲು ಹೋಗಿದ್ದ. ಆತ ತುಂಬಾ ಹೊತ್ತು ಪಾರ್ಕ್‌ನಲ್ಲಿ ತುಂಬಾ ಹೊತ್ತು ಎಂಜಾಯ್‌ ಮಾಡಿದ. ಆದರೆ ಮರಳಿ ಬರುವಷ್ಟರಲ್ಲಿ ಆತನ ಕಾರಿಗೆ ಯಾರೋ ಗುದ್ದಿ ಹಾನಿ ಮಾಡಿದ್ದರು. ಇದನ್ನು ಗಮನಿಸಿ ಆತ ತೀವ್ರ ಆಘಾತಗೊಂಡ. ಆದರೆ ನಜ್ಜುಗುಜ್ಜಾಗಿದ್ದ ಬಾನೆಟ್‌ ಮೇಲೆ ಅದೇನೋ ಕಾಗದ ಕಾಣಿಸಿತು. ಅದನ್ನು ನೋಡಿದಾಗ ಆತನಿಗೆ ಅಚ್ಚರಿ. ಕಾರು ಹಾಳು ಮಾಡಿದ್ದು ತಾನೇ ಎಂದು ಬರೆದಿಟ್ಟಿದ್ದ ವ್ಯಕ್ತಿಯೊಬ್ಬ 100 ಡಾಲರ್‌ ಹಣವನ್ನೂ ಅದರ ಜತೆ ಇಟ್ಟು ಕ್ಷಮೆ ಕೇಳಿದ್ದ. ಆದರೆ ಹಾನಿಗೊಳಗಾದ ಕಾರಿನ ಸ್ಥಿತಿ ನೋಡಿದರೆ ಈ ಪರಿಹಾರದ ಹಣ ಏನಕ್ಕೂ ಸಾಲದಂತೆ..!

ರೆಡಿಟ್ ಬಳಕೆದಾರರೊಬ್ಬರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಈತ ಪರಿಹಾರ ನೀಡುವ ಬದಲು ಆತನ ವಿಳಾಸ ನೀಡಿದ್ದರೆ ಇನ್ಶ್ಯೂರೆನ್ಸ್ (Insurence)ಪಡೆಯುವುದಕ್ಕಾದರೂ ಸಹಾಯ ಆಗುತ್ತಿತ್ತು ಎಂದು ಈಗ ಕಾರು ಮಾಲೀಕ ಅವಲತ್ತುಕೊಂಡಿದ್ದಾನೆ. nothingbetter85 ಎಂಬ ರೆಡಿಟ್ ಬಳಕೆದಾರರೊಬ್ಬರು ಈ ಘಟನೆಯನ್ನು ಬರೆದುಕೊಂಡು ನೆಟ್ಟಿಗರಲ್ಲಿ ಅವಲೊತ್ತುಕೊಂಡಿದ್ದಾರೆ. ತನ್ನ ಕಾರಿಗೆ ಡಿಕ್ಕಿ ಹೊಡೆದ ವ್ಯಕ್ತಿ ಬಿಟ್ಟು ಹೋದ ಬರಹದ ನೋಟ್ ಹಾಗೂ ತನ್ನ ಹಾನಿಯಾದ Nissan ಕಾರಿನ ಪೋಟೋವನನ್ನು ಆತ ಪೋಸ್ಟ್ ಮಾಡಿಕೊಂಡು ದುಃಖ ತೊಡಿಕೊಂಡಿದ್ದಾನೆ. ಫ್ಲೋರಿಡಾದ ಬೇಲೇಕ್ (Bay Lake) ವಾಲ್ಟ್‌ ಡಿಸ್ನಿ ವರ್ಲ್ಡ್‌ ರೆಸಾರ್ಟ್‌ನಲ್ಲಿ (Walt Disney World Resort ) ಘಟನೆ ನಡೆದಿದೆ. 
 

