Phone Battery: ಚಾರ್ಜ್‌ ಆಗುತ್ತಿದ್ದ ಅಮ್ಮನ ಫೋನ್‌ ಸ್ಫೋಟ: ಬಲಿಯಾದ 8 ತಿಂಗಳ ಕಂದಮ್ಮ

ಚಾರ್ಜ್‌ ಆಗುತ್ತಿದ್ದ ಫೋನ್‌ ಬ್ಯಾಟರಿ ಓವರ್‌ ಹೀಟ್‌ ಆಗಿ ಸ್ಫೋಟಗೊಂಡು 8 ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. 

8 month old baby dies after lava phone battery explodes while charging in uttar pradesh bareilly ash

ಲಾವಾ ಫೋನ್‌ನ (Lava Phone) ಬ್ಯಾಟರಿ ಸ್ಫೋಟಗೊಂಡು ಪಕ್ಕದಲ್ಲಿದ್ದ 8 ತಿಂಗಳ ಕಂದಮ್ಮ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಭಾನುವಾರ ನಡೆದಿದೆ. 6 ತಿಂಗಳ ಹಿಂದೆ ತೆಗೆದುಕೊಳ್ಳಲಾಗಿದ್ದ ಕೀಪ್ಯಾಡ್‌ ಫೋನ್‌ನ ಬ್ಯಾಟರಿ ಈ ಹಿಂದೆಯೇ ಊದಿಕೊಂಡಿತ್ತು ಎನ್ನಲಾಗಿದೆ. ಅಲ್ಲದೆ, ಸೋಲಾರ್‌ ಪ್ಯಾನೆಲ್‌ಗೆ ಸಂಪರ್ಕ ಹೊಂದಿದ ಪ್ಲಗ್‌ನಿಂದ ಚಾರ್ಜ್‌ ಮಾಡಲಾಗುತ್ತಿತ್ತು ಎಂದೂ ಈ ಘಟನೆ ಬಗ್ಗೆ ಮಾಹಿತಿ ಇರುವವರು ಹೇಳಿದ್ದಾರೆ. ಘಟನೆ ನಡೆದ ಸಮಯದಲ್ಲಿ ಮೃತ ಮಗು ನೇಹಾ ತಾಯಿ ಕುಸುಮ್‌ ಕಶ್ಯಪ್‌ ಆ ಕೊಠಡಿಯಲ್ಲಿ ಇರಲಿಲ್ಲ. ಬಳಿಕ ಶಬ್ದವನ್ನು ಕೇಳಿ ಹಾಗೂ, ಸ್ಥಳದಲ್ಲಿದ್ದ ಇನ್ನೊಬ್ಬ ಮಗಳು ನಂದಿನಿ ಅಳುತ್ತಾ ಅಮ್ಮನನ್ನು ಕರೆದಿದ್ದರಿಂದ ತಾಯಿ ಓಡಿ ಬಂದರು ಎಂದು ತಿಳಿದುಬಂದಿದೆ. ಆ ವೇಳೆ ಮಗಳಿಗೆ ಸುಟ್ಟ ಗಾಯಗಳಾಗಿತ್ತು ಹಾಗೂ ಕೆಳಕ್ಕೆ ಬಿದ್ದಿದ್ದಳು ಎಂದೂ ಹೇಳಲಾಗಿದೆ. 

ನಂತರ, 8 ತಿಂಗಳ ಕಂದಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ವೇಳೆ ಮಗು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಪೋಷಕರ ನಿರ್ಲಕ್ಷತೆಯೇ ಈ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದು, ಆದರೆ ಈವರೆಗೆ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ. 

Secunderabad: ಇ-ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 8 ಸಾವು, ಮೇಲಿನ ಮಹಡಿಗಳಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿದ ಹಲವರು

ಮಗುವಿನ ತಾಯಿ 30 ವರ್ಷದ ಸುನೀಲ್‌ ಕುಮಾರ್‌ ಕಶ್ಯಪ್‌, ಪಚೋಮಿ ಗ್ರಾಮದ ನಿವಾಸಿಯಾಗಿದ್ದಾರೆ. ಅವರ ಮನೆಯಲ್ಲಿ ವಿದ್ಯುತ್‌ ಸಂಪರ್ಕವೇ ಇಲ್ ಹಾಗೂ ಇವರು ಫರೀದ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುನೀಲ್‌ ಕುಮಾರ್ ಕಶ್ಯಪ್‌ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರ ಕುಟುಂಬ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ಲೈಟ್‌ ಮತ್ತು ಫೋನ್‌ಗಳನ್ನು ಚಾರ್ಜ್ ಮಾಡಲು ಸೋಲಾರ್ ಪ್ಲೇಟ್‌ ಹಾಗೂ ಬ್ಯಾಟರಿಯ ನೆರವು ಪಡೆದುಕೊಳ್ಳುತ್ತದೆ. 
 
