Asianet Suvarna News Asianet Suvarna News
breaking news image

ಕುರಾನ್‌ಗೆ ಬೆಂಕಿ ಹಚ್ಚಿದ್ದಕ್ಕೆ ಜೈಲಿನಿಂದ ಹೊರಗೆಳೆದು ಜೀವಂತ ಸುಟ್ಟ ಜನ!

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ಗೆ ಬೆಂಕಿ ಹಚ್ಚಿದ್ದ ಎಂಬ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಹಲ್ಲೆ ಮಾಡಿ ಜೀವಂತ ಸುಟ್ಟುಹಾಕಿದ ಹೇಯಘಟನೆ ಗುರುವಾರ ತಡರಾತ್ರಿ ಸ್ವಾತ್‌ ಪ್ರಾಂತ್ಯದಲ್ಲಿ ನಡೆದಿದೆ.

man burnt alive by mob over alleged blasphemy in swat Valley Pakistan rav
Author
First Published Jun 22, 2024, 7:55 AM IST

ಪೇಶಾವರ ಜೂ.22: ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ಗೆ ಬೆಂಕಿ ಹಚ್ಚಿದ್ದ ಎಂಬ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಹಲ್ಲೆ ಮಾಡಿ ಜೀವಂತ ಸುಟ್ಟುಹಾಕಿದ ಹೇಯಘಟನೆ ಗುರುವಾರ ತಡರಾತ್ರಿ ಸ್ವಾತ್‌ ಪ್ರಾಂತ್ಯದಲ್ಲಿ ನಡೆದಿದೆ.

 ಸ್ವಾತ್‌ನಲ್ಲಿ ಪ್ರವಾ)ಸಿಗನೊಬ್ಬ ಕುರಾನ್‌ ಗ್ರಂಥದ ಕೆಲವು ಹಾಳೆಗಳನ್ನು ಸುಟ್ಟುಹಾಕಿದ್ದ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತದ್ದಂತೆ ಸ್ಥಳೀಯ ಪೊಲೀಸರು ಆತನನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆತಂದಿದ್ದರು. ಆದರೆ ಕುರಾನ್ ಸುಟ್ಟ ವಿಚಾರವನ್ನ ಸ್ಥಳೀಯ ಧಾರ್ಮಿಕ ನಾಯಕರು ಮಸೀದಿಯ ಮೈಕ್‌ನಲ್ಲಿ ಬಹಿರಂಗವಾಗಿ ಘೋಷಣೆ ಮಾಡಿದ್ದರು. ಅದಾದ ಬೆನ್ನಲ್ಲೇ ನೂರಾರು ಜನರ ಗುಂಪು ಠಾಣೆಗೆ ನುಗ್ಗಿ ಆರೋಪಿಯನ್ನ ಹೊರಗೆ ಕರೆತಂದು ಆತನ ಮೇಲೆ ಹಲ್ಲೆ ನಡೆಸಿ, ನಗರದಾದ್ಯಂತ ಮೆರವಣಿಗೆ ಮಾಡಿ, ಗುಂಡು ಹಾರಿಸಿ ಬಳಿಕ ಜೀವಂತ ಸುಟ್ಟುಹಾಕಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮುಸ್ಲಿಂ ದೇಶ ತಜಕಿಸ್ತಾನದಲ್ಲಿ ಹಿಜಾಬ್‌ ನಿಷೇಧ: ಸಾರ್ವಜನಿಕ ಸ್ಥಳದಲ್ಲಿ ಧರಿಸಿದರೆ ₹5 ಲಕ್ಷದವರೆಗೂ ದಂಡ..!

Latest Videos
Follow Us:
Download App:
  • android
  • ios