ಮನಿಲಾ(ಡಿ.07): ಫಿಲಿಪೈನ್ಸ್'ನಲ್ಲಿ ಮಹಿಳೆಯೋರ್ವಳ ಶಿರಚ್ಛೇದನ ಮಾಡಿ ನಂತರ ಆಕೆಯ ಮೆದುಳನ್ನು ಅನ್ನದದೊಂದಿಗೆ ಬೆರೆಸಿ ಸೇವಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ಇಲ್ಲಿನ ಮಿಂಡಾನಾವೊ ದ್ವೀಪದಲ್ಲಿ ಅಪರಿಚಿತ ಮಹಿಳೆಯ ಭಾಗಶಃ ಕತ್ತರಿಸಿದ ಮೃತದೇಹ ಪತ್ತೆಯಾಗಿದ್ದು, ಮಹಿಳೆ ಕೊಲೆ ಆರೋಪದ ಮೇಲೆ 21 ವರ್ಷದ ಲಾಯ್ಡ್ ಬಾಗ್ಟೊಂಗ್ ಎಂಬ ಯುವಕನನ್ನು ಬಂಧಿಸಲಾಗಿದೆ.

ಹುಟ್ಟು ಹಬ್ಬದ ದಿನ ಹುಟ್ಟಿಸಿದಾಕೆಯನ್ನೇ ಕೊಂದ ಪಾಪಿ ಮಗ..!

ಮಹಿಳೆ ಇಂಗ್ಲಿಷ್‌ನಲ್ಲಿ ಮಾತನಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಕೊಂದು ಹಸಿವಾಗಿದ್ದರಿಂದ ಆಕೆಯ ಮೆದುಳನ್ನು ಅನ್ನದೊಂದಿಗೆ ಬೆರೆಸಿ ತಿಂದಿದ್ದಾಗಿ ಬಾಗ್ಟಾಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾನೆ.

ಕೊಲೆ ಸಂದರ್ಭದಲ್ಲಿ ಆರೋಪಿ ಬಾಗ್ಟಾಂಗ್ ಕುಡಿದ ಮತ್ತಿನಲ್ಲಿದ್ದು, ಮಹಿಳೆಯ ಕತ್ತರಿಸಿದ ತಲೆಯನ್ನು ಬ್ಯಾಗ್‌ನಲ್ಲಿ ಹೊತ್ತು ತಂದು ಮನೆಯಲ್ಲಿ ಅನ್ನದೊಂದಿಗೆ ಬೇಯಿಸಿ ತಿಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಓದಲು ಹೇಳಿ​ದ್ದಕ್ಕೆ 4ನೇ ತರಗತಿ ಬಾಲಕಿ ಆತ್ಮ​ಹ​ತ್ಯೆ