ಘಟನೆ ನಡೆದ ವೇಳೆ ಸುನೀಲ್‌ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಕುಸುಮ್‌, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲೇ ಇದ್ದರು. ಮಧ್ಯಾಹ್ನದ ಊಟವಾದ ಬಳಿಕ ಇಬ್ಬರು ಮಕ್ಕಳನ್ನು ಮಂಚದ ಮೇಲೆ ಮಲಗಿಸಿ 8 ತಿಂಗಳ ಕಂದಮ್ಮ ಮಲಗಿದ್ದ ಮಂಚದ ಬಳಿ ಫೋನ್‌ ಅನ್ನು ಚಾರ್ಜ್‌ಗೆ ಹಾಕಲಾಗಿತ್ತು ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಮಾಃಇತಿ ನೀಡಿದ ಮೃತ ಮಗುವಿನ ತಾಯಿ, ‘’ನಾನು ನೆರೆಹೊರೆಯವರೊಂದಿಗೆ ಮಾತನಾಡುತ್ತಿದ್ದಾಗ, ನನ್ನ ಮಗಳು ನಂದಿನಿ ಸಹಾಯಕ್ಕಾಗಿ ಕೂಗಿದಳು. ಮೊಬೈಲ್‌ ಸ್ಫೋಟಗೊಂಡು ಮಂಚ ಸುಟ್ಟುಹೋಗಿತ್ತು. ನೇಹಾಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ನನ್ನ ಫೋನ್‌ ನನ್ನ ಮಗಳ ಪಾಲಿಗೆ ಮೃತ್ಯವಾಗುತ್ತದೆ ಎಂದು ನಾನೆಂದೂ ಅಂದುಕೊಂಡಿರಲಿಲ್ಲ. ಇಲದಲದಿದ್ದರೆ, ನಾನು ಅದನ್ನು ಮಗುವಿನ ಬಳಿ ಇಡುತ್ತಿರಲಿಲ್ಲ ಎಂದು ತಾಯಿ ಅಳುತ್ತಾ ಹೇಳಿಕೊಂಡಿದ್ದಾರೆ. 

ಇನ್ನು, ಮಗುವಿನ ತಂದೆ ಸುನೀಲ್‌ ಅವರ ತಮ್ಮ, ‘’ನಾವು ಬಡವರಾಗಿದ್ದು, ಈ ಹಿನ್ನೆಲೆ ಕೀಪ್ಯಾಡ್‌ ಫೋನ್‌ಗಳನ್ನು ಬಳಸುತ್ತಿದ್ದೇವೆ. ಹಾಗೂ, ಯುಎಸ್‌ಬಿ ಕೇಬಲ್‌ ಮೂಲಕ ಫೋನ್‌ ಚಾರ್ಜ್‌ ಆಗುತ್ತಿತ್ತು, ಆದರೆ ಅಡಾಪ್ಟರ್‌ಗೆ ಕನೆಕ್ಟ್‌ ಮಾಡಿರಲಿಲ್ಲ. ಈ ಹಿನ್ನೆಲೆ ಫೋನ್‌ ಸುಟ್ಟು ಹೋಯಿತು. ನೇಹಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನನ್ನ ಸಹೋದರನ ಬಳಿ ಹಣವಿಲ್ಲ. ಇಲ್ಲದಿದ್ದರೆ, ಮಗುವಿನ ಜೀವ ಉಳಿಯುತ್ತಿತ್ತೇನೋ’’ ಎಂದು ದು:ಖ ತೋಡಿಕೊಂಡಿದ್ದಾರೆ.  

Bengaluru: ಸೂಪರ್‌ ಮಾರ್ಕೆಟ್‌ಗೆ ಆಕಸ್ಮಿಕ ಬೆಂಕಿ: ಕೋಟ್ಯಾಂತರ ಮೌಲ್ಯದ ವಸ್ತು ನಾಶ
 
ಘಟನೆ ಬಗ್ಗೆ ತಿಳಿಸಿದ ಫರೀದ್‌ಪುರ ಪೊಲೀಸ್‌ ಠಾಣೆಯ ಸ್ಟೇಷನ್‌ ಹೌಸ್‌ ಆಫೀಸರ್‌ ಹರ್ವೀರ್‌ ಸಿಂಗ್‌, ‘’ಕುಟುಂಬ ದೂರು ನೀಡಲು ನಿರಾಕರಿಸಿದೆ ಹಾಗೂ ಪೋಸ್ಟ್‌ಮಾರ್ಟಮ್‌ ಬಳಿಕ ಮಗುವಿನ ಮೃತದೇಹವನ್ನು ಅವರಿಗೆ ನೀಡಲಾಗಿದೆ. ಮೊಬೈಲ್‌ ಸ್ಫೋಟಗೊಂಡು ಹೆಣ್ಣು ಮಗುವಿಗೆ ಗಾಯವಾಗಿತ್ತು ಎಂದು ನಮ್ಮ ತನಿಖಾ ತಂಡ ಪತ್ತೆ ಹಚ್ಚಿದೆ. ಅವರ ಕುಟುಂಬ ಸಹ ಈ ಸಂಬಂಧ ಯಾವುದೇ ದೂರು ನೀಡಲು ನಿರಾಕರಿಸಿದೆ’’ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios