Asianet Suvarna News Asianet Suvarna News

ಮಂಡ್ಯದಲ್ಲಿ ಚಾರ್ಜ್‌ ಹಾಕಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ಸ್ಫೋಟ: ಸುಟ್ಟು ಕರಕಲಾದ ಗೃಹಬಳಕೆ ವಸ್ತುಗಳು

ಮನೆಯಲ್ಲಿ ಚಾರ್ಜಿಂಗ್‌ ಮಾಡಲು ಹಾಕಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ಸ್ಪೋಟಗೊಂಡು ಬೈಕ್‌ ಸೇರಿದಂತೆ, ಮನೆಯಲ್ಲಿನ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ನಡೆದಿದೆ.

Electric scooter blast in Mandya Household items also burnt sat
Author
First Published Mar 13, 2023, 1:53 PM IST

ಮಂಡ್ಯ (ಮಾ.13): ಮನೆಯಲ್ಲಿ ಚಾರ್ಜಿಂಗ್‌ ಮಾಡಲು ಹಾಕಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ಸ್ಪೋಟಗೊಂಡು ಬೈಕ್‌ ಸೇರಿದಂತೆ, ಮನೆಯಲ್ಲಿನ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಮುತ್ತುರಾಜ್ ಎಂಬುವವರ ಮನೆಯಲ್ಲಿ ಪ್ರತಿನಿತ್ಯ ಸ್ಕೂಟರ್‌ ಅನ್ನು ಚಾರ್ಜಿಗೆ ಹಾಕುವಂತೆ ನಿನ್ನೆಯೂ ಕೂಡ ಎಲೆಕ್ಟ್ರಿಕ್‌ ಬ್ಯಾಟರಿಚಾಲಿತ ಸ್ಕೂಟರ್‌ ಅನ್ನು ಮನೆಯಲ್ಲಿ ಚಾರ್ಜಿಂಗ್‌ ಮಾಡಲು ಹಾಕಲಾಗಿದೆ. ಆದರೆ, ರಾತ್ರಿವೇಳೆ ಚಾರ್ಜ್ ಹಾಕಿದ್ದ ಸ್ಕೂಟರ್‌ ಕೆಲವೇ ಗಂಟೆಗಳಲ್ಲಿ ಸ್ಫೋಟಗೊಂಡಿದೆ. ಈ ಸ್ಫೋಟದಿಂದ‌ ಬೈಕ್‌ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿದ್ದ ಇತರೆ ಗೃಹೋಪಯೋಗಿ ವಸ್ತುಗಳೂ ಕೂಡ  ಸುಟ್ಟು ಕರಕಲಾಗಿವೆ. ಇದರಿಂದ ಮನೆಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

Raichur: ಮನೆಯಲ್ಲಿನ ಎಸಿ ಶಾರ್ಟ್ ಸಕ್ಯೂಟ್ ನಿಂದ ಸ್ಫೋಟ, ಮಂಡ್ಯದ ಮೂವರು ಸಜೀವ ದಹನ

ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರು: ಇನ್ನು ಎಲೆಕ್ಟ್ರಿಕ್‌ ಬ್ಯಾಟರಿ ಹೊಂದಿದ ಬೈಕ್‌ ಅನ್ನು ಮನೆಯ ಒಳಗಡೆ ನಿಲ್ಲಿಸಲಾಗುತ್ತಿತ್ತು. ಮನೆಯ ಒಳಗೆ ಒಂದು ಮೂಲೆಯಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಬಳಿ ಬೈಕ್‌ ನಿಲ್ಲಿಸಿ ಮುತ್ತುರಾಜ್‌ ಚಾರ್ಜ್‌ಗೆ ಹಾಕಿದ್ದನು. ಇದಕ್ಕಿದ್ದ ಹಾಗೆ ಸ್ಕೂಟರ್ ಸ್ಫೋಟಗೊಂಡಿದೆ. ಇನ್ನು ಈ ಬೈಕ್‌ ಸ್ಪೋಟಗೊಂಡ ಸಂದರ್ಭದಲ್ಲಿ ಮನೆಯೊಳಗೆ ಕುಟುಂಬದ ಐವರು ಸದಸ್ಯರು ಇದ್ದರು. ಆದರೆ, ಸ್ಪೋಟದ ಪರಿಣಾಮ ಒಮದು ಕೋಣೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ಮಾತ್ರ ಹಾನಿಗೊಳಿಸಲು ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಎಲ್ಲ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಲೆಕ್ಟ್ರಿಕ್‌ ಸಾಮಾಗ್ರಿಗಳೆಲ್ಲವೂ ನಾಶ: ಇನ್ನು ಮನೆಯಲ್ಲಿ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಬ್ಯಾಟರಿಯ ಸ್ಕೂಟರ್‌ ಸ್ಪೋಟ ಆಗುತ್ತಿದ್ದಂತೆ, ಮನೆಯಲ್ಲಿನ ಎಲ್ಲ ವಿದ್ಯುತ್‌ ಸಂಪರ್ಕಿಸುವ ವೈರಿಂಗ್‌ ಸುಟ್ಟು ಹಾನಿಗೀಡಾಗಿದೆ. ಇದರಿಂದ ಎಲೆಕ್ಟ್ರಿಕ್‌ ಸಾಧನಗಳಾದ ಟಿವಿ, ಫ್ರಿಡ್ಜ್, ಫ್ಯಾನ್‌ಗಳು ಹಾಘೂ ಬಲ್ಪ್‌ಗಳು ಸಂಪೂರ್ಣ ಹಾನಿಗೀಡಾಗಿವೆ. ಇನ್ನು ಸ್ಕೂಟರ್‌ ಪಕ್ಕದಲ್ಲಿಯೇ ಇದ್ದ ಡೈನಿಂಗ್‌ ಟೇಬಲ್‌ ಸೇರಿ ಅನೇಕ ಕಟ್ಟಿಗೆಯಿಂದ ಮಾಡಲಾದ ವಸ್ತುಗಳು ಕೂಡ ಸುಟ್ಟು ಕರಕಲಾಗಿವೆ. ಇನ್ನು ಮನೆಯಲ್ಲಿದ್ದ ಇತರೆ ವಸ್ತುಗಳು ಬೇರೆಡೆ ಇದ್ದುದರಿಂದ ದೊಡ್ಡ ಪ್ರಮಾಣದಲ್ಲಿ ಅನಾಹುತ ಆಗುವುದು ತಪ್ಪಿದಂತಾಗಿದೆ.

ಬೆಂಕಿ ನಂದಿಸಿದ ನೆರೆಹೊರೆ ನಿವಾಸಿಗಳು: ಚಾರ್ಜಿಗೆ ಹಾಕಿದ್ದ ಸ್ಕೂಟರ್‌ ಸ್ಪೋಟಕ್ಕೆ ಇಡೀ ಬೀದಿಯಲ್ಲಿ ದೊಡ್ಡ ಪ್ರಮಾಣದ ಶಬ್ದ ಉಂಟಾಗಿದೆ. ಎಲ್ಲರೂ ಬಂದು ನೋಡುವಷ್ಟರಲ್ಲಿ ಮುತ್ತುರಾಜ್‌ ಅವರ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಮನೆಯವರು ಹಾಗೂ ಇತರೆ ನೆರೆಹೊರೆಯವರು ಸೇರಿಕೊಂಡು ನೀರಿನಿಂದ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ನಂತರ, ಮನೆಗೆ ಸಂಪರ್ಕ ಮಾಡಲಾಗಿದ್ದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇನ್ನು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ಯಾಸ್‌ ಹಾಗೂ ಇತರೆ ಬೆಂಕಿಯ ಜ್ವಾಲೆ ಹೆಚ್ಚಾಗುವಂತಹ ವಸ್ತುಗಳನ್ನು ಮನೆಯಿಂದ ಹೊರಗೆ ತರಲಾಗಿತ್ತು.

Bengaluru: ಅಕ್ರಮ ಗ್ಯಾಸ್‌ ರೀಫಿಲ್ಲಿಂಗ್‌ ವೇಳೆ ಸಿಲಿಂಡರ್‌ ಸ್ಫೋಟಕ್ಕೆ ಬಾಲಕ ಬಲಿ!

ಕುಟುಂಬ ಸದಸ್ಯರಲ್ಲಿ ಆತಂಕ: ಎಲೆಕ್ಕ್ರಿಕ್‌ ಚಾರ್ಜಿಂಗ್‌ ಸ್ಕೂಟರ್‌ಗಳು ಹಾಗೂ ಬೈಕ್‌ಗಳು ದೇಶದ ವಿವಿಧೆಡೆ ಸಿಡಿದು ಸ್ಪೋಟಗೊಂಡಿರುವ ಹಲವು ಘಟನೆಗಳು ವರದಿಯಾಗಿದ್ದವು. ಆದರೂ, ಇಂಧನ ಉಳಿತಾಯ ಹಾಗೂ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಬ್ಯಾಟರಿ ಚಾಲಿತ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಬಳಸಲು ಮುಂದಾಗಿದ್ದಾರೆ. ಈ ಬಗ್ಗೆ ಸರ್ಕಾರ ಕೂಡ ಪರಿಶೀಲನೆ ಮಾಡಿದ್ದು, ಎಲೆಕ್ಟ್ರಿಕ್‌ ಚಾರ್ಜಿಂಗ್‌ ಬ್ಯಾಟರಿ ಚಾಲಿತ ವಾಹನಗಳಿಗೆ ಪ್ರೋತ್ಸಾಹಧನ ಕೂಡ ನೀಡುತ್ತಿದೆ. ಆದರೆ, ಈಗ ಚಾರ್ಜಿಗೆ ಹಾಕಿದ್ದ ಸ್ಕೂಟರ್‌ ಸ್ಪೋಟಗೊಂಡಿದ್ದು, ಮಂಡ್ಯ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Follow Us:
Download App:
  • android
  • ios