ವಿಡಿಯೋ ವೈರಲ್ ಆಗೋದಕ್ಕೆ ಏನೇನೋ ಸರ್ಕಸ್ ಮಾಡೋ ಜನರ ಮಧ್ಯೆ ಯುವಕನೊಬ್ಬ ಏನೂ ಮಾಡದೇ ಇದ್ರೂ ಭಾರೀ ವೈರಲ್ ಆಗಿದ್ದಾನೆ. ಏನೂ ಮಾಡದೇ ಬರೀ ಕ್ಯಾಮೆರಾವನ್ನೇ ದಿಟ್ಟಿಸುತ್ತಾ ಕುಳಿತ ಯುವಕ ಈ ಮೂಲಕ ಹೀಗೂ ವೈರಲ್ ಆಗ್ಬೋದು ಎಂದು ತೋರಿಸಿಕೊಟ್ಟಿದ್ದಾನೆ.

2 ಗಂಟೆ ಏನೂ ಮಾಡದಿರುವುದು ಎಂಬ ಹೆಸರಿನವಿಡಿಯೋವನ್ನು ಯೂಟ್ಯೂಬರ್ ಒಬ್ಬ ಶೇರ್ ಮಾಡಿಕೊಂಡಿದ್ದಾನೆ. ಇದನ್ನು ಮಾಡಿದ್ದು ಇಂಡೋನೇಷ್ಯಾದ ಯೂಟ್ಯೂಬರ್ ಮಹಮ್ಮದ್ ದಿದಿತ್.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡದಲ್ಲಿ ಪ್ರಚಾರ!

ಈತನ ಯೂಟ್ಯೂಬ್ ಫಾಲೋವರ್ಸ್ ರಿಕ್ವೆಸ್ಟ್ ಮೇರೆಗೆ ಯುವಕ ವಿಡಿಯೋ ಮಾಡಿದ್ದಾನೆ. ಸುಶಿಕ್ಷಿತ ಯೂತ್‌ಗೆ ಸಂಬಂಧಿಸಿದಂತೆ ವಿಡಿಯೋ ಹಾಕಿ ಎಂದು ಆತನ ಫಾಲೋವರ್ಸ್ ಒತ್ತಾಯಿಸಿದ್ದರು. ಅಂತೂ ಸುಮ್ಮನೆ ಕುಳಿತ ವಿಡಿಯೋ ಒಂದನ್ನು ಹಾಕಿ ಈತ ವೈರಲ್ ಆಗಿದ್ದಾನೆ.

ವಿಡಿಯೋ ಡಿಸ್ಕ್ರಿಪ್ಶನ್ ಬರೆದಿರುವ ಯುವಕ, ಓಕೆ. ಈ ವಿಡಿಯೋ ಶೇರ್ ಮಾಡಿರುವುದರ ಬಗ್ಗೆ ನಿಮಗೆ ಸ್ವಲ್ಪ ತಿಳಿಸಬೇಕು. ಇದು ಸುಶಿಕ್ಷಿತ ಯುವ ಜನರಿಗಾಗಿರುವ ವಿಡಿಯೋ ಎಂದಿದ್ದಾನೆ.

ದೇಶವಾಸಿಗಳ ಆಪ್ತರಕ್ಷಕ ಮೋದಿ: ಈ ವಿಚಾರದಲ್ಲಿ ಅಮೆರಿಕಾ, ಕೆನಡಾವನ್ನೇ ಹಿಂದಿಕ್ಕಿದ ಭಾರತದ ಪಿಎಂ!

ಈಗಾಗಲೇ ಸುಮಾರು 1.7 ಮಿಲಿಯನ್ ಜನರು ಈತನ ವಿಡಿಯೋ ವೀಕ್ಷಿಸಿದ್ದಾರೆ. ಕೆಲವರು ಇದನ್ನು ಧ್ಯಾನ ಎಂದು ಕರೆದಿದ್ದರೆ ಇನ್ನು ಕೆಲವರು ಆತ ವಿಡಿಯೋ ಮಾಡೋವಾಗ ಏನು ಯೋಚಿಸ್ತಿದ್ದ ಎಂದು ಪ್ರಶ್ನಿಸಿದ್ದಾರೆ.