ತನ್ನ ನಜ್ಜುಗುಜ್ಜಾದ ಕಾರು (Damaged car) ನೋಡಿದ ಆತ, ಸೀದಾ ಹೋಗಿ ಫ್ಲೋರಿಡಾ ಹೈವೇ ಪಟ್ರೋಲ್ (FHP)ಗೆ ದೂರು ನೀಡಿದ್ದಾನೆ. ಆದರೆ ಕಾರನ್ನು ಅಲ್ಲಿಂದ ತೆಗೆಯುವವರೆಗೂ ಹೈವೇ ಪಟ್ರೋಲ್ ಯಾವೊಬ್ಬ ತಮ್ಮ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿಕೊಟ್ಟಿಲ್ಲ. ಅಲ್ಲದೇ ಘಟನೆಯ ದೃಶ್ಯಾವಳಿಯನ್ನು ಪರಿಶೀಲಿಸಿದ ಬಳಿಕವಷ್ಟೇ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರಂತೆ. ಆದರೆ ವಾಹನಕ್ಕೆ ಅಪಘಾತದಿಂದಾಗ ಹಾನಿಯಾದರೆ ಕೇಸು ದಾಖಲಾದರಷ್ಟೇ ಪರಿಹಾರ ಸಿಗುವುದು. 

ಕಾರು ಡಿಕ್ಕಿ ಹೊಡೆದ ರಭಸಕ್ಕೆ ದೂರ ಚಿಮ್ಮಿದ ಮಹಿಳೆ: ಅಪಘಾತದ ದೃಶ್ಯ ವೈರಲ್

ಈತನ ಕತೆ ಕೇಳಿದ ನೆಟ್ಟಿಗರು ಈತನ ಬಗ್ಗೆ ಅನುಕಂಪ ತೋರಿದ್ದಾರೆ. ಅಲ್ಲದೇ ಮತ್ತೆ ಕೆಲವರು ಆತನಿಗೆ ಸಹಾಯಕವಾಗುವಂತಹ ಸಲಹೆ ನೀಡಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಕರೆಯುವ ಮೊದಲು ನಿಮಗೆ ವಿಮಾ ಸೌಲಭ್ಯವನ್ನು ಒದಗಿಸುವವರನ್ನು ಘಟನಾ ಸ್ಥಳಕ್ಕೆ ಕರೆಸಿರಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೇವಲ 100 ಡಾಲರ್ ಯಾವುದಕ್ಕೂ ಸಾಲುವುದಿಲ್ಲ. ನನ್ನ ಕಾರು ಕೂಡ ಇದೇ ರೀತಿ ಡ್ಯಾಮೇಜ್ ಆಗಿತ್ತು. ಅದಕ್ಕೆ 8600 ಡಾಲರ್ ಪರಿಹಾರ ಬೇಕಾಗುವುದು ಎಂದು ವಿಮಾ ಕಂಪನಿ ಹೇಳಿಕೊಂಡಿತ್ತು ಎಂದು ಹೇಳಿಕೊಂಡಿದ್ದಾರೆ.  ಒಟ್ಟಿನಲ್ಲಿ ಆತ ಪರಿಹಾರ ನೀಡುವ ಬದಲು ತನ್ನ ವಿಳಾಸ ನೀಡಿದರೆ ಚೆನ್ನಾಗಿರುತ್ತಿತ್ತು ಎಂದು ಹಲುಬುತ್ತಿದ್ದಾನೆ ಕಾರಿನ ಮಾಲೀಕ

ಪ್ರಾಮಾಣಿಕನಾ... ಲ್ಯಾಪ್‌ಟಾಪ್ ಎಗರಿಸಿ ಮಾಲೀಕನಿಗೆ ಕ್ಷಮಿಸಿ ಎಂದು ಮೇಲ್ ಮಾಡಿದ ಕಳ್ಳ

 

Follow Us:
Download App:
  • android
  • ios