ಲಿಥಿಯಂ ಬ್ಯಾಟರಿ ಕೊಂಡೊಯ್ಯುತ್ತಿರುವಾಗ ಲಿಫ್ಟ್‌ನಲ್ಲೇ ಸ್ಫೋಟಗೊಂಡು ಭಸ್ಮ: ಕೊನೆ ಕ್ಷಣ ವಿಡಿಯೋ!
ವ್ಯಕ್ತಿಯೊಬ್ಬ ಲೀಥಿಯಂ ಬ್ಯಾಟರಿ ಹಿಡಿದು ಲಿಫ್ಟ್ ಒಳಪ್ರವೇಶಿಸಿದ ಬೆನ್ನಲ್ಲೇ ಸ್ಫೋಟಗೊಂಡಿದೆ. ಪರಿಣಾಮ ವ್ಯಕ್ತಿ ಸಂಪೂರ್ಣ ಬೂದಿಯಾದ ಭಯಾನಕ ದೃಶ್ಯ ಹಲವು ಎಚ್ಚರಿಕೆ ಸಂದೇಶ ನೀಡುತ್ತಿದೆ.
ಎಲೆಕ್ಟ್ರಿಕ್ ವಾಹನ, ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಲಿಥಿಯಂ ಬ್ಯಾಟರಿ ಬಳಸಲಾಗುತ್ತಿದೆ. ಬ್ಯಾಟರಿ ಕುರಿತು ಈಗಾಗಲೇ ಹಲವು ಆತಂಕ, ಅನುಮಾನಗಳು ಹುಟ್ಟುತಲೇ ಇದೆ. ಇದಕ್ಕೆ ಪೂರಕವಾಗಿ ಕೆಲ ಘಟನೆಗಳು ಲಿಥಿಯಂ ಬ್ಯಾಟರಿಯಿಂದ ದೂರ ಇರುವಂತೆ ಮಾಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ಪೋರ್ಟೆಬಲ್ ಲಿಥಿಯಂ ಬ್ಯಾಟರಿ ಕೈಯಲ್ಲಿ ಹಿಡಿದು ಲಿಫ್ಟ್ ಪ್ರವೇಶಿಸಿದ್ದಾನೆ. ಲಿಫ್ಟ್ ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆ ಬ್ಯಾಟರಿ ಸ್ಫೋಟಗೊಂಡಿದೆ. ವ್ಯಕ್ತಿ ಉದ್ದೇಶಿದ ಮಹಡಿ ತಲುಪುವಾಗ ವ್ಯಕ್ತಿ ಬೂದಿಯಾಗಿದ ಘಟನೆ ವಿಡಿಯೋ ಭಾರಿ ವೈರಲ್ ಆಗಿದೆ.
ಇದು ಭಯಾನಕ ವಿಡಿಯೋ. ಈ ವಿಡಿಯೋ ಕೆಲ ಎಚ್ಚರಿಕೆ ಸಂದೇಶವನ್ನು ನೀಡುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬಳಸುವ ರೀತಿಯ ಬ್ಯಾಟರಿ ಒಂದನ್ನು ಹಿಡಿದು ಲಿಫ್ಟ್ ಬಳಿ ಬಂದಿದ್ದಾನೆ. ಲಿಫ್ಟ್ ಬಾಗಿಲು ಓಪನ್ ಆದ ಬೆನ್ನಲ್ಲೇ ಒಳ ಪ್ರವೇಶಿಸಿ ಉದ್ದೇಶಿತ ಮಹಡಿ ತಲುಪಲು ಫ್ಲೋರ್ ನಂಬರ್ ಪ್ರೆಸ್ ಮಾಡಿದ್ದಾನೆ. ಲಿಫ್ಟ್ ಬಾಗಿಲು ಮುಚ್ಚಿಕೊಂಡಿದೆ. ಲಿಫ್ಟ್ ಚಲಿಸಲು ಆರಂಭಿಸುತ್ತಿದ್ದಂತೆ ಲಿಥಿಯಂ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮಂಡ್ಯದಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಸುಟ್ಟು ಕರಕಲಾದ ಗೃಹಬಳಕೆ ವಸ್ತುಗಳು
ತಕ್ಷಣವೇ ವ್ಯಕ್ತಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಮುಂದಿನ ಮಹಡಿ ಫ್ಲೋರ್ ನಂಬರ್ ಪ್ರೆಸ್ ಮಾಡಿ ಪ್ರಾಣ ಉಳಿಸಲು ಪ್ರಯತ್ನಿಸಿದ್ದಾನೆ. ಆದರೆ ಲಿಥಿಯಂ ಬ್ಯಾಟರಿ ಏಕಾಏಕಿ ಸ್ಫೋಟಗೊಂಡಿದೆ. ಲಿಫ್ಟ್ ಒಳಗೆ ಏನು ಮಾಡಲು ಸಾಧ್ಯವಾಗದ ವ್ಯಕ್ತಿ ಬೆಂಕಿಯ ಸ್ಫೋಟ ಹಾಗೂ ಬೆಂಕಿಯ ಕೆನ್ನಾಲಗೆಗೆ ಬೂದಿಯಾಗಿದ್ದಾನೆ.
Lithium battery explodes in a Chinese elevator 😂 pic.twitter.com/s4QIXS9mGu
— GORE CLIPS 🔞 (@bestGOREclips) July 26, 2024
ಇತ್ತ ಬೇರೆ ಮಹಡಿಯಲ್ಲಿ ಇದೇ ಲಿಫ್ಟ್‌ಗಾಗಿ ಕಾಯುತ್ತಿದ್ದ ಇತರರು ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆ ಗಾಬರಿಯಾಗಿದ್ದಾರೆ. ಬೆಂಕಿ, ಹೊಗೆ, ಇದರ ನಡುವೆ ಕರಕಲು ದೇಹ ನೋಡಿ ತಕ್ಷಣವೇ ಭದ್ರತಾ ಸಿಬ್ಬಂದಿಗಳನ್ನು ಕೂಗಿದ್ದಾರೆ. ಭದ್ರತಾ ಸಿಬ್ಬಂದಿಗಳು ಬಂದು ಲಿಫ್ಟ್ ತೆರೆದು ನೋಡಿದಾಗ ಎಲ್ಲವೂ ಭಸ್ಮವಾಗಿದೆ.
ಈ ವಿಡಿಯೋ ಲಿಥಿಯಂ ಬ್ಯಾಟರಿ ಕುರಿತ ಆತಂಕ ಮತ್ತಷ್ಟು ಹೆಚ್ಚಿಸಿದೆ. ಅನಧಿಕೃತ, ಕಡಿಮೆ ಬೆಲೆ, ಸಂಶೋಧನೆ ಮಾಡದ ಕಂಪನಿಗಳ ಬ್ಯಾಟರಿ ಬಳಕೆ ಮಾಡುವಾಗ ಎಚ್ಚರ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಲಿಥಿಯಂ ಬ್ಯಾಟರಿ ಬಳಸುವಾಗ ಅತೀವ ಎಚ್ಚರ ವಹಿಸಬೇಕು. ಸ್ಫೋಟಗೊಳ್ಳುವ ಸಾಧ್ಯೆತೆ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಬ್ಯಾಟರಿ ಸ್ಫೋಟ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿದೆ. ಹೀಗಾಗಿ ಜನರು ಬ್ಯಾಟರಿ ಬಳಕೆ, ಸಾಧಕ ಬಾಧಕ ಕುರಿತು ಗಮನಹರಿಸಬೇಕು ಎಂದು ಹಲವರು ಸಲಹೆ ನೀಡಿದ್ದಾರೆ.
Phone Battery: ಚಾರ್ಜ್ ಆಗುತ್ತಿದ್ದ ಅಮ್ಮನ ಫೋನ್ ಸ್ಫೋಟ: ಬಲಿಯಾದ 8 ತಿಂಗಳ ಕಂದಮ್ಮ
⚠️ Scary and sensitive content.
Yesterday in China, a young man with a lithium battery entered an elevator. The battery unexpectedly caught fire, burning the elevator and the man inside completely.
pic.twitter.com/h39MKtKSIo
— Tom Valentino (@TomValentinoo) July 25, 